ಬೆಂಗಳೂರು: ಮಗುವನ್ನು ದತ್ತು ಪಡೆದು ಬೆಳೆಸಿದ ತಂದೆಗೆ 'ವಿಶ್ವದ ಅತ್ಯುತ್ತಮ ತಾಯಿ' ಪ್ರಶಸ್ತಿ!

2016ರಲ್ಲಿ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ದತ್ತು ಪಡೆದು ತಾಯಿಯಂತೆ ಆರೈಕೆ ಮಾಡಿ ಬೆಳೆಸುತ್ತಿರುವ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೆ ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆದಿತ್ಯ ತಿವಾರಿ
ಆದಿತ್ಯ ತಿವಾರಿ

ಬೆಂಗಳೂರು: 2016ರಲ್ಲಿ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ದತ್ತು ಪಡೆದು ತಾಯಿಯಂತೆ ಆರೈಕೆ ಮಾಡಿ ಬೆಳೆಸುತ್ತಿರುವ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೆ ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹಾರಾಷ್ಟ್ರದ ಪುಣೆಯ ಆದಿತ್ಯ ತಿವಾರಿ 2016ರಲ್ಲಿ ಅವನಿಶ್ ಎಂಬ ಮಗುವನ್ನು ದತ್ತು ಪಡೆದಿದ್ದರು. ಆದರೆ ಸಿಂಗಲ್ ಪೇರೆಂಟ್ ಎಂಬ ಕಾರಣಕ್ಕೆ ಹಲವು ಕಾನೂನು ತೊಡಕುಗಳನ್ನು ಎದುರಿಸಬೇಕಾಯಿತು. ಆದರೆ ಇದು ಯಾವುದರ ಪರಿವೆಯೂ ಇಲ್ಲದ ಅವನಿಶ್ ಮಾತ್ರ ತಿವಾರಿಯನ್ನು ತನ್ನವರೆಂದು ಒಪ್ಪಿಕೊಂಡಿದ್ದ.

ಇನ್ನು ಅವನಿಶ್ ನನ್ನು ದತ್ತು ಪಡೆದ ನಂತರ ಒಂದೂವರೆ ವರ್ಷ ನಾನು ತುಂಬಾ ಕಷ್ಟ ಪಡಬೇಕಾಯಿತು. ನಂತರ ಅವನ ತುಂಟಾಟ, ಲವಲವಿಕೆಯ ಓಡಾಟ ನಿಜಕ್ಕೂ ನನಗೊಂದು ಹೊಸ ಪ್ರಪಂಚವನ್ನೇ ಪರಿಚಯ ಮಾಡಿದೆ ಎಂದು ಆದಿತ್ಯ ತಿವಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com