ಕೊರೋನಾದಿಂದ ಗುಣಮುಖರಾದ ರಾಜಕಾರಣಿಗಳಿಂದ ಜನತೆಗೆ ಜಾಗೃತಿ 

ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಂದಿರುವ ನಮ್ಮ ಹಲವು ರಾಜಕಾರಣಿಗಳು ಈಗ ತಮ್ಮ ತಮ್ಮ ಕ್ಷೇತ್ರದ ಜನತೆಗೆ ಕೊರೋನಾ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಂದಿರುವ ನಮ್ಮ ಹಲವು ರಾಜಕಾರಣಿಗಳು ಈಗ ತಮ್ಮ ತಮ್ಮ ಕ್ಷೇತ್ರದ ಜನತೆಗೆ ಕೊರೋನಾ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.

ಹೇಗೆ ಶೀಘ್ರವಾಗಿ ಸೋಂಕು ಪತ್ತೆ ಹಚ್ಚಬೇಕು ಮತ್ತು ಚಿಕಿತ್ಸೆ ಪಡೆಯಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಕೊರೋನಾ ಸೋಂಕಿಗೊಳಗಾಗಿದ್ದರು, ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೊರೋನಾ ಬಗ್ಗೆ ಇರುವ ಭಯ ಹೋಗಲಾಡಿಸಲು ಮುಂದಾಗಿದ್ದಾರೆ. 

ಇನ್ನು ಕುಣಿಗಲ್ ಶಾಸಕ ರಂಗನಾಥ್ ದೊಡ್ಡಯ್ಯ ಫೇಸ್ ಬುಕ್ ಲೈವ್ ನಲ್ಲಿ ಜನರು ಆತಂಕ ಪಡಬಾರದೆಂದು ಹೇಳಿದ್ದಾರೆ. ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಕೋವಿಡ್ ವಾರ್ ರೂಂ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.

ಶಾಸಕ ರಂಗನಾಥ್ ಅವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಂಸದ ಡಿಕೆ ಸುರೇಶ್ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದರು,  ನಂತರ ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತ ಮೃತನ  ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದ್ದರು. ಶಾಸಕ ಅಜಯ್ ಸಿಂಗ್, ಭರತ್ ಶೆಟ್ಟಿ, ಎಚ್ ಕೆ ಕುಮಾರಸ್ವಾಮಿ, ಬಿಶಿವಣ್ಣ ಹಾಗೂ ಎಂ ಕೆ ಪ್ರಾಣೇಶ್ ಅವರಿಗೂ ಕೊರೋನಾ ಸೋಂಕು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com