'ಐದು ವರ್ಷದಲ್ಲಿ ಅಂತರ್ಜಾತಿ ವಿವಾಹದ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳ'

ಪ್ರೋತ್ಸಾಹ ಧನ ನೀಡುವ ಮೂಲಕ ರಾಜ್ಯ ಸರ್ಕಾರ ಅಂತರ್ಜಾತಿಯ ವಿವಾಹನ್ನು ಪ್ರೋತ್ಸಾಹಿಸಲು ನಿರ್ಧರಿಸಿದೆ. ಐದು ವರ್ಷದ ಅವಧಿಯಲ್ಲಿ ಅಂತರ್ಜಾತಿ ವಿವಾಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರೋತ್ಸಾಹ ಧನ ನೀಡುವ ಮೂಲಕ ರಾಜ್ಯ ಸರ್ಕಾರ ಅಂತರ್ಜಾತಿಯ ವಿವಾಹನ್ನು ಪ್ರೋತ್ಸಾಹಿಸಲು ನಿರ್ಧರಿಸಿದೆ. ಐದು ವರ್ಷದ ಅವಧಿಯಲ್ಲಿ ಅಂತರ್ಜಾತಿ ವಿವಾಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ

ಸಮಾಜ ಕಲ್ಯಾಣ ಇಲಾಖೆ  ಮಾಹಿತಿ ಪ್ರಕಾರ  ಕಳೆದ 5 ವರ್ಷಗಳಲ್ಲಿ ಮೂರು ಪಟ್ಟು ಅಂತರ್ಜಾತಿ ವಿವಾಹಗಳ ಸಂಖ್ಯೆ  ಹೆಚ್ಚಿದೆ ಎಂದು ಹೇಳಿದೆ.

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರ್ಕಾರ ದಲಿತ ಯುವತಿಯನ್ನು ಇತರ ಜಾತಿಯ ಯುವಕ ಮದುವೆಯಾದರೆ ₹3 ಲಕ್ಷ ಹಾಗೂ ದಲಿತ ಯುವಕನನ್ನು ಇತರ ಸಮುದಾಯದ ಯುವತಿ ವಿವಾಹವಾದರೆ ₹2 ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ. ಹಣವನ್ನು ಎರಡು ಹಂತಗಳಲ್ಲಿ ದಂಪತಿಯ ಜಂಟಿ ಖಾತೆಗೆ ಜಮೆ ಮಾಡಲಾಗುತ್ತಿದೆ.

2014-15 ರಲ್ಲಿ 1,785 ರಷ್ಟು ಇದ್ದದ್ದು 2018-19ನೇ ಸಾಲಿನಲ್ಲಿ  5,273 ಕ್ಕೆ ಏರಿದೆ, ಇದುವೆರಗೂ 15,620 ಫಲಾನುಭವಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ ಎಂಬ ಅಂಕಿ ಅಂಶಗಳು ತಿಳಿಸಿವೆ.

ಈ ಯೋಜನೆಯ ಫಲಾನುಭವಿಯಾಗಲು ದಂಪತಿಗೆ ಮೊದಲ ವಿವಾಹವಾಗಿರಬೇಕು. ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ವಿವಾಹ ನೋಂದಣಿಯಾಗಿರಬೇಕು. ಯೋಜನೆಗೆ ಬೇಕಾದ ಪೂರಕ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಸರ್ಕಾರವು 2.5 ಲಕ್ಷ ರೂ. ಹಣವನ್ನು ನೇರವಾಗಿ ನೀಡುತ್ತದೆ. ಈ ಹಣವನ್ನು ಪಡೆಯಲು ದಂಪತಿ ತಮ್ಮ ಆಧಾರ್ ಸಂಖ್ಯೆ ನೊಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ.

ಈ ನೆರವು ಪಡೆಯಲು ವಿಧಿಸಲಾಗಿರುವ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿದೆ. ವಿಶೇಷವಾಗಿ ಹಿಂದೂ ಮದುವೆ ಕಾಯ್ದೆಯಡಿ ಈ ಮದುವೆ ನೊಂದಣಿ ಆಗಬೇಕೆಂಬ ನಿಯಮವಿದ್ದರೂ ಬಹಳಷ್ಟು ಮದುವೆಗಳು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೊಂದಣಿ ಆಗುತ್ತಿರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com