ಅಪಘಾತದಲ್ಲಿ ಮೃತಪಟ್ಟ ಸಚಿನ್ ಸಚಿವ ಆರ್ ಅಶೋಕ್ ಕಡೆಯವರು ಎಂಬ ಒತ್ತಡ: ರಾತ್ರಿಯೇ ಮರಣೋತ್ತರ ಪರೀಕ್ಷೆ-ಡಾ. ಮಹಾಂತೇಶ್

ಮೂರು ದಿನಗಳ ಹಿಂದೆ ಅಪಘಾತದ ನಂತರ ಬೆಂಜ್ ಕಾರಿನಲ್ಲಿ ನರಳಾಡುತ್ತಿದ್ದ ಸಚಿನ್ ಎಂಬಾತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದು, ತಡರಾತ್ರಿಯೇ ಆತನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಹೊಸಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಮಹಾಂತೇಶ್ ತಿಳಿಸಿದ್ದಾರೆ.
ಅಪಘಾತದ ಚಿತ್ರ
ಅಪಘಾತದ ಚಿತ್ರ

ಬಳ್ಳಾರಿ: ಮೂರು ದಿನಗಳ ಹಿಂದೆ ಅಪಘಾತದ ನಂತರ ಬೆಂಜ್ ಕಾರಿನಲ್ಲಿ ನರಳಾಡುತ್ತಿದ್ದ ಸಚಿನ್ ಎಂಬಾತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದು, ತಡರಾತ್ರಿಯೇ ಆತನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಹೊಸಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಮಹಾಂತೇಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಜ್ ಕಾರಿನಲ್ಲಿದ್ದ ಸಚಿನ್ ಎಂಬಾತ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದ. ಕಾರಿನಲ್ಲಿದ್ದ ಮೂವರು ಯುವಕರು ಗಾಯಗೊಂಡಿದ್ದು, ಮೂವರ ಪೈಕಿ ರಾಕೇಶ್ ಎಂಬಾತನ ಬೆನ್ನು ಮೂಳೆ ಮುರಿದಿತ್ತು. ಹೀಗಾಗಿ ನಾಳೆ ಬೆಳಗ್ಗೆ ಹೊರಡಿ ಎಂದು ಅವರಿಗೆ ಸಲಹೆ ನೀಡಿ, ನಂತರ ಆತನನ್ನು ಬೆಂಗಳೂರಿಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.
 
ಇನ್ನು ಶಿವಕುಮಾರ್ ಮತ್ತು ರಾಹುಲ್ ಗೆ ಸ್ವಲ್ಪ ಗಾಯವಾಗಿತ್ತು. ಹೀಗಾಗಿ ಆಸ್ಪತ್ರೆಯ ಒಪಿಡಿಯಲ್ಲಿ ಚಿಕಿತ್ಸೆ ನೀಡಿದೇವು. ನಂತರ ಪೊಲೀಸರು ಮೃತಪಟ್ಟ ಸಚಿನ್ ದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಿ. ಮೃತ‌ದೇಹ ಸಚಿವ ಆರ್ ಅಶೋಕ ಕಡೆಯವರದು ಎಂದು ಮನವಿ ಮಾಡಿಕೊಂಡರು. ಹೀಗಾಗಿ ರಾತ್ರಿ 1.30ರ ಸುಮಾರಿಗೆ ನಮಗೆ ಮೃತದೇಹ ದೊರೆಯಿತು. ನಂತರ 3.30ಗಂಟೆಗೆ ಮರಣೋತ್ತರ ಪರೀಕ್ಷೆ ಮುಕ್ತಾಯಗೊಳಿಸಿ ದೇಹ ಹಸ್ತಾಂತರಿಸಲಾಯಿತು ಎಂದರು‌.

ಮರುದಿನ ಬೆಳಿಗ್ಗೆ ಅಪಘಾತದಿಂದಾಗಿ ನಿಧನರಾದ ರವಿ ನಾಯ್ಕ ಎಂಬಾತನ ಮರಣೋತ್ತರ ಪರೀಕ್ಷೆ ಮಾಡಿ, ದೇಹ ಹಸ್ತಾಂತರಿಸಲಾಯಿತು ಎಂದರು.

ಫೆ 10ರಂದು ಬಳ್ಳಾರಿ ಜಿಲ್ಲೆಯ ಹೊಸಕೋಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಿಂತಿದ್ದ ಹುಡುಗನ ಮೇಲೆ ಕಾರು ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಅಲ್ಲದೇ, ಕಾರಿನಲ್ಲಿದ್ದ ಬೆಂಗಳೂರು ಮೂಲದ ಸಚಿನ್ ಎಂಬಾತ‌ ಕೂಡ ಸಾವಿಗೀಡಾಗಿದ್ದ. ಈ ಅಪಘಾತ ಪ್ರಕರಣದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರ ಪುತ್ರ ಶರತ್ ಹೆಸರು ತಳುಕು ಹಾಕುಕೊಂಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com