ರಾಯಬಾಗ: ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವ ಪ್ರಾರಂಭ

ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನ ಕರ್ನಾಟಕಕ್ಕಿಂತಲೂ ಹೆಚ್ಚು ಮಹಾರಾಷ್ಟ್ರದ ಭಕ್ತಾಧಿಗಳನ್ನೇ ಹೊಂದಿದೆ. ಈ ದೇವಿಯ ಜಾತ್ರಾ ಮಹೋತ್ಸವಕ್ಕೆ ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನ ಭಕ್ತಾದಿಗಳು ಆಗಮಿಸಿ ತಮ್ಮ  ಹರಕೆಗಳನ್ನು ತೀರಿಸುತ್ತಾರೆ.
ರಾಯಬಾಗ: ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವ ಪ್ರಾರಂಭ
ರಾಯಬಾಗ: ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವ ಪ್ರಾರಂಭ

ರಾಯಬಾಗ: ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನ ಕರ್ನಾಟಕಕ್ಕಿಂತಲೂ ಹೆಚ್ಚು ಮಹಾರಾಷ್ಟ್ರದ ಭಕ್ತಾಧಿಗಳನ್ನೇ ಹೊಂದಿದೆ. ಈ ದೇವಿಯ ಜಾತ್ರಾ ಮಹೋತ್ಸವಕ್ಕೆ ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನ ಭಕ್ತಾದಿಗಳು ಆಗಮಿಸಿ ತಮ್ಮ  ಹರಕೆಗಳನ್ನು ತೀರಿಸುತ್ತಾರೆ.

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಶಕ್ತಿ ದೇವತೆಯಾದ ಮಾಯಕ್ಕಾ ದೇವಿಯ ಜಾತ್ರಾ ಮಹೋತ್ಸವ ಬಾನುವಾರ ಪ್ರಾರಂಭವಾಗಿದೆ. ಇದು ಸುಮಾರು ಒಂದು ತಿಂಗಳ ವರೆಗೆ ನಡೆಯುತ್ತದೆ. ಮುತೈದೆ ಹುಣ್ಣಿಮೆಯ ದಿನ ತನ್ನ ತವರು ರಾಜ್ಯವಾದ ಮಹಾರಾಷ್ಟ್ರಕ್ಕೆ ಹೋಗಿ ಒಂದು ತಿಂಗಳ ಪರ್ಯಂತ ಅಲ್ಲಿಯೇ ಇದ್ದು ಭಾರತ ಹುಣ್ಣಿಮೆಯ ದಿನ ಭಕ್ತಾಧಿಗಳನ್ನು ಜಾತ್ರೆಗೆ ಕರೆದುಕೊಂಡು ಬರುತ್ತಾಳೆ ಎಂಬ ಪ್ರತೀತಿ ಇದೆ. 

ಪ್ರತಿ ಭರತ ಹುಣ್ಣಿಮೆಯ ದಿನ ಮಾಯಕ್ಕಾದೇವಿ ಜಾತ್ರಾ ಮಹೋತ್ಸವ ಆಚರಿಸುವ ರೂಡಿ ಬೆಳೆದು ಬಂದಿದೆ. ಅದೇರೀತಿ ಇಂದು ಚಿಂಚಲಿ ಪಟ್ಟಣಕ್ಕೆ ಶ್ರೀಮಾಯಕ್ಕಾ ದೇವಿಯನ್ನು ಗ್ರಾಮಸ್ಥರು ಕರೆತಂದು ನಂತರ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಲಾಯಿತು.  ಮಹಾರಾಷ್ಟ್ರದ ಕೊಂಕಣದಿಂದ ‘ಕೀಲು’ ಮತ್ತು ‘ಕಿಟ್ಟ’ ರೆಂಬ ರಾಕ್ಷಸರನ್ನು ಬೆನ್ನಟ್ಟಿ ಬಂದು ಚಿಂಚಲಿಯಲ್ಲಿ ಸಂಹಾರಮಾಡಿ ಸ್ಥಳೀಯ ದೇವತೆ ಹಿರೀದೇವಿಯ ಆಶ್ರಯ ಬಯಸಿದಾಗ ಹಿರೀದೇವಿಯು ಒಪ್ಪಂದದ ಮೇರೆಗೆ ಆಶ್ರಯ ನೀಡಿದಳಂತೆ ಈ ಪೌರಾಣಿಕ ಹಿನ್ನಲೆ ಹೊತ್ತ ದೇವಿಯ ಮಂದಿರ ಭವ್ಯವಾಗಿ ನಿರ್ಮಾಣಗೊಂಡು ಪ್ರವಾಸಿಗರಿಗೆ ಆಕರ್ಷಣೀಯ ಹಾಗೂ ಪ್ರೇಕ್ಷಣೀಯ ಸ್ಥಳವಾಗಿ ನಿಂತಿದೆ.

ಅಷ್ಟೇ ಅಲ್ಲದೇ ಭಕ್ತಾಧಿಗಳು ಹಾಲಹಳ್ಳ ಮತ್ತು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಮಡಿಯಿಂದಲೇ ದೇವತೆಗೆ ತಾವು ಹೊತ್ತ ಹರಕೆ ಸಲ್ಲಿಸಲು ಉಪವಾಸ ವೃತ ಪಾಲಿಸುತ್ತಾರೆ. ಮಹಾರಾಷ್ಟ್ರದ ಭಕ್ತಾಧಿಗಳು ಕಂಚಣಿಕೆ ಧರಿಸಿ ಕೋಲು ಹಿಡಿಲು ಚಾಂಗ್ ಬಲೋ ಹುಕ್ ಬಲೋ ಎಂದು ಕೂಗುತ್ತಾ ಕುಣಿಯುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಬಸ್, ಎತ್ತಿನಗಾಡಿ, ಜೀಪ್ ಗಳ ಮೂಲಕ ಈಗಾಗಲೇ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.  ಇನ್ನೂ ಆಗಮಿಸುತ್ತಿದ್ದಾರೆಯೂ. ಬಂದಂತ ಭಕ್ತರಿಗೆ ತಾಲೂಕಾಡಳಿತ ಉಳಿದುಕೊಳ್ಳುವ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವ ಈ ದೇವಿಯ ಜಾತ್ರಾ ಮಹೋತ್ಸವ ಇನ್ನೂ ಅದ್ದೂರಿಯಾಗಿ ನಡೆಯಲಿ ಯಾವುದೇ ಅನಾಹುತಕಾರಿ ಘಟನೆ ನಡೆಯದಂತೆ ಆಶಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com