ಮಾಜಿ ಪಿಎಂ ಕವನಗಳಿಗೆ ನೃತ್ಯರೂಪ: ಬೆಂಗಳೂರಿನಲ್ಲಿ ವಾಜಪೇಯಿ ಜನ್ಮದಿನಕ್ಕೆ ವಿಶೇಷ ಕಾರ್ಯಕ್ರಮ

ವಿವಿಧ ನೃತ್ಯ ಪ್ರಕಾರಗಳ ಮೂಲಕ ಭಾರತದ ಮಾಜಿ ಪ್ರಧಾನ ಮಂತ್ರಿಗೆ ಗೌರವ ಸಲ್ಲಿಸಲು ಇದಕ್ಕಿಂತ ಉತ್ತಮವಾದ ದಾರಿ ಯಾವುದು?
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ

ಬೆಂಗಳೂರು: ವಿವಿಧ ನೃತ್ಯ ಪ್ರಕಾರಗಳ ಮೂಲಕ ಭಾರತದ ಮಾಜಿ ಪ್ರಧಾನ ಮಂತ್ರಿಗೆ ಗೌರವ ಸಲ್ಲಿಸಲು ಇದಕ್ಕಿಂತ ಉತ್ತಮವಾದ ದಾರಿ ಯಾವುದು? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಇಂಟರ್ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್‌ನ ಸಂಸ್ಥಾಪಕರೂ ಆಗಿರುವ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಮತ್ತು ಅವರ ತಂಡವು "ಅಟಲ್ ಕಾವ್ಯ ಕಲಾ ನರ್ತನ" ಎಂಬ ಕಾರ್ಯಕ್ರಮ ಆಯೋಹಿಸಿದೆ.

ಈ ಉಪಕ್ರಮದಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್, ಕೂಚುಪುಡಿಮತ್ತು ಮೋಹಿನಿಯಾಟ್ಟಂಮುಂತಾದ 15 ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದು, ವಾಜಪೇಯಿ ಅವರ ಕವನಕ್ಕೆ ಟ್ಯೂನ್ ಮಾಡಿ ಕಲಾವಿದರು ನರ್ತಿಸಲಿದ್ದಾರೆ. ವಾಜಪೇಯಿಯವರ 96ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಡಿಸೆಂಬರ್ 25 ರಂದು ಈ ಕಾರ್ಯಕ್ರಮ ನಡೆಯಲಿದೆ.

"ಕಲಾವಿದರು ಸಾಮಾನ್ಯವಾಗಿ  ಭಜನೆಗಳ ಬಳಸುವುದರಿಂದ ಇದು ಒಂದು ಬದಲಾವಣೆಯಾಗಿದೆ. ಅಲ್ಲದೆ, ಅನೇಕರು ವಾಜಪೇಯಿ ಅವರನ್ನು ರಾಜಕಾರಣಿಯಾಗಿ ಮಾತ್ರ ತಿಳಿದಿದ್ದಾರೆ. ಆದ್ದರಿಂದ ಇದು ನಮ್ಮೆಲ್ಲರಿಗೂ ಕಲಿಕೆಯ ಅನುಭವವಾಗಿತ್ತು" ಎಂದು ಶಾಂಡಿಲ್ಯ ಹೇಳುತ್ತಾರೆ.

ಕೇಂದ್ರ ಸಂಸ್ಕೃತಿ ಸಚಿವಾಲಯದ ಬೆಂಬಲದೊಂದಿಗೆ, ದೃಶ್ಯ ಪ್ರಸ್ತುತಿ ನಡೆಯಲಿದೆ. ಪ್ರತೀಕ್ಷಾ ಕಾಶಿ (ಕೂಚುಪುಡಿ)ಡಾ. ರೇಖಾ ರಾಜು (ಭರತನಾಟ್ಯ), ನಂದಿನಿ ಮೆಹ್ತಾ (ಕಥಕ್), ಮತ್ತು ಕರಿಷ್ಮಾ ಅಹುಜಾ (ಒಡಿಸ್ಸಿ) ಅವರಂತಹ ನೃತ್ಯ ಕಲಾವಿದರೊಡನೆ ಕಾರ್ಯಕ್ರಮ ಕಳೆಗಟ್ಟಲಿದೆ. “ನಾನು ವಾಜಪೇಯಿ ಅವರ ಕವನವನ್ನು ಓದಿದ್ದೇನೆ ಮತ್ತು ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡಿದ್ದೇನೆ. ಆದರೆ ಅವರಲ್ಲಿ ನವರಸಗಳ ಅಂಶಗಳನ್ನು ಹೊಂದಿರುವ ಕೃತಿಗಳನ್ನು ಆರಿಸುವುದು ಸವಾಲಿನ ಕೆಲಸವಾಗಿದೆ"

ಶಾಂಡಿಲ್ಯ ಅವರ ಸ್ನೇಹಿತ,  ಹಿಂದಿ ಪ್ರಾಧ್ಯಾಪಕರ ಸಹಾಯ ಪಡೆದು ಈ ಕೆಲಸ ಮಾಡಲಾಗಿದೆ. ಶಾಸ್ತ್ರೀಯ ನೃತ್ಯ ಚಿತ್ರಣಕ್ಕೆ ಸರಿಹೊಂದುವಂತಹ ಕೃತಿಗಳನ್ನು ಆಯ್ಕೆ ಮಾಡಲು ತನ್ನ ಸ್ನೇಹಿತರ ನೆರವು ಪಡೆದಿದ್ದೇನೆ, ಆದರೆ ಸವಾಲು ಅಲ್ಲಿಗೆ ಕೊನೆಗೊಂಡಿಲ್ಲ. ವಾಸ್ತವವಾಗಿ, ಇದು ಕೇವಲ ಪ್ರಾರಂಭವಾಗಿತ್ತು, ಏಕೆಂದರೆ ಆಯ್ಕೆ ಮಾಡಿದ 12 ಕೃತಿಗಳನ್ನು ಸಂಗೀತಕ್ಕೆ ಹೊಂದಿಸಬೇಕಾಗಿತ್ತು. ಇಲ್ಲಿ ಡಿ ಎಸ್ ಶ್ರೀವತ್ಸ ಮುಂಚೂಣಿಗೆ ಬಂದರು. “ಈ ಎಲ್ಲಾ ತಳಮಟ್ಟದ ಕೆಲಸಗಳು ಪೂರ್ಣಗೊಂಡ ನಂತರ, ನಾವು ದೇಶಾದ್ಯಂತದ ವಿವಿಧ ಕಲಾವಿದರನ್ನು ಸಂಪರ್ಕಿಸಿದ್ದೇವೆ. ವಿಭಿನ್ನ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಕಲಾವಿದರನ್ನು ನಾವು ಕರೆತರುತ್ತೇವೆ ಎಂದು ನಾವು ನಿರ್ದಿಷ್ಟವಾಗಿ ಹೇಳಿದೆ. ನಾಲ್ಕು ತಿಂಗಳಿನಿಂದ ಇದಕ್ಕಾಗಿ ತಯಾರಿ ನಡೆಸಿದ್ದೇನೆ. ಕವನಗಳು ರಾಜಕೀಯ, ಪ್ರಕೃತಿ ಮತ್ತು ಪೌರಾಣಿಕ ಕಥೆಗಳು ಸೇರಿದಂತೆ ವಿವಿಧ ಪ್ರಕಾರದ ವಿಷಯ ವಸ್ತುಗಳನ್ನು ಹೊಂದಿದೆ." ಶಾಂಡಿಲ್ಯ ವಿವರಿಸಿದ್ದಾರೆ.

ಬೆಂಗಳೂರು, ನವದೆಹಲಿ ಮತ್ತು ಗ್ವಾಲಿಯರ್ ಮೂರು ನಗರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗಳು ನಡೆಯುತ್ತದೆ. ರೆಕಾರ್ಡ್ ಮಾಡಲಾದ ಕಾರ್ಯಕ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತದೆ. "ಗ್ವಾಲಿಯರ್ ನಲ್ಲಿನ ಅಭಿನಯದ ಬಗ್ಗೆ ನಾನು ಬಹಳ ನಿರ್ದಿಷ್ಟವಾಗಿ ಹೇಳಿದ್ದೇನೆಂದರೆ ಅದು ವಾಜಪೇಯಿ ಅವರ ಜನ್ಮಸ್ಥಳ, ಪ್ರದರ್ಶನ ಸಭಾಂಗಣದಲ್ಲಿ ನಡೆಯಲಿದೆಯಾದರೂ ಕೇವಲ ಕಲಾವಿದರ ಕುಟುಂಬ ಸದಸ್ಯರೊಂದಿಗೆ ಕೋವಿಡ್ 19 ಮಾರ್ಗಸೂಚಿಗಳ ಬೆಳಕಿನಲ್ಲಿ ಇದು ಜರುಗಲಿದೆ."

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಡಿಸೆಂಬರ್ 25 ರಂದು ನಡೆಯಲಿರುವ ಕಾರ್ಯಕ್ರಮವು ಪ್ರತಿಷ್ಠಾನದ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಲೈವ್‌ಸ್ಟ್ರೀಮ್ ಆಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com