ಅತ್ಯಾಚಾರ ಸಂತ್ರಸ್ತೆ ಕುರಿತ ವಿವಾದಾತ್ಮಕ ಹೇಳಿಕೆ ಹಿಂಪಡೆದ ಹೈಕೋರ್ಟ್ ನ್ಯಾಯಾಧೀಶ

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಸಂತ್ರಸ್ತೆ ಕುರಿತು ನಿರೀಕ್ಷಣಾ ಜಾಮೀನು ಆದೇಶದಲ್ಲಿ ಬಳಸಿದ್ದ ವಿವಾದಾತ್ಮಕ ಪದವನ್ನು ಹಿಂಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Published: 04th July 2020 06:32 PM  |   Last Updated: 04th July 2020 06:32 PM   |  A+A-


High court of karnataka

ಕರ್ನಾಟಕ ಹೈಕೋರ್ಟ್

Posted By : Lingaraj Badiger
Source : IANS

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಸಂತ್ರಸ್ತೆ ಕುರಿತು ನಿರೀಕ್ಷಣಾ ಜಾಮೀನು ಆದೇಶದಲ್ಲಿ ಬಳಸಿದ್ದ ವಿವಾದಾತ್ಮಕ ಪದವನ್ನು ಹಿಂಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ್ದ ಆದೇಶದಲ್ಲಿ, “ಅತ್ಯಾಚಾರಕ್ಕೆ ಒಳಗಾಗಿದ್ದ ನಂತರ ನಾನು ಸುಸ್ತಾಗಿ ಮಲಗಿದ್ದೆ” ಹಾಗಾಗಿ ನಾನು ಪೊಲೀಸರಿಗೆ ದೂರು ನೀಡುವಲ್ಲಿ ಏಳು ದಿನ ತಡವಾಗಿದೆ, ಎಂಬ ಸಂತ್ರಸ್ತೆಯ ಹೇಳಿಕೆಗೆ “ಇದು ಭಾರತೀಯ ನಾರಿಯ ಲಕ್ಷಣವಲ್ಲ” ಎಂಬ ಪದಗಳನ್ನ ಉಲ್ಲೇಖಿಸಿ ಕೃಷ್ಣ ದೀಕ್ಷಿತ್ ಅವರು ತೀರ್ಪು ನೀಡಿದ್ದರು. ಇದಕ್ಕೆ ವಕೀಲರು, ಮಹಿಳಾ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ತೀರ್ಪಿನಿಂದ ಆ ಪದಗಳನ್ನು ತೆಗೆದು ಹಾಕಲಾಗಿದೆ ಎಂದು ರಾಜ್ಯ ಕಾನೂನು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.

ಜೂನ್ 22ರಂದು ಈ ತೀರ್ಪು ಪ್ರಕಟವಾದ ನಂತರ ರಾಜ್ಯದ ಕೆಲ ಚಿಂತಕರು, ಪ್ರಗತಿಪರರು ಮತ್ತು ಮಹಿಳಾ ಸಂಘಟನೆಗಳು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿಗೆ ಬಹಿರಂಗ ಪತ್ರ ಬರೆದು ನೇರ ಆಕ್ಷೇಪ ವ್ಯಕ್ತಪಡಿಸಿದ್ದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp