ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಚ್ ಸಿ ಜಿ ಆಸ್ಪತ್ರೆಯಲ್ಲಿ ಕೊರೋನಾಗಾಗಿ ಆಯುರ್ವೇದ ಔಷಧಿ ಪ್ರಯೋಗ

ಆಯುಷ್ ಇಲಾಖೆ ಅನುಮೋದನೆ ನಂತರ ಪ್ರಯೋಗ ಆರಂಭವಾಗಲಿದೆ. ಇತ್ತೀಚೆಗೆ, ದ್ಯುತಿ ಬಯೋಸೈನ್ಸ್‌ನ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರು ಮನೆಯ ಪ್ರತ್ಯೇಕತೆಯಡಿಯಲ್ಲಿ ಕೋವಿಡ್ ರೋಗಿಯ ಮೇಲೆ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದ್ದರು.

ಬೆಂಗಳೂರು: 15 ಕೊರೋನಾ ರೋಗಿಗಳು ಮತ್ತು 15 ಕೊರೋನೇತರ ರೋಗಿಗಳ ಮೇಲೆ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ ಆರಂಭವಾಗಲಿದೆ.

ಆಯುಷ್ ಇಲಾಖೆ ಅನುಮೋದನೆ ನಂತರ ಪ್ರಯೋಗ ಆರಂಭವಾಗಲಿದೆ. ಇತ್ತೀಚೆಗೆ, ದ್ಯುತಿ ಬಯೋಸೈನ್ಸ್‌ನ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರು ಮನೆಯ ಪ್ರತ್ಯೇಕತೆಯಡಿಯಲ್ಲಿ ಕೋವಿಡ್ ರೋಗಿಯ ಮೇಲೆ ಕ್ಲಿನಿಕಲ್ ಪ್ರಯೋಗವನ್ನು  ನಡೆಸಿದ್ದರು. ಕೊರೋನಾ ರೋಗಿಗೆ ದಿನಕ್ಕೆ ಮೂರು ಬಾರಿ 9 ಆಯುರ್ವೇದ ಔಷಧಿಗಳನ್ನು ನೀಡಲಾಗಿತ್ತು, ಅದರಿಂದ ಉತ್ತಮ ಫಲಿತಾಂಶ ಕೂಡ ಬಂದಿತ್ತು.

ಸಾಮಾನ್ಯ ಕೊರೋನಾ ಔಷಧಿ ಜೊತೆಗೆ ಆಯುರ್ವೇದ ಔಷಧಿಯನ್ನು ನೀಡಿದೆವು,  ರೋಗಿಯು ಉತ್ತಮವಾಗಿ ಸ್ಪಂದಿಸಿದರು.ಆಕ್ಸಿಜನ್ ನೀಡಲಾಗುತ್ತಿತ್ತು, 9 ದಿನಗಳಲ್ಲಿ ಉತ್ತಮವಾಗಿ ಗುಣಮುಖರಾದರು ಎಂದ ಪ ಹೇಳಿದ್ದಾರೆ, 15 ಕೋವಿಡ್ ಮತ್ತು 15 ಕೋವಿಡ್ ಅಲ್ಲದ ರೋಗಿಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗುವುದು.

ಆಯುರ್ವೇದ ಪ್ರಯೋಗಗಳನ್ನು ತೆಗೆದುಕೊಳ್ಳುವ ನಿರ್ಧಾರವು ವಾರಗಳ ಪರಿಶೀಲನೆ ಮತ್ತು ಸಂಶೋಧನೆಯ ನಂತರ ಕೈಗೊಳ್ಳಲಾಗಿದೆ, ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ಸ್ಥಾಪಿಸಲಾಗಿದೆ, ಔಷಧವು ಕಾರ್ಯನಿರ್ವಹಿಸುತ್ತದೆಯೇ ಎಂದು ಪರೀಕ್ಷಿಸಲು ನಾವು ಕಂಪ್ಯೂಟರ್ ಸ್ಟಿಮ್ಯುಲೇಶನ್ ಮಾಡಿದ್ದೇವೆ, ಇದು ಉತ್ತಮ ಫಲಿತಾಂಶ ನೀಡಿದೆ
ಎಂದು ಆಯುರ್ವೇದ ತಜ್ಞ  ಡಾ.ಗಿರಿಧರ್ ಕಜೆ ಹೇಳಿದ್ದಾರೆ.

ನಾವು ಈಗಾಗಲೇ ಆಯುಷ್ ಇಲಾಖೆ ಅನುಮತಿ ಪಡೆದಿದ್ದೇವೆ, ಆದರೆ ಇಲಾಖೆಯ ಶಿಷ್ಟಾಚಾರದ ನೀತಿ ನಿಯಮಗಳಿಗಾಗಿ ಕಾಯುತ್ತಿರುವುದಾಗಿ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com