ಕೊಪ್ಪಳ: ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ಕೊರೋನಾ ಪಾಸಿಟಿವ್!

ಗಂಗಾವತಿ ತಾಲೂಕಿನ 52 ವರ್ಷದ  5834ನೇ ರೋಗಿ ಸೇರಿದಂತೆ ಕೆಲವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯ ಇಲ್ಲದಿದ್ದರೂ ಕೊರೋನಾ ಸೋಂಕು ತಗುಲಿದೆ. ಮಾರಕ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮುಂದಾಗಿರುವ ಕೊಪ್ಪಳ ಜಿಲ್ಲಾಡಳಿತ 45 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ.
ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಜನರನ್ನು ಪರೀಕ್ಷಿಸುತ್ತಿರುವ ಆರೋಗ್ಯಾಧಿಕಾರಿಗಳು
ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಜನರನ್ನು ಪರೀಕ್ಷಿಸುತ್ತಿರುವ ಆರೋಗ್ಯಾಧಿಕಾರಿಗಳು

ಕೊಪ್ಪಳ: ಗಂಗಾವತಿ ತಾಲೂಕಿನ 52 ವರ್ಷದ  5834ನೇ ರೋಗಿ ಸೇರಿದಂತೆ ಕೆಲವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯ ಇಲ್ಲದಿದ್ದರೂ ಕೊರೋನಾ ಸೋಂಕು ತಗುಲಿದೆ. ಮಾರಕ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮುಂದಾಗಿರುವ ಕೊಪ್ಪಳ ಜಿಲ್ಲಾಡಳಿತ 45 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ. 

ಜಿಲ್ಲಾ ಕ್ರೀಡಾಂಗಣ, ಹಾಸ್ಟೆಲ್ ಗಳನ್ನು 2740 ಹಾಸಿಗೆಯ ಸಾಮರ್ಥ್ಯದೊಂದಿಗೆ  ಹೊಸ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದ್ದು, ಈಗಾಗಲೇ ಇಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ಕೊಪ್ಪಳ ತಾಲೂಕಿನಲ್ಲಿ 750 ಹಾಸಿಗೆಯ ಸಾಮರ್ಥ್ಯದೊಂದಿಗೆ 12 ಕ್ವಾರಂಟೈನ್ ಕೇಂದ್ರಗಳಿದ್ದು, ಅವುಗಳಲ್ಲಿ 53 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 25 ಪ್ರಕರಣಗಳಿವೆ ಎಂದು ಶಂಕಿಸಲಾಗಿರುವ ಗಂಗಾವತಿ ತಾಲೂಕಿನಲ್ಲಿ 1085 ಹಾಸಿಗೆ ಸಾಮರ್ಥ್ಯದ 21 ಕೇಂದ್ರಗಳಿವೆ.

ಕುಷ್ಟಗಿ ತಾಲೂಕಿನಲ್ಲಿ 540 ಹಾಸಿಗೆ ಸಾಮರ್ಥ್ಯದೊಂದಿಗೆ 8 ಕ್ವಾರಂಟೈನ್ ಕೇಂದ್ರಗಳಿವೆ. ಯಲಬುರ್ಗಾ ತಾಲೂಕಿನಲ್ಲಿ 250 ಕೊರೋನಾ ಪ್ರಕರಣಗಳ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, 365 ಹಾಸಿಗೆ ಸಾಮರ್ಥ್ಯದೊಂದಿಗೆ ನಾಲ್ಕು ಕ್ವಾರಂಟೈನ್ ಕೇಂದ್ರಗಳಿವೆ. 

ಎಲ್ಲಿಯೂ ಸೋಂಕು ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶುಕ್ರವಾರ 13 ಕೇಸ್ ಗಳು ವರದಿಯಾಗಿದ್ದು, ನಾಲ್ವರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com