ಕರ್ನಾಟಕ-ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ!

ಕೋವಿಡ್‍ -19 ಲಾಕ್‍ಡೌನ್‍ ನಿರ್ಬಂಧಗಳು ಅನೇಕ ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.ಅಂತಹದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಕರ್ನಾಟಕ –ಕೇರಳ ಗಡಿಯಲ್ಲಿನ ಚೆಕ್ ಪೋಸ್ಟ್ ಬುಧವಾರ ಮದುವೆಯೊಂದಕ್ಕೆ ವೇದಿಕೆಯಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಕೋವಿಡ್‍ -19 ಲಾಕ್‍ಡೌನ್‍ ನಿರ್ಬಂಧಗಳು ಅನೇಕ ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.
ಅಂತಹದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಕರ್ನಾಟಕ –ಕೇರಳ ಗಡಿಯಲ್ಲಿನ ಚೆಕ್ ಪೋಸ್ಟ್ ಬುಧವಾರ ಮದುವೆಯೊಂದಕ್ಕೆ ವೇದಿಕೆಯಾಗಿತ್ತು.

ಕೇರಳದ ವರ ಮತ್ತು ಕರ್ನಾಟಕದ ವಧು ಚೆಕ್ ಪೋಸ್ಟ್ ನಲ್ಲೇ ವಿವಾಹವಾದರು. ಅಂದಹಾಗೆ, ಕ್ವಾರಂಟೈನ್‍ ತೊಂದರೆಗಳಿಂದ ತಪ್ಪಿಸಿಕೊಳ್ಳಲು ವಧು-ವರರು ತಮ್ಮ ಮದುವೆಗೆ ವಿನೂತನ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. 

'ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ' ಎಂಬ ಮಾತಿದೆ. ಆದರೆ ಈ ಮದುವೆ ಗಡಿ ಚೆಕ್‍ಪೋಸ್ಟ್ ನಲ್ಲಿ ನಡೆದುಹೋಗಿದೆ. ಇವರಿಬ್ಬರು ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೊವಿಡ್‍ ನಿರ್ಬಂಧಗಳಿಂದ ತೊಂದರೆಯಾಗದಂತೆ ಗಡಿ ಚೆಕ್‌ಪೋಸ್ಟ್‌ನಲ್ಲೇ ತಾಳಿ ಕಟ್ಟಲು ನಿರ್ಧರಿಸಿದ್ದರು. ಇಬ್ಬರಲ್ಲಿ ಯಾರೊಬ್ಬರೂ ಗಡಿಯನ್ನು ದಾಟಿ ಪಕ್ಕದ ರಾಜ್ಯ ಪ್ರವೇಶಿಸಿದರೆ ಕ್ವಾರಂಟೈನ್‍ನಲ್ಲಿ ಇರಬೇಕಾಗಿತ್ತು. ಮದುವೆಗೆ ಎರಡೂ ಕಡೆಯ ಬೆರಳೆಣಿಕೆಯಷ್ಟು ಕುಟುಂಬ ಸದಸ್ಯರು ಮಾತ್ರ ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com