ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರ ಸಮ್ಮಾನಿತ ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ ನಿಧನ 

ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರಕ್ಕೆ  ಭಾಜನರಾಗಿದ್ದ ಕರ್ನಾಟಕದ ಹಿರಿಯ ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ (94) ಅವರು ಜು.03 ರಂದು ಇಹಲೋಕ ತ್ಯಜಿಸಿದ್ದಾರೆ. 
ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ
ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ

ಶೃಂಗೇರಿ: ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರಕ್ಕೆ  ಭಾಜನರಾಗಿದ್ದ ಕರ್ನಾಟಕದ ಹಿರಿಯ ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ (94) ಅವರು ಜು.03 ರಂದು ಇಹಲೋಕ ತ್ಯಜಿಸಿದ್ದಾರೆ. 

ವಿನೇಶ್ವರ ಉಡುಪ ಹಾಗೂ ಶಿಂಗಾರಮ್ಮಅವರ ಪುತ್ರರಾದ ವಿನಾಯಕ ಉಡುಪರು, ಶೃಂಗೇರಿ ಶಾರದಾ ಪೀಠದ ಸದ್ವಿದ್ಯಾ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಯಾಗಿ, ಕೆ. ಕೃಷ್ಣ ಜೋಯಿಸ್‌, ಶಂಕರನಾರಾಯಣ ಅಡಿಗ ಹಾಗೂ ಸಾಮಕ ಗಣೇಶ್‌ ಶಾಸ್ತ್ರಿ ಅವರ ಶಿಷ್ಯರಾಗಿ  ತರ್ಕ, ಮೀಮಾಂಸಾ, ನ್ಯಾಯ, ಅಲಂಕಾರ, ವೇದಾಂತಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದರು, ಶೃಂಗೇರಿ ಶಾರದಾ ಪೀಠದ ಅತ್ಯಂತ ಹಿರಿಯ ಆಸ್ಥಾನ ವಿದ್ವಾಂಸರೂ ಆಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ವೇದ, ಉಪನಿಷತ್ ಗಳನು ಬೋಧಿಸಿದ್ದರು.

ಮೂಲತಃ ಶಿವಮೊಗ್ಗಾ ಜಿಲ್ಲೆಯ ನಗರದವರಾದ ಉಡುಪರು, 2018ರಲ್ಲಿ ಕೇಂದ್ರ ಸರಕಾರದ ಪ್ರತಿಷ್ಠಿತ ಬಾದರಾಯಣ ವ್ಯಾಸ ಪುರಸ್ಕಾರದಿಂದ ಸನ್ಮಾನಿಸಲ್ಪಟ್ಟಿದ್ದರು. ಶೃಂಗೇರಿ ಮಠದಲ್ಲಿ 4 ಜಗದ್ಗುರುಗಳ ಕಾಲಾವಧಿಯಲ್ಲಿ ಶ್ರೀಯುತರು ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com