ಐಎಂಎ ಹಗರಣ: ಹಿರಿಯ ಐಪಿಎಸ್ ಅಧಿಕಾರಿ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ 8 ಮಂದಿಯನ್ನು ಬುಕ್ ಮಾಡಿದ ಸಿಬಿಐ

4,000 ಕೋಟಿ  ರೂ.ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕರ್ನಾಟಕ ಕೇಡರ್ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮತ್ತು ಇತರೆ  8 ಮಂದಿಯನ್ನು ಬುಕ್ ಮಾಡಿದೆ.
ಹೇಮಂತ್ ನಿಂಬಾಳ್ಕರ್ , ಅಜಯ್ ಹಿಲೋರಿ
ಹೇಮಂತ್ ನಿಂಬಾಳ್ಕರ್ , ಅಜಯ್ ಹಿಲೋರಿ

ಬೆಂಗಳೂರು: 4,000 ಕೋಟಿ  ರೂ.ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕರ್ನಾಟಕ ಕೇಡರ್ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮತ್ತು ಇತರೆ  8 ಮಂದಿಯನ್ನು ಬುಕ್ ಮಾಡಿದೆ.

1998 ರ ಬ್ಯಾಚ್ ಐಪಿಎಸ್ ಅಧಿಕಾರಿ ನಿಂಬಾಳ್ಕರ್ ಮತ್ತು 2008 ರ ಬ್ಯಾಚ್ ಐಪಿಎಸ್ ಅಧಿಕಾರಿ ಹಿಲೋರಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಕರ್ನಾಟಕ ಸರ್ಕಾರದಿಂದ ಅನುಮೋದನೆ ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳ ಹೆಸರಲ್ಲದೆ ಐಎಂಎ, ಸಂಸ್ಥಾಪಕ ಮನ್ಸೂರ್ ಖಾನ್ ಮತ್ತು ಇತರರನ್ನು  ಸಹ ಸಿಬಿಐ ಬುಕ್ ಮಾಡಿದೆ.. ಕರ್ನಾಟಕ ಪೊಲೀಸ್ ಇಲಾಖೆಯ  ಹಿರಿಯ ಹುದ್ದೆಗಳಲ್ಲಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ಕೋರಿ ಸಿಬಿಐ ರಾಜ್ಯ ಸರ್ಕಾರವನ್ನು ಸಂಪರ್ಕಿಸಿತ್ತು. ಐಎಂಎ ಸಂಸ್ಥಾಪಕ ಮಸೂರ್ ಖಾನ್ ಗೆ ಈ ಅಧಿಕಾರಿಗಳು ನೆರವಾಗಿದ್ದರೆಂದು ಸಿಬಿಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com