ಗದಗ: ಪತಿಯ ಅಂತ್ಯಸಂಸ್ಕಾರಕ್ಕಾಗಿ ಮಂಗಳಸೂತ್ರ ಒತ್ತೆಯಿಟ್ಟ ಆ್ಯಂಬುಲೆನ್ಸ್ ಚಾಲಕನ ಪತ್ನಿ!

ಆ್ಯಂಬುಲೆನ್ಸ್ ಚಾಲಕನ ಪತ್ನಿ ಹಣವಿಲ್ಲದ ಕಾರಣ ತನ್ನ ಮಂಗಳಸೂತ್ರವನ್ನು ಅಡವಿಟ್ಟು ಪತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಹೃದಯ ವಿದ್ರಾವಕ ಘಟನೆ ಗದಗದಲ್ಲಿ ನಡೆದಿದೆ.ಈ ಸಂಬಂಧ ದೂರವಾಣಿ ಕರೆ ಮಾಡಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

Published: 02nd June 2020 07:58 AM  |   Last Updated: 02nd June 2020 12:49 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಹುಬ್ಬಳ್ಳಿ: ಆ್ಯಂಬುಲೆನ್ಸ್ ಚಾಲಕನ ಪತ್ನಿ ಹಣವಿಲ್ಲದ ಕಾರಣ ತನ್ನ ಮಂಗಳಸೂತ್ರವನ್ನು ಅಡವಿಟ್ಟು ಪತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಹೃದಯ ವಿದ್ರಾವಕ ಘಟನೆ ಗದಗದಲ್ಲಿ ನಡೆದಿದೆ.ಈ ಸಂಬಂಧ ದೂರವಾಣಿ ಕರೆ ಮಾಡಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಸಹಾಯ ಮಾಡುವ ಭರವಸೆ ನೀಡಿದ್ದಾರೆ,

ಮೇ 27 ರಂದು ಗದಗ ಜಿಲ್ಲೆಯ ಕೊಣ್ಣೂರಿನಲ್ಲಿ ಘಟನೆ ನಡೆದಿದೆ, ಮೇ 27 ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಉಮೇಶ್ ಹಡಗಲಿ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ರು. ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಸಾವನ್ನಪ್ಪಿದ್ದರು.

ಉಮೇಶ್ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಅವರಿಗೆ ವೇತನ ನೀಡಿರಲಿಲ್ಲ., ಪತಿಯ ಅಂತ್ಯ ಸಂಸ್ಕಾರಕ್ಕೆ ಹಣಕ್ಕಾಗಿ ಹಲವೆಡೆ ಅಲೆದಾಡಿದ್ದಾರೆ. ಆದರೆ ಎಲ್ಲಿಯೂ ಹಣ ಸಿಗದ ಕಾರಣ ತಾಳಿ ಒತ್ತೆ ಇಟ್ಟಿದ್ದಾರೆ ಉಮೇಶ್ ಪತ್ನಿ ಜ್ಯೋತಿ. ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಂಜಿ ಹೀರೆಮಠ್ ಪ್ರಕರಣ ಸಂಬಂಧ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp