ಮಂಗಳೂರು: ಮೀನು ಹಿಡಿಯುವ ದೋಣಿ ಮುಳುಗಡೆ, 6 ಮೀನುಗಾರರು ಪ್ರಾಣಾಪಾಯದಿಂದ ಪಾರು

ದೈತ್ಯ ಅಲೆಗಳಿಗೆ ಸಿಕ್ಕ ಮೀನುಗಾರಿಕಾ ದೋಣಿ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 
 

Published: 25th July 2020 03:11 PM  |   Last Updated: 25th July 2020 04:18 PM   |  A+A-


Posted By : raghavendra
Source : Online Desk

ಮಂಗಳೂರು: ದೈತ್ಯ ಅಲೆಗಳಿಗೆ ಸಿಕ್ಕ ಮೀನುಗಾರಿಕಾ ದೋಣಿ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರಿನ ಹಳೆಯಂಗಡಿ ಗ್ರಾಮ ವ್ಯಾಪ್ತಿಯ ಶಿಹಿತ್ಲು ಎಂಬಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಘಟನೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಪ್ರಮೋದ್, ಸುಧಾಕರ್ ಸಾಲಿಯನ್, ಕುಮಾರ್, ಹೇಮಚಂದ್ರ, ಸೋಮನಾಥ್ ಮತ್ತು ಸಿರಾಜ್  ಎನ್ನುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೀನುಗಾರರು, ಹವಾಮಾನದಲ್ಲಿನ ಹಠಾತ್ ಬದಲಾವಣೆಗಳಿಂದಾಗಿ ಬೃಹತ್ ಅಲೆಗಳು ಎದ್ದು ದೋಣಿ ಮುಳುಗಿದಾಗ ಸಂಕಟಕ್ಕೆ ಸಿಕ್ಕಿದ್ದರು.ದೋಣಿ ಅಲುಗಾಡಲು ತೊಡಗಿದಾಗ ರಕ್ಷಣೆಗೆ ಮುಂದಾದ ಅವರು  ಮೂವರು ಮೀನುಗಾರರು ದಡಕ್ಕೆ ಈಜಿ ತಮ್ಮನ್ನು ರಕ್ಷಿಸಿಕೊಂಡರೆ ಇತರರನ್ನು ಅದರ ಸಮೀಪದಲ್ಲಿದ್ದ ದೋಣಿಯಲ್ಲಿನ ಜನರು ರಕ್ಷಿಸಿದ್ದಾರೆ. 

ಅದಾಗ್ಯೂ ದೋಣಿ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿದೆ. ಮೀನುಗಾರರಲ್ಲಿ ಕುಮಾರ್ ಎಂಬಾತ ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗಿದ್ದು ಘಟನೆಯಿಂದ ಸುಮಾರು ಮೂರು ಲಕ್ಷ ರು, ನಷ್ಟವಾಗಿದೆ ಎಂದು ಹೇಳಲಾಗಿದೆ, 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp