ಕೊರೋನಾ ಕರ್ತವ್ಯದಿಂದ ಮುಕ್ತಗೊಳಿಸಿ: ಸರ್ಕಾರಕ್ಕೆ ಶಿಕ್ಷಕರ ಪತ್ರ

ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕಿನ ನೂರಾರು ಶಿಕ್ಷಕರನ್ನು ಕೋವಿಡ್ ಕಣ್ಗಾವಲು ತಂಡದ ಭಾಗವಾಗಿಸಿ, ಶಾಲಾ ಕರ್ತವ್ಯಗಳನ್ನು ಕೈಬಿಟ್ಟು, ವಲಯ ಆರೋಗ್ಯ ಕಚೇರಿಗಳಿಗೆ ವರದಿ ಸಲ್ಲಿಸುವಂತೆ ನಿಯೋಜಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕಿನ ನೂರಾರು ಶಿಕ್ಷಕರನ್ನು ಕೋವಿಡ್ ಕಣ್ಗಾವಲು ತಂಡದ ಭಾಗವಾಗಿಸಿ, ಶಾಲಾ ಕರ್ತವ್ಯಗಳನ್ನು ಕೈಬಿಟ್ಟು, ವಲಯ ಆರೋಗ್ಯ ಕಚೇರಿಗಳಿಗೆ ವರದಿ ಸಲ್ಲಿಸುವಂತೆ ನಿಯೋಜಿಸಲಾಗಿದೆ.

ಈ ಶಿಕ್ಷಕರು ವಾಪಾಸ್ ಯಾವಾ ತಮ್ಮ ಕೆಲಸಕ್ಕೆ ಮರಳುತ್ತಾರೆ ಎಂಬ ಬಗ್ಗೆ ತಿಳಿದಿಲ್ಲ. ಬಿಬಿಎಂಪಿಯಿಂದ ತರಬೇತಿ ಪಡೆದ ಹಲವು ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದೆ. ಕೋವಿಡ್ ಸಂಬಂಧಿತ ಸೇವೆಗಳನ್ನು ಸಲ್ಲಿಸುವ ತಾಂತ್ರಿಕತೆಗಳ ಬಗ್ಗೆ ತಿಳಿದಿಲ್ಲ ಎಂದು ಕರ್ನಾಟಕ ಸರ್ಕಾರಿ ಶಿಕ್ಷಕರ ಸಂಘ ತಿಳಿಸಿದೆ.

ಸೋಂಕಿತರು ಸಂಪರ್ಕ ಹೊಂದಿರುವವರ ಬಗ್ಗೆ ಮಾಹಿತಿ ಪಡೆಯಲು  ಶಿಕ್ಷಕರನ್ನು ಮನೆ ಮನೆಗೆ ಕಳುಹಿಸಲಾಗುತ್ತದೆ.ಆದರೆ ಈಗ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಅವರು ಮನೆಗೆ ತೆರಳು ಭಯ ಪಡುತ್ತಿದ್ದಾರೆ, ಕೊರೋನಾ ಸೋಂಕು ಸಮೀಕ್ಷೆ ಜೊತೆಗೆ ಕ್ಷಯರೋಗಿಗಳ ಸಮೀಕ್ಷೆನ್ನೂ ಕೂಡ ಮಾಡಬೇಕಾಗಿದೆ. ಆದರೆ ಇತ್ತೀಚೆಗೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಾಗ ಸೂಕ್ತ ರಕ್ಷಣೆಯಿಲ್ಲದೇ ಶಿಕ್ಷಕರನ್ನು ಮನೆ ಮನೆಗಳಿಗೆ ಕಳುಹಿಸುವುದು ಎಷ್ಟು ಸಮಂಜಸವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com