ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ: ಬೆಂಗಳೂರು ಪೊಲೀಸರು

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾದ ಭಾರತದಲ್ಲಿರುವ ವಿದೇಶಿಯರ ಪಾಸ್‌ಪೋರ್ಟ್ ನಕಲಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಪೊಲೀಸ್ ಕಚೇರಿ
ಬೆಂಗಳೂರು ಪೊಲೀಸ್ ಕಚೇರಿ

ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾದ ಭಾರತದಲ್ಲಿರುವ ವಿದೇಶಿಯರ ಪಾಸ್‌ಪೋರ್ಟ್ ನಕಲಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಿತ ವಸ್ತುವಾದ ಸೂಡೊಫೆಡ್ರಿನ್ ಕಳ್ಳಸಾಗಣೆ ಆರೋಪದ ಮೇಲೆ ಕಳೆದ ತಿಂಗಳು ನಾರ್ಕೋಟಿಕ್ ಡ್ರಗ್ಸ್ & ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಬಿ ಒನೊವೊ ಮತ್ತು ಸಿ ಒಕ್ವರ್.ಎಂಬ ಇಬ್ಬರು ನೈಜೀರಿಯನ್ನರ ಪಾಸ್‌ಪೋರ್ಟ್ ನಕಲಿ ಎಂದು ಮೂಲಗಳು ತಿಳಿಸಿವೆ.

ಎಂಡಿಎಂಎ ಮತ್ತು ಕೊಕೇನ್ ಕಳ್ಳಸಾಗಣೆ ಒಳಗೊಂಡ ಇತ್ತೀಚಿನ ಡ್ರಗ್ಸ್ ಪ್ರಕರಣದಲ್ಲಿ, ಬಂಧನಕ್ಕೊಳಗಾಗಿರುವ ಕೀನ್ಯಾದ ಇಬ್ಬರು ಆರೋಪಿಗಳಾದ ರಾಮ್ಲಾ ಶೆಡಾಫಾ ನ್ಯಾನ್ಸಿ ಮತ್ತು ಎಮ್ಯಾನುಯೆಲ್ ಮೈಕೆಲ್ ಅವರ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳು ಸಹ ನಕಲಿ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಆರೋಪಿಗಳು ಬೆಂಗಳೂರು ಉತ್ತರ ದಲ್ಲಿ ಬಾಡಿಗೆ ಅಗ್ರಿಮೆಂಟ್ ಸಹ ಮಾಡದೇ ಅಧಿಕೃತ ದಾಖಲೆಗಳಿಲ್ಲದೇ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ವಿದೇಶಿಯರನ್ನು ಕಾನೂನು ವ್ಯಾಪ್ತಿಗೆ ಕರೆತರಲು ಸಂಸ್ಥೆಗಳು ಕಷ್ಟಪಡುತ್ತವೆ. ಅಪರಾಧಕ್ಕಾಗಿ ಅವರನ್ನು ಬಂಧಿಸಿದಾಗ,   ಅವರು ದೇಶವನ್ನು ತೊರೆಯಬಾರದು ಎಂಬ ಷರತ್ತಿನೊಂದಿಗೆ ಜಾಮೀನು ನೀಡಲಾಗುತ್ತದೆ, ಆದರೆ ಅವರು  ಬೇರೆ ನಗರಗಳನ್ನು ಸ್ಥಳಾಂತರಗೊಂಡು ಅಪರಾಧ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ.

ಪಾಸ್ಪೋರ್ಟ್ ನಂತಹ ಕಾನೂನು ದಾಖಲೆಗಳ ಅನುಪಸ್ಥಿತಿಯಲ್ಲಿ ಅವರ ಚಲನೆಯನ್ನು ಪತ್ತೆಹಚ್ಚುವುದು ಕಷ್ಟ ಮತ್ತು ಅವರನ್ನು ತಮ್ಮ ದೇಶಕ್ಕೆ ಗಡೀಪಾರು ಮಾಡುವುದು ಇನ್ನೂ ಕಷ್ಟ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ನೇಲಮಂಗಲ ಸಮೀಪದ ಸೊಂಡೆಕೊಪ್ಪ ಗ್ರಾಮದಲ್ಲಿ ಅಕ್ರಮ ವಲಸಿಗರ ಬಂಧನ ಕೇಂದ್ರವನ್ನು ಅಂತಹ ವಿದೇಶಿಯರನ್ನು ದಾಖಲಿಸಲಾಗುತ್ತಿದೆ, ಅವರು  ತಪ್ಪು ಮಾಡಿ ಕಾನೂನು ಚೌಕಟ್ಟಿನಲ್ಲಿ ಸಿಲುಕಿರುತ್ತಾರೆ, ಭಾರತದಲ್ಲಿ ಅವಧಿ ಮುಗಿದ ವೀಸಾಗಳೊಂದಿಗೆ ವಾಸಿಸುತ್ತಿದ್ದಾರೆ. 8 ವಿದೇಶಿಯರನ್ನು  ಅಕ್ರಮ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿದ್ದು, ಅವರಲ್ಲಿ
ನಾಲ್ವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ.

ಒಬ್ಬ ಸುಡಾನ್, ಒಬ್ಬ ದಕ್ಷಿಣ ಸುಡಾನ್, ಟಾಂಜಾನಿಯನ್ ಮತ್ತು ಕಜಾಕ್ ಪ್ರಜೆಯನ್ನು ವಾಪಸ್ ಕಳುಹಿಸಲಾಗಿದೆ. ಮೂವರು ಬಾಂಗ್ಲಾದೇಶಿಗಳು ಮತ್ತು ಕಾಂಗೋ ರಾಷ್ಟ್ರೀಯರು ಸೇರಿದಂತೆ ನಾಲ್ಕು ಅಕ್ರಮ ವಲಸಿಗರು ಗಡೀಪಾರು ಮಾಡಲು ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com