ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಸದ್ಯದಲ್ಲೇ ಆರಂಭ

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ 1.7 ಲಕ್ಷ ಕೋಟಿ ರೂಪಾಯಿ ಮೀಸಲಿಡುವ ಮೂಲಕ ಸಾರಿಗೆ ವಲಯಕ್ಕೆ ಉತ್ತಮ ಹಣ ವಿನಿಯೋಗದ ಪ್ರೋತ್ಸಾಹ ಕೇಂದ್ರ ಸರ್ಕಾರದಿಂದ ಸಿಕ್ಕಿದೆ.
ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಸದ್ಯದಲ್ಲೇ ಆರಂಭ

ಬೆಂಗಳೂರು: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ 1.7 ಲಕ್ಷ ಕೋಟಿ ರೂಪಾಯಿ ಮೀಸಲಿಡುವ ಮೂಲಕ ಸಾರಿಗೆ ವಲಯಕ್ಕೆ ಉತ್ತಮ ಹಣ ವಿನಿಯೋಗದ ಪ್ರೋತ್ಸಾಹ ಕೇಂದ್ರ ಸರ್ಕಾರದಿಂದ ಸಿಕ್ಕಿದೆ. 77 ಕಿಲೋ ಮೀಟರ್ ಉದ್ದದ ಕರ್ನಾಟಕ ವಲಯದ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಗೆ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 4 ಸಾವಿರ ಕೋಟಿ ರೂಪಾಯಿ ಸಿಗುವ ನಿರೀಕ್ಷೆಯಿದೆ. ನಿನ್ನೆ ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಪ್ರಕಾರ ಎಕ್ಸ್ ಪ್ರೆಸ್ ವೇ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗುವ ನಿರೀಕ್ಷೆಯಿದೆ.


ಈ ಯೋಜನೆಯ ಉಸ್ತುವಾರಿ ಹೊತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಸ್ ಪಿ ಸೋಮಶೇಖರ್, ಭೂ ಸ್ವಾಧೀನ ಕಾರ್ಯ ಭಾಗಶಃ ಮುಗಿದಿದೆ. ಕರ್ನಾಟಕ ವಲಯದ ಕಾಮಗಾರಿ ಸುಗಮವಾಗಿ ಸಾಗಲು ಮೂರು ಪ್ಯಾಕೇಜ್ ಗಳಾಗಿ ವಿಂಗಡಿಸಲಾಗಿದೆ. ಈಗ ಒಪ್ಪಿಗೆ ನೀಡಿದರೆ ಯೋಜನೆ ಪೂರ್ಣಗೊಳ್ಳಲು ಎರಡರಿಂದ ಮೂರು ವರ್ಷಗಳು ತಗುಲಬಹುದು. ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗಬೇಕಷ್ಟೆ ಎಂದರು.


ಒಟ್ಟು 262 ಕಿಲೋ ಮೀಟರ್ ಉದ್ದದ ಈ ಯೋಜನೆ ಹೊಸಕೋಟೆಯಲ್ಲಿ ಆರಂಭವಾಗಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮುಗಿಯಲಿದೆ. 2,600 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ಅವುಗಳಲ್ಲಿ 800 ಹೆಕ್ಟೇರ್ ಕರ್ನಾಟಕವೊಂದರಲ್ಲಿಯೇ ಇದೆ. 


12 ಕೋಟಿ ರೂಪಾಯಿ ವೆಚ್ಚದಲ್ಲಿ ವಾಹನ ಯಾವ ಸ್ಥಳದಲ್ಲಿದೆ ಎಂದು ಪತ್ತೆಹಚ್ಚಲು ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಪತ್ತೆಹಚ್ಚುವ ಸಾಧನವನ್ನು ಅಳವಡಿಸಲು ರಸ್ತೆ ಸುರಕ್ಷತಾ ಪ್ರಾಧಿಕಾರ ಚಿಂತನೆ ಮಾಡುತ್ತಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com