ಚಿಕ್ಕಬಳ್ಳಾಪುರ: ಬೋರ್ ವೆಲ್ ಲಾರಿ ಪಲ್ಟಿ, ಮೂವರ ಸಾವು: ಮತ್ತಿಬ್ಬರ ಸ್ಥಿತಿ ಗಂಭೀರ

ಬೋರ್ ವೆಲ್ ಪೈಪುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಕಸ್ಮಿಕವಾಗಿ ರಸ್ತೆ ಬದಿಗೆ ಮುಗುಚಿ ಬಿದ್ದ ಪರಿಣಾಮವಾಗಿ ಮೂರು ಮಂದಿ ಕೂಲಿ ಕಾರ್ಮಿಕರು  ಸ್ಥಳದಲ್ಲಿಯೇ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Published: 24th June 2020 12:07 PM  |   Last Updated: 24th June 2020 12:07 PM   |  A+A-


Representational iimage

ಸಾಂದರ್ಭಿಕ ಚಿತ್ರ

Posted By : Shilpa D
Source : Online Desk

ಚಿಕ್ಕಬಳ್ಳಾಪುರ: ಬೋರ್ ವೆಲ್ ಪೈಪುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಕಸ್ಮಿಕವಾಗಿ ರಸ್ತೆ ಬದಿಗೆ ಮುಗುಚಿ ಬಿದ್ದ ಪರಿಣಾಮವಾಗಿ ಮೂರು ಮಂದಿ ಕೂಲಿ ಕಾರ್ಮಿಕರು  ಸ್ಥಳದಲ್ಲಿಯೇ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕ ಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಸಮೀಪದ ಹೊಸವುಡ್ಯ‌ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸಮೀಪದ‌ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರ ಪೈಕಿ ಇಬ್ಬರು ಮಧ್ಯಪ್ರದೇಶ ಹಾಗೂ ಮತ್ತೊಬ್ಬ ಛತ್ತೀಸ್ ಗಢ ನಿವಾಸಿಗಳೆಂದು ತಿಳಿದು ಬಂದಿದೆ. ಬೋರ್ ವೆಲ್ ಕೊರೆಯುವ ಲಾರಿಗೆ ಪೈಪುಗಳು ಒದಗಿಸುವ ಸಹಾಯಕ ಲಾರಿ ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ‌ ಲಾರಿಯೊಳಗಿನ ಕಬ್ಬಿಣದ ಪೈಪುಗಳ ಮಧ್ಯೆ ಸಿಲುಕಿಕೊಂಡ ಕೂಲಿ‌ ಕಾರ್ಮಿಕರನ್ನು ಜೆಸಿಬಿ ಯಂತ್ರದ ಸಹಾಯದೊಂದಿಗೆ ಪೈಪುಗಳನ್ನು ತೆರವುಗೊಳಿಸಿ ಕಾರ್ಮಿಕರನ್ನು  ಹೊರ ತೆಗೆಯಲಾಗಿದೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp