ಕೋವಿಡ್ ಮರಣ ಪ್ರಮಾಣ ತಗ್ಗಿಸಲು ಹೊಸ ಮಾದರಿಯ ಪ್ರಯೋಗಕ್ಕೆ ಕರ್ನಾಟಕ ಮುಂದು

ಹೆಚ್ಚುತ್ತಿರುವಕೋವಿಡ್ ಸೋಂಕಿತರು ಹಾಗೂ ಕೊರೋನಾ ಸಾವಿನ ಸಂಖ್ಯೆಗಳಿಂದ ಆತಂಕಗೊಂಡಿರುವ ರಾಜ್ಯದ ವೈದ್ಯ ಸಿಬ್ಬಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತೆಗೆದುಕೊಳ್ಳುವ ಸಮಯದ ನಿರ್ಣಾಯಕ ಕಡಿತಕ್ಕೆ ಯೋಜಿಸಿದ್ದಾರೆ.

Published: 16th July 2020 08:21 AM  |   Last Updated: 16th July 2020 12:23 PM   |  A+A-


Posted By : Raghavendra Adiga
Source : The New Indian Express

ಬೆಂಗಳೂರು: ಹೆಚ್ಚುತ್ತಿರುವಕೋವಿಡ್ ಸೋಂಕಿತರು ಹಾಗೂ ಕೊರೋನಾ ಸಾವಿನ ಸಂಖ್ಯೆಗಳಿಂದ ಆತಂಕಗೊಂಡಿರುವ ರಾಜ್ಯದ ವೈದ್ಯ ಸಿಬ್ಬಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತೆಗೆದುಕೊಳ್ಳುವ ಸಮಯದ ನಿರ್ಣಾಯಕ ಕಡಿತಕ್ಕೆ ಯೋಜಿಸಿದ್ದಾರೆ. ವಿಶೇಷವಾಗಿ ಹೆಚ್ಚಿನ ಅಪಾಯದ ವರ್ಗದಲ್ಲಿನ ರೋಗಿಗಳಿಗೆ ಕಡಿಮೆ ಸಮಯದಲ್ಲಿ ಚಿಕಿತ್ಸೆ ನೀಡಲು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಮಾದರಿಗಳಲ್ಲಿ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್) ಪರೀಕ್ಷೆಗಳನ್ನು ನಡೆಸುವ ಪ್ರಯೋಗಾಲಯಗಳು ಪರೀಕ್ಷಾ ವರದಿಗಳಲ್ಲಿ ಸೈಕಲ್ ಥ್ರೆಶೋಲ್ಡ್ (ಸಿಟಿ) ಮಟ್ಟವನ್ನು ನಮೂದಿಸಲು ನಿರ್ಣಯಿಸಲಾಗಿದೆ. ಇದು ಕೊರೋನಾ ಸೋಂಕಿತ ರೋಗಿಗಳಲ್ಲಿ ವೈರಲ್ ತೀವ್ರತೆಯ ಪ್ರಮಾಣದ ಸ್ಪಷ್ಟತೆಯನ್ನು ನೀಡಲಿದೆ. 

ನಿರ್ಣಾಯಕ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಈ ಕ್ರಮವು ಸಹಾಯ ಮಾಡುತ್ತದೆ ಕೋವಿಡ್ -19 ನಿಂದಾಗಿ ಜುಲೈ 8 ರಂದು ರಾಜ್ಯದಲ್ಲಿ 470 ಜನ ಮೃತರಾಗಿದ್ದರೆ  ಜುಲೈ 15 ರಂದು ಈ ಸಂಖ್ಯೆ 928ಕ್ಕೆ ಏರಿಕೆಯಾಗಿದೆ. 

ಆಸ್ಪತ್ರೆಗಳಲ್ಲಿ ತಡವಾಗಿ ವರದಿ ನೀಡುವುದರಿಂದ ಇಂತಹಾ ಸಾವಿನ ಪ್ರಮಾಣ ಏರಿಕೆಯಾಗಿದೆ. ಸಿಟಿ ಮಟ್ಟವು ರೋಗಲಕ್ಷಣಗಳು ಮತ್ತು ಕೊಮೊರ್ಬಿಡಿಟಿಗಳ ಜೊತೆಗೆ, ಯಾವ ಕೋವಿಡ್ -19-ಸಕಾರಾತ್ಮಕ ವ್ಯಕ್ತಿಗಳಿಗೆ ಇತರರಿಗಿಂತ ಹೆಚ್ಚು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆಯೆಂದು ನಿರ್ಧರಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ - ಈ ಪ್ರಕ್ರಿಯೆಯನ್ನು ಟ್ರಯೇಜಿಂಗ್ ಎಂದು ಕರೆಯಲಾಗುತ್ತದೆ. ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವ ಪ್ರಯೋಗಾಲಯಗಳಿಗೆ  ಈ ಕುರಿತಂತೆ ಇಂದೇ ನಿರ್ದೇಶನ ನಿಡಲಾಗುತ್ತದೆ  ಎಂದು ಕೋವಿಡ್- 19 ಕ್ರಿಟಿಕಲ್ ಕೇರ್ ಸಪೋರ್ಟ್ ಕಮಿಟಿಯ ಮುಖ್ಯಸ್ಥರಾದ ಹಿರಿಯ ಐಎಎಸ್  ಅಧಿಕಾರಿ ಡಾ. ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಕೋವಿಡ್ -19 ಲ್ಯಾಬ್ ಪರೀಕ್ಷಾ ತಂಡದ ಸದಸ್ಯರೂ ಆಗಿರುವ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಡಾ.ಎನ್.ಎನ್.ಮಂಜುನಾಥ್, “ವೈರಲ್ ತೀವ್ರತೆಯ ಪ್ರಮಾಣ ಹೆಚ್ಚು, ಸೌಮ್ಯ ಅಥವಾ ಮಧ್ಯಮವಾಗಿದ್ದರೆ ಸಿಟಿ ಮಟ್ಟವು ಅದನ್ನು ತೀರಿಸುತ್ತದೆ. ಒಂದೊಮ್ಮೆ ವೈರಲ್ ತೀವ್ರತೆ ಆಧಾರದ ಮೇಲೆ ರೋಗಲಕ್ಷಣಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹೆಚ್ಚಿನ ವೈರಲ್ ತೀವ್ರತೆ  ಹೊಂದಿರುವ ರೋಗಲಕ್ಷಣದ ರೋಗಿಗಳನ್ನು ಹೆಚ್ಚು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆದಾಗ್ಯೂ, ಹೆಚ್ಚಿನ ವೈರಲ್ ತೀವ್ರತೆ ಹೊಂದಿರುವ ಕೆಲವರಿಗೆ ರೋಗಲಕ್ಷಣಗಳು ಕಾಣಿಸುವುದೇ ಇಲ್ಲ. . ಹೆಚ್ಚಿನ ವೈರಲ್ ತೀವ್ರತೆ ಮತ್ತು ರೋಗಲಕ್ಷಣಗಳ ತೀವ್ರತೆಯೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ.

 "ಸಿಟಿ ಟ್ರಯೇಜಿಂಗ್ ತ್ವರಿತ ಮತ್ತು ನಿಖರವಾದ ಚಿಕಿತ್ಸೆಗೆ ಸಹಾಯ ಮಾಡುತ್ತದೆ" ಎಂದು ಡಾ. ತ್ರಿಲೋಕ್ ಚಂದ್ರ ಒತ್ತಿ ಹೇಳಿದರು. ಅವರು ಮತ್ತು ಅವರ ತಂಡವು ಹೆಚ್ಚಿನ ಅಪಾಯದ ಪ್ರಕರಣಗಳ ಚಿಕಿತ್ಸೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೆಚ್ಚಿನ ಅಪಾಯದ ವಿಭಾಗದಲ್ಲಿರುವ 14,128 ರೋಗಿಗಳಲ್ಲಿ 4,145 ಜನರನ್ನು (ಮಂಗಳವಾರದವರೆಗೆ)ಬಿಡುಗಡೆ ಮಾಡಲಾಗಿದೆ. ಹಿರಿಯ ನಾಗರಿಕರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಕೊವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ ಕೊಮೊರ್ಬಿಡಿಟಿ ಹೊಂದಿರುವವರನ್ನು ಹೆಚ್ಚಿನ ಅಪಾಯದ ಪ್ರಕರಣಗಳಾಗಿ ವರ್ಗೀಕರಿಸಲಾಗಿದೆ, ಅವರ ಬಗ್ಗೆ ವೈದ್ಯರು, ತಜ್ಞರುಗಳು ಹೆಚ್ಚಿನ ಗಮನ ಹರಿಸಬೇಕು,

ಸೋಂಕಿನ ಬಗ್ಗೆ ತಡವಾಗಿ ವರದಿ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಧಿಕಾರಿಗಳು  ಇದು ಕೋವಿಡ್ -19 ರೋಗಿಗಳಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ. ಬುಧವಾರ ವರದಿಯಾದ 87 ಸಾವುಗಳಲ್ಲಿ, ಹೆಚ್ಚಿನವರು ಆಸ್ಪತ್ರೆಗಳಿಗೆ ದಾಖಲಾದ ಎರಡು-ಮೂರು ದಿನಗಳ ನಂತರ ಸಾವನ್ನಪ್ಪಿದ್ದಾರೆ. ಕೋವಿಡ್ ರೋಗಿಗಳನ್ನು ಆದಷ್ಟು ಬೇಗನೆ ಆಸ್ಪತ್ರೆಗಳಿಗೆ ಸೇರಿಸುವುದು ಮೊದಲ ಆದ್ಯತೆಯಾಗಿದೆ ಮತ್ತು ಐಎಲ್ ಐ, ಸಾರಿ ಪ್ರಕರಣದ ರೋಗಿಗಳಿಗೆ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿದಿನ ನಡೆಸುತ್ತಿರುವ ಪರೀಕ್ಷೆಗಳ ಸಂಖ್ಯೆಯನ್ನು ಸುಮಾರು 22,000 ಬಿಇಎಂಗಳಿಗೆ  ಹೆಚ್ಚಿಸಲಾಗಿದೆ ಎಂದು ಡಾ.ಮಂಜುನಾಥ್ ಹೇಳಿದರು

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp