ಇ-ಸಿಮ್ ಗೆ ವರ್ಗಾವಣೆ ಬಯಸಿದ್ದ ಮಹಿಳೆಗೆ 3 ಲಕ್ಷ ರೂ. ಪಂಗನಾಮ!

ಮೊಬೈಲ್ ಫೋನ್ ಸಿಮ್ ಕಾರ್ಡ್ ನ ಇ-ಸಿಮ್ ಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಬಯಸಿದ್ದ ಮಹಿಳೆಗೆ ವಂಚಕರು ಬರೊಬ್ಬರಿ 3 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಇ-ಸಿಮ್ ಗೆ ವರ್ಗಾವಣೆ ಬಯಸಿದ್ದ ಮಹಿಳೆಗೆ 3 ಲಕ್ಷ ಪಂಗನಾಮ!
ಇ-ಸಿಮ್ ಗೆ ವರ್ಗಾವಣೆ ಬಯಸಿದ್ದ ಮಹಿಳೆಗೆ 3 ಲಕ್ಷ ಪಂಗನಾಮ!

ಬೆಂಗಳೂರು: ಮೊಬೈಲ್ ಫೋನ್ ಸಿಮ್ ಕಾರ್ಡ್ ನ ಇ-ಸಿಮ್ ಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಬಯಸಿದ್ದ ಮಹಿಳೆಗೆ ವಂಚಕರು ಬರೊಬ್ಬರಿ 3 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಕನ್ನಮಂಗಲದ ನಿವಾಸಿಯಾಗಿರುವ ಪ್ರಾಚಿ ಅವಸ್ಥಿ ತಮಗೆ ವಂಚನೆಯಾಗಿರುವುದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆ ನಡೆದ ಎರಡು ದಿನಗಳ ಬಳಿಕ ದೂರು ದಾಖಲಾಗಿದೆ. 25 ವರ್ಷದ ಈ ಮಹಿಳೆ ಬಳಕೆ ಮಾಡುತ್ತಿದ್ದ ಟೆಲಿಕಾಮ್ ಸೇವೆ ಒದಗಿಸುವ ಸಂಸ್ಥೆಯ ಗಾಹಕ ಸೇವಾ ಪ್ರತಿನಿಧಿಯ ಸೋಗಿನಲ್ಲಿ ವ್ಯಕ್ತಿಯೋರ್ವ ಈಕೆಗೆ ಜುಲೈ 9 ರಂದು ಬೆಳಿಗ್ಗೆ 10:30 ಕ್ಕೆ ಕರೆ ಮಾಡಿದ್ದಾನೆ.  

ಆಕೆಯ ಸಿಮ್ ಕಾರ್ಡ್ ನ್ನು ಇ-ಸಿಮ್ ಗೆ ಮಾರ್ಪಾಡು ಮಾಡುತ್ತಿರುವುದಾಗಿ ಹೇಳಿದ್ದಾನೆ, ಇದಕ್ಕೆ ಮಹಿಳೆ ಒಪ್ಪಿದ ಕೂಡಲೇ ನಿರ್ದಿಷ್ಟ ನಂಬರ್ ಗೆ ಮೆಸೇಜ್ ಕಳಿಸುವಂತೆ ಸೂಚಿಸಿದ್ದಾನೆ. ಈ ರೀತಿ ಮಾಡಿದ ಕೂಡಲೇ ಮಹಿಳೆಯ ಮೊಬೈಲ್ ನಂಬರ್ ಬ್ಲಾಕ್ ಆಗಿದೆ. ನಂತರ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಗಳು ಆಕೆಯ ಇ-ಮೇಲ್ ಗೆ ಬರಲಾರಂಭಿಸಿವೆ. ವಂಚನೆಯ ಸುಳಿವು ದೊರೆತ ಬೆನ್ನಲ್ಲೇ ಆಕೆ ಬ್ಯಾಂಕ್ ನ ಸ್ಥಳೀಯ ಶಾಖೆಯನ್ನು ಸಂಪರ್ಕಿಸಿದ್ದಾರೆ. ಪರಿಸ್ಥಿತಿಯನ್ನು ಬ್ಯಾಂಕ್ ನ ಸಿಬ್ಬಂದಿಗೆ ವಿವರಿಸಿದ್ದು, ತಕ್ಷಣವೇ ತನ್ನ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಮನವಿ ಮಾಡಿದ್ದಾರೆ. ಆದರೆ ಆಕೆಯ ಗಮನಕ್ಕೇ ಬಾರದಂತೆ ವಂಚಕರು ಆನ್ ಲೈನ್ ಬ್ಯಾಂಕಿಂಗ್ ಮೂಲಕ ಆಕೆಯ ಖಾತೆಯಿಂದ 10 ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು ಹಾಗೂ ಮೊತ್ತ ಬ್ಯಾಂಕ್ ಖಾತೆಗೆ ಜಮಾವಣೆಯೂ ಆಗಿತ್ತು. ವಂಚಕರು 10 ಲಕ್ಷಗಳ ಪೈಕಿ 3 ಲಕ್ಷವನ್ನು ಆಕೆಯ ಖಾತೆಯಿಂದ ದೋಚಿದ್ದಾರೆ. 

ಪೊಲೀಸರ ಪ್ರಕಾರ ದುಷ್ಕರ್ಮಿಗಳು ಆಕೆಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಡಾಟಾವನ್ನು ಕದ್ದು, ಒಟಿಪಿ ಪಡೆಯುವುದಕ್ಕೆ ಆಕೆಯ ಸಿಮ್ ನ್ನು ನಕಲು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com