ಸಿನಿಮೀಯ ರೀತಿಯಲ್ಲಿ ನಕಲಿ ಪೊಲೀಸರಿಂದ ವಂಚನೆ

ಪೊಲೀಸ್ ವೇಷದಲ್ಲಿ ಬಂದ ಕಳ್ಳರ ತಂಡ, ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನಿಂದ 2.10 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊಸಪೇಟೆ: ಪೊಲೀಸ್ ವೇಷದಲ್ಲಿ ಬಂದ ಕಳ್ಳರ ತಂಡ, ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನಿಂದ 2.10 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ನಡೆದಿದೆ.

ಮೃತ್ಯುಂಜಯನಗರದ ಸಿದ್ದರಾಮಪ್ಪ ಮೋಸ ಹೋದ ವ್ಯಕ್ತಿಯಾಗಿದ್ದು. ಇದೇ ಭಾನುವಾರ ಸಿದ್ದರಾಮಪ್ಪ ಐದು ಉಂಗುರ, ಡಾಲರ್ ಸಹಿತ ಚಿನ್ನದ ಸರ ಹಾಕಿಕೊಂಡು ದಾರಿಯಲ್ಲಿ ಹೋಗುತ್ತಿದ್ದರು. ಈತನನ್ನು ನಕಲಿ ಪೊಲೀಸರು ಬೈಕ್‌ನಲ್ಲಿ ಹಿಂಬಾಲಿಸಿ. ಬಳಿಕ ಸಿದ್ದರಾಮಪ್ಪ ಮುಂದೆ ಬಂದು ಮೈಮೇಲೆ ಬೆಲೆ ಬಾಳುವ ಚಿನ್ನಾಭರಣ ಹಾಕಿಕೊಂಡು ಓಡಾಡಬಾರದೆಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಂಬಿಕೆ ಬರಲಿ ಎಂದು ನಕಲಿ ಪೊಲೀಸ್ ಐಡಿ ಕಾರ್ಡ್ ಕೂಡ ತೋರಿಸಿದ್ದಾರೆ, ನಂತರ ಚಿನ್ನಾಭರಣ ಬಿಚ್ಚುತಿದ್ದಂತೆ ಅವುಗಳನ್ನ ಸುರಕ್ಷಿತವಾಗಿ ಕಟ್ಟಿಕೊಡುವುದಾಗಿ ಹೇಳಿ ಪಡೆದು ಬಟ್ಟೆಯಲ್ಲಿ ಸುತ್ತಿ ಕೊಡುವ ನಾಟಕ ಆಡಿ ಅವುಗಳನ್ನ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com