ಯಡಿಯೂರಪ್ಪ ಸೆಂಚುರಿ ಹೊಡೆಯಲಿ: ರಾಜನಾಥ್ ಸಿಂಗ್

ಒಬ್ಬ ಕ್ರಿಕೆಟ್ ಆಟಗಾರ 77 ರನ್ ಗಳಿಸಿದಾಗ ಆ ಬ್ಯಾಟ್ಸ್ ಮನ್ ಶತಕ ಗಳಿಸಲಿ ಎಂದು ಅಭಿಮಾನಿಗಳು ಬಯಸುತ್ತಾರೆ. 
ಯಡಿಯೂರಪ್ಪ-ರಾಜನಾಥ್ ಸಿಂಗ್
ಯಡಿಯೂರಪ್ಪ-ರಾಜನಾಥ್ ಸಿಂಗ್

ಬೆಂಗಳೂರು: ಒಬ್ಬ ಕ್ರಿಕೆಟ್ ಆಟಗಾರ 77 ರನ್ ಗಳಿಸಿದಾಗ ಆ ಬ್ಯಾಟ್ಸ್ ಮನ್ ಶತಕ ಗಳಿಸಲಿ ಎಂದು ಅಭಿಮಾನಿಗಳು ಬಯಸುತ್ತಾರೆ. ಅದೇ ರೀತಿ ಯಡಿಯೂರಪ್ಪ ಬದುಕಿನಲ್ಲಿ ಸಂತಸ, ಸಮೃದ್ಧಿಯಿಂದ ಶತಕ ಬಾರಿಸಲಿ ಎಂದು ರಕ್ಞಣಾ ಸಚಿವ ರಾಜನಾಥ್ ಸಿಂಗ್ ಆಶಿಸಿದ್ದಾರೆ. 

ನಗರದ ಅರಮನೆ ಮೈದಾನದಲ್ಲಿ ನಡೆದ ಬಿ.ಎಸ್. ಯಡಿಯೂರಪ್ಪ ಅವರ 78 ನೇ ಹುಟ್ಟು ಹಬ್ಬದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸಾಮಾನ್ಯರಲ್ಲ, ಅಸಮಾನ್ಯರು. 

ಅವರು ಶತಾಯುಷಿಗಳಾಗಬೇಕು. ಅವರು ತಮ್ಮ ಬದುಕನ್ನು ಪಕ್ಷಕ್ಕಾಗಿ ಸವೆಸಿದ್ದಾರೆ.  ಸೈಕಲ್ ಮೇಲೆ ಹಳ್ಳಿ ಹಳ್ಳಿ ಸಂಚರಿಸಿ ಪಕ್ಷ ಸಂಘಟಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮೇಲೆ ದಾಳಿಗಳು ಸಹ ಆಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ಯಡಿಯೂರಪ್ಪ ಪಕ್ಷಕ್ಕಾಗಿ ತಮ್ಮ ಜೀವ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ ಎಂದರು. 

ಯಡಿಯೂರಪ್ಪ ಬಡವರ , ರೈತರ ಸೇವೆ ಮಾಡುತ್ತಲೇ ರಾಜಕೀಯವಾಗಿ ಮೇಲೆ ಬಂದಿದ್ದಾರೆ. ಯಡಿಯೂರಪ್ಪ ಅವರ ಹುದ್ದೆಯಿಂದ ದೊಡ್ಡವರೆಸಿಕೊಂಡಿಲ್ಲ. ಅವರ ಕೆಲಸಗಳಿಂದ ದೊಡ್ಡವರಾಗಿದ್ದಾರೆ. ಅವರೇನು ಶ್ರೀಮಂತ ಕುಟುಂಬದಲ್ಲಿ ಜನಿಸಿದವರಲ್ಲ. ಆದರೆ ಸತತ ಪರಿಶ್ರಮದಿಂದ ಮೇಲೆ ಬಂದ ಮಹಾನ್ ನಾಯಕ ಎಂದು ಬಣ್ಣಿಸಿದರು. 

ಯಡಿಯೂರಪ್ಪ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಈ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಅರಳಿತು. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಬೇರೆ ಎಲ್ಲರೂ ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಯಡಿಯೂರಪ್ಪ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿವರು. ರೈತರ ಬಗ್ಗೆಯೂ ಅಪಾರ ಕಳಕಳಿ ಹೊಂದಿದ ನಾಯಕ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದ ಧೀಮಂತ ಎಂದು ರಾಜನಾಥ್ ಸಿಂಗ್ ಹೇಳಿದರು. ಪ್ರಪಂಚದ ೫ ಬಲಿಷ್ಟ ಆರ್ಥಿಕತೆ ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ  ಪ್ರಮುಖ ಮೂರು ರಾಷ್ಟ್ರಗಳ ಸಾಲಿಗೆ ಸೇರಲಿದೆ. ಇಂತಹ ಸಾಧನೆಗೆ ಕರ್ನಾಟಕದ ಕೊಡುಗೆಯೂ ಗಮನಾರ್ಹವಾಗಿರುತ್ತದೆ. ಯಡಿಯೂರಪ್ಪ ಅವರ ಸೇವೆಯೂ ಸಹ ಅಷ್ಟೇ ಮಹತ್ವದ್ದಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com