ಭಾರತದ 'ಚಿನ್ನದ ಗಣಿ' ಖ್ಯಾತಿಯ ಕರ್ನಾಟಕ: ಮಂಡ್ಯದಲ್ಲಿ ಲೀಥಿಯಂ ಆಯ್ತು, ಈಗ ಚಿನ್ನದ ನಿಕ್ಷೇಪವೂ ಪತ್ತೆ?

ನಮಗೆ ನಿಮಗೆಲ್ಲ 'ಚಿನ್ನದ ಗಣಿ' ಅಂತ ಹೆಸರೇಳಿದ ತಕ್ಷಣ ನೆನಪಾಗೋದೆ 'ಕೆಜಿಎಫ್', ಆದರೆ ಇದೀಗ ಚಿನ್ನದ ನಿಕ್ಷೇಪ ಹೊಂದಿರುವ ಪ್ರದೇಶ ಕೇವಲ ಕೋಲಾರ ಮಾತ್ರವಲ್ಲ 'ಮಂಡ್ಯ'ವೂ ಸಹ ಇದೆ ಅನ್ನೋಕಾಲ ಸನ್ನಿಹಿತವಾಗಿದೆ.
ಚಿನ್ನದ ನಿಕ್ಷೇಪ
ಚಿನ್ನದ ನಿಕ್ಷೇಪ

ಮಂಡ್ಯ: ನಮಗೆ ನಿಮಗೆಲ್ಲ 'ಚಿನ್ನದ ಗಣಿ' ಅಂತ ಹೆಸರೇಳಿದ ತಕ್ಷಣ ನೆನಪಾಗೋದೆ 'ಕೆಜಿಎಫ್', ಆದರೆ ಇದೀಗ ಚಿನ್ನದ ನಿಕ್ಷೇಪ ಹೊಂದಿರುವ ಪ್ರದೇಶ ಕೇವಲ ಕೋಲಾರ ಮಾತ್ರವಲ್ಲ 'ಮಂಡ್ಯ'ವೂ ಸಹ ಇದೆ ಅನ್ನೋಕಾಲ ಸನ್ನಿಹಿತವಾಗಿದೆ.

ಹೌದು,ಆಶ್ಚರ್ಯವಾದರೂ ಸತ್ಯ,ಈಗಾಗಲೆ ಬ್ಯಾಟರಿಗೆ ಉಪಯೋಗಿಸುವ ಲೀಥಿಯಂ ನಿಕ್ಷೇಪ ಮಂಡ್ಯದ ಬಳಿ ಪತ್ತೆಯಾಗಿರುವ ವಿಷಯ ಎಲ್ಲೆಡೆ ಸದ್ದುಮಾಡುತ್ತಿದೆ, ಇದರ ಬೆನ್ನಲ್ಲೇ ಮತ್ತೊಂದು ಅಮೂಲ್ಯವಾದ 'ಚಿನ್ನದ ನಿಕ್ಷೇಪ'ವೂ ಸಹ ಮಂಡ್ಯದ ಬಳಿ ಇದೆ ಎನ್ನವು ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ.

ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರೀಘಟ್ಟ ಪ್ರದೇಶವನ್ನಹೊಂದಿಕೊಂಡಂತೆ ಇರುವ ಅಲ್ಲಾಪಟ್ಟಣ ಹಾಗೂ ಮರಳಗಾಲ ಗ್ರಾಮದ ಬಳಿ ಎಲೆಕ್ಟ್ರಿಕಲ್ ವಾಹನಗಳ ಬ್ಯಾಟರಿ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು  ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಸಂಶೋಧನಾಕಾರ್ಯದಲ್ಲಿ ತೊಡಗಿದೆ. ಇದರ ಬೆನ್ನಲ್ಲೇ ಅತ್ಯಮೂಲ್ಯವಾದ ಖನಿಜ ಸಂಪತ್ತಾದ ಚಿನ್ನದ ನಿಕ್ಷೇಪವೂ ಸಹ ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಇದೆ ಎನ್ನುವ ಸುದ್ದಿಯೀಗ ಹೊರಬಿದ್ದಿದೆ. 

ಬ್ರಿಟಿಷ್ ಕಾಲದಲ್ಲೇ ಸಂಶೋಧನೆ:
ಶ್ರೀರಂಗಪಟ್ಟಣ ಮತ್ತು ಮಂಡ್ಯ ಮಾರ್ಗದ ಅರಕೆರೆಯಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ಈ ಹುಂಜನಕೆರೆ ಗ್ರಾಮದ ಬಳಿ ಬ್ರಿಟಿಷ್ರ ಕಾಲದಲ್ಲಿಯೇ ಸಂಶೋಧನೆ ನಡೆದಿತ್ತು, ಬ್ರಿಟೀಷ್ ವಿಜ್ಞಾನಿಗಳು 1882ರಿಂದ 1913ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹ ಸಂಗತಿಯಾಗಿದೆ.! ಇದೀಗ ಈ ಹುಂಜನಕೆರೆಯ ಅರಣ್ಯ ಪ್ರದೇಶದಲ್ಲಿ ಮೂರು ಗುಹೆಗಳು ಪತ್ತೆಯಾಗಿವೆ. ಇವು ಕೂಡ ಬ್ರಿಟಿಷ್ರ ಕಾಲದಲ್ಲಿಯೇ ಕೊರೆಯಲಾಗಿರುವ ಗುಹೆಗಳಾಗಿದ್ದು, ಸ್ಥಳೀಯರ ಮಾಹಿತಿಯ ಪ್ರಕಾರ ಈ ಗುಹೆಗಳನ್ನು ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿದೆ ಎನ್ನಲಾಗುತ್ತಿದೆ. ಸದ್ಯ ಇಲ್ಲಿರುವ ಮೂರು ಗುಹೆಗಳು ಭಾಗಶಃ ಮುಚ್ಚಿಕೊಂಡಿದ್ದು, ಗುಹೆಗಳ ಸ್ವಲ್ಪ ಭಾಗ ಮಾತ್ರ ಕಾಣಲು ಸಿಗುತ್ತಿದೆ.!

ಬಂಗಾರದ ಗುಡ್ಡ:
ಇಂದಿಗೂ ಸಹ ಸ್ಥಳಿಯ ಜನರು ಹುಂಜನಕೆರೆ ಅರಣ್ಯ ಪ್ರದೇಶವನ್ನು ``ಬಂಗಾರದ ಗುಡ್ಡ’’ಎಂದೇ ಕರೆಯುತ್ತಾರೆ. ಇಲ್ಲಿ ಚಿನ್ನಕ್ಕಾಗಿ ಬ್ರಿಟೀಷರಿಂದ ನಡೆದ ಸಂಶೋಧನೆಯಿAದಾಗಿ ಇಲ್ಲಿನ ಜನರು ಅಂದಿನಿAದ ಇಂದಿನವರೆಗೂ ಬಂಗಾರದ ಗುಡ್ಡ ಅಂತಲೇ ಕರೆಯುವುದು ವಾಡಿಕೆಯಾಗಿದೆ. ಈ ಪ್ರದೇಶದ ನಕಾಶೆಯಲ್ಲೂ ಸಹ ``ಬಂಗಾರದ ಗಣಿ’’ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇಲ್ಲಿ ಇರುವುದು ಅಚ್ಚರಿಯ ಸಂಗತಿಯಾಗಿದೆ. 

ಬ್ರಿಟೀಷರ ನಂತರ ನಡೆದಿಲ್ಲ ಸಂಶೋಧನೆ:
ಬ್ರಿಟೀಷರ ಕಾಲದಲ್ಲಿಯೇ ಈ ಅರಣ್ಯ ಪ್ರದೇಶದಲ್ಲಿ ಸಂಶೋಧನೆ ನಡೆದಿದೆ ಎನ್ನುವ ಮಾಹಿತಿಗಳು ಇದೆಯಾದರೂ ನಂತರದ ದಿನಗಳಲ್ಲಿ ಇಲ್ಲಿಯವರೆಗೂ ಸರ್ಕಾರದ ಮಟ್ಟದಲ್ಲಾಗಲಿ,ವಿಜ್ಞಾನಿಗಳಾಗಲಿ ಇಲ್ಲಿ ಚಿನ್ನದ ನಿಕ್ಷೇಪದ ಬಗ್ಗೆ ಯಾವುದೇ ಸಂಶೋಧನೆ ನಡೆಸಿಲ್ಲ ಎನ್ನಲಾಗಿದೆ. ಅಂತೂ ಇದುವರೆಗೂ ಕಬ್ಬಿನ ಸಕ್ಕರೆ ನಗರಿ ಎಂದು ಕರೆಯುತ್ತಿದ್ದ ಮಂಡ್ಯಕ್ಕೀಗ  ಶುಕ್ರದೆಶೆಬಂದಿದೆ, ಲೀಥಿಯಂ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ನಿಕ್ಷೇಪವಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿರುವುದರಿಂದ ``ಅಮೂಲ್ಯ ನಿಕ್ಷೇಪಗಳ ನಗರಿ’’ಅಂತ ಕರೆಯುವ ಕಾಲವೂ ಸನ್ನಿಹಿತವಾಗುತ್ತಿದೆ ಎಂದಿನಿಸುತ್ತಿದೆ. ಅದೇನೇ ಇರಲಿ  ಈಗಾಗಲೆ ಲೀಥಿಯಂ ನಿಕ್ಷೇಪವಿರುವುದನ್ನು ಪತ್ತೆ ಮಾಡಿ ಯಶಸ್ವಿಯಾಗಿರುವ ವಿಜ್ಞಾನಿಗಳು ``ಚಿನ್ನದ ನಿಕ್ಷೇಪವಿರುವ ಬಗ್ಗೆಯೂ ಸಂಶೋಧನೆ ನಡೆಸಿ ಖಚಿತ ಪಡಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ನಾಗಯ್ಯ ಲಾಳನಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com