ಬೆಂಗಳೂರು ಟೆಕ್ಕಿ ಅಪಹರಣ ಕೇಸ್: ರಹಸ್ಯ ಬೇಧಿಸಲು ಸಿಬಿಐ ವಿಫಲ, 3 ವರ್ಷವಾದರೂ ಸುಳಿವಿಲ್ಲ

ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಜಿತಾಬ್ ಕಣ್ಮರೆ ಪ್ರಕರಣ ನಡೆದು 3 ವರ್ಷಗಳೇ ಉರುಳಿದರೂ ಇದುವರೆಗೆ ಅವರ ಬಗ್ಗೆ ಯಾವೊಂದು ಸುಳಿವೂ ಲಭ್ಯವಾಗಿಲ್ಲ.
ಕುಮಾರ್ ಅಜಿತಾಬ್
ಕುಮಾರ್ ಅಜಿತಾಬ್

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಜಿತಾಬ್ ಕಣ್ಮರೆ ಪ್ರಕರಣ ನಡೆದು 3 ವರ್ಷಗಳೇ ಉರುಳಿದರೂ ಇದುವರೆಗೆ ಅವರ ಬಗ್ಗೆ ಯಾವೊಂದು ಸುಳಿವೂ ಲಭ್ಯವಾಗಿಲ್ಲ.

ದೇಶದ ಪ್ರಮುಖ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಸೇರಿದಂತೆ ಮೂರು ಏಜೆನ್ಸಿಗಳು ಸಹ ತನಿಖೆ ನಡೆಸಿದ್ದರೂ ಇಲ್ಲಿಯವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಇದರಿಂದಾಗಿ ಕುಮಾರ್ ಅಜಿತಾಬ್ ಕುಟುಂಬ ಸದಸ್ಯರನ್ನು ಸಂಕಷ್ಟಕ್ಕೆ ಸಿಕ್ಕುವಂತಾಗಿದೆ.

ಎಂಎನ್‌ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮತ್ತು ವೈಟ್‌ಫೀಲ್ಡ್ ನಿವಾಸಿಯಾಗಿದ್ದ ಕುಮಾರ್ ಅಜಿತಾಬ್ ಡಿಸೆಂಬರ್ 18, 2017 ರಂದು ನಾಪತ್ತೆಯಾಗಿದ್ದರು, ಅವರು ತಮ್ಮ ಕಾರನ್ನು ಮಾರಾಟ ಮಾಡುವುದಕ್ಕಾಗಿ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು.ಈ ಬಗೆಗೆ ಗ್ರಾಹಕರೊಬ್ಬರು ಲರೆ ಮಾಡಿದಾಗ ಕಾರನ್ನು ತೋರಿಸಲು ಮನೆಯಿಂದ ಹೋದವರು ಮತ್ತೆ ಹಿಂತಿರುಗಿರಲಿಲ್ಲ.

ಪ್ರಕರಣವನ್ನು ಮೊದಲು ವೈಟ್‌ಫೀಲ್ಡ್ ಪೊಲೀಸರು, ನಂತರ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು.ಅಜಿತಾಬ್ ಕುಟುಂಬದ ಕೋರಿಕೆಯ ಮೇರೆಗೆ 2018 ರ ಅಕ್ಟೋಬರ್ 22 ರಂದು ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿತು.

ಅಜಿತಾಬ್ ಅವರ ಕುಟುಂಬವು ಸಿಬಿಐ ಮೇಲೆ ಭರವಸೆಯನ್ನು ಹೊಂದಿತ್ತು. ಆದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರಕರಣದ ತನಿಖೆ ನಡೆಸಿದ್ದರೂ ಸಹ, ಈ ಪ್ರಕರಣವನ್ನು ಭೇದಿಸುವಲ್ಲಿ ಏಜೆನ್ಸಿ ಯಶಸ್ವಿಯಾಗಲಿಲ್ಲ. ಇದೀಗ ಕುಟುಂಬದ ಪಾಲಿಗೆ ಕಳೆಯುತ್ತಿರುವ ಪ್ರತಿ ದಿನವೂ ಹತಾಶೆಯನ್ನು ತರುತ್ತಿದೆ ಎಂದು ಅಜಿತಾಬ್ ಸೋದರ ಮಾವ ಮಿಮಿಕ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

"ಮೂರುವರ್ಷಗಳಾಗಿದೆ. ಈಗ ಅವರ ಸ್ವಂತ ಊರಾದ ಪಾಟ್ನಾದಲ್ಲಿರುವ ಅಜಿತಾಬ್ ವೃದ್ದ ಪೋಷಕರು ಪ್ರತಿನಿತ್ಯ ಮಗನ ಬರುವಿಕೆ ಬಗ್ಗೆ ಕೇಳುತ್ತಾರೆ. ಆತನ ಬಗೆಗಿನ ಸುದ್ದಿಗಾಗಿ ಕಾಯುತ್ತಾರೆ. ಅವರ ತಂದೆ ಇನ್ನೂ ಸಿಬಿಐಗೆ ಇಮೇಲ್ ಗಳನ್ನು ಕಳಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಬೆಳವಣಿಗೆಗಳ ಬಗೆಗೆ ಮಾಹಿತಿ ಕೋರಿದ್ದಾರೆ."ಕುಮಾರ್ ಹೇಳಿದರು.

"ಇತ್ತೀಚಿನ ದಿನಗಳಲ್ಲಿ ಯಾವುದೇ ಬೇಳವಣಿಗೆ ಆಗಿಲ್ಲ.. ಸಾಂಕ್ರಾಮಿಕ ರೋಗ ಎಲ್ಲವನ್ನೂ ವಿಳಂಬವಾಗಿಸಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮಗೆ ಬೇರೆ ಆಯ್ಕೆಗಳಿಲ್ಲ., ”

ಸಿಬಿಐ ಅಪಹರಣಕಾರರು ಅಜಿತಾಬ್ ಅವರ ಕಾರನ್ನು ಪತ್ತೆಹಚ್ಚಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ, ಆದ್ದರಿಂದ ಅವರು ಖಚಿತ ಫಲಿತಾಂಶ ಪಡೆಯಬಹುದು. ಅವರು ಅಜಿತಾಬ್ ಅವರ ಕುಟುಂಬ ಮತ್ತು ಸ್ನೇಹಿತರನ್ನು ಪ್ರಶ್ನಿಸುವುದರ ಜೊತೆಗೆ ಸೈಬರ್ ಫೊರೆನ್ಸಿಕ್ ಪ್ರಯೋಗಾಲಯಕ್ಕೆ ಡಿಜಿಟಲ್ ಪುರಾವೆಗಳನ್ನು ಕಳುಹಿಸಿದ್ದರು.

"ಇದುವರೆಗೆ ನಮ್ಮೊಂದಿಗೆ ಯಾವ ಸಂವಹನ ನಡೆದಿಲ್ಲತನಿಖೆಯ ಸ್ಥಿತಿಯ ಬಗ್ಗೆ ನಮಗೆ ತಿಳಿದಿಲ್ಲ. ಅವರು ಹೊಸ ದೃಷ್ಟಿಕೋನದಿಂದ ನೋಡುತ್ತಿದ್ದಾರೆಂದು ಅವರೊಮ್ಮೆ ನಮಗೆ ತಿಳಿಸಿದ್ದರು. ಆದರೆ ಅವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ. ಇದು ಅಜಿತಾಬ್ ಕುಟುಂಬ ಸದಸ್ಯರಿಗೆ ನಿರಾಶೆ ಮೂಡಿಸಿದೆ" ಕುಮಾರ್ ಹೇಳೀದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com