ಮಧ್ಯಪ್ರದೇಶ ಸಚಿವರು, ಶಾಸಕರು, ಡಿಜಿಪಿ ಪ್ರವೀಣ್ ಸೂದ್
ಮಧ್ಯಪ್ರದೇಶ ಸಚಿವರು, ಶಾಸಕರು, ಡಿಜಿಪಿ ಪ್ರವೀಣ್ ಸೂದ್

ರಕ್ಷಣೆಗಾಗಿ ಬೆಂಗಳೂರು ಪೊಲೀಸರ ಮೊರೆ ಹೋದ ಮಧ್ಯಪ್ರದೇಶದ ಸಚಿವರು, ಶಾಸಕರು!

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿರುವ ಕಾಂಗ್ರೆಸ್ ಶಾಸಕರು, ಸಚಿವರು ಬಿಗಿ ಭದ್ರತೆಯಲ್ಲಿ ನಗರದಲ್ಲಿ ತಂಗಿದ್ದಾರೆ. ವೈಟ್ ಫೀಲ್ಡ್ ಬಳಿಯ ಆದರ್ಶ ಹೋಟೆಲ್ ನಲ್ಲಿರುವ ಆರು ಮಂದಿ ಸಚಿವರು, 11 ಶಾಸಕರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ನೀಡುವಂತೆ ಮನವಿಮಾಡಿದ್ದಾರೆ

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿರುವ ಕಾಂಗ್ರೆಸ್ ಶಾಸಕರು, ಸಚಿವರು ಬಿಗಿ ಭದ್ರತೆಯಲ್ಲಿ ನಗರದಲ್ಲಿ ತಂಗಿದ್ದಾರೆ. ವೈಟ್ ಫೀಲ್ಡ್ ಬಳಿಯ ಆದರ್ಶ ಹೋಟೆಲ್ ನಲ್ಲಿರುವ ಆರು ಮಂದಿ ಸಚಿವರು, 11 ಶಾಸಕರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ನೀಡುವಂತೆ ಮನವಿಮಾಡಿದ್ದಾರೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಿದ್ಧಪಡಿಸಿಕೊಂಡಿರುವ ತಮ್ಮ ಮೇಲೆ ದಾಳಿ ಆಗಬಹುದು ಎನ್ನುವ ಆತಂಕದಿಂದ ಪೊಲೀಸರ ಮೊರೆ ಹೋಗಿದ್ದಾರೆ. ತಾವು ಸ್ವಯಂ ಪ್ರೇರಣೆಯಿಂದ ಮಹತ್ವದ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದ್ದಾರೆ

ಬೆಂಗಳೂರಿನಲ್ಲಿ ನಾವು ವಾಸ್ತವ್ಯ ಹೂಡುವ ತನಕ ನಮಗೆ ರಕ್ಷಣೆ ನೀಡಬೇಕು. ನಮ್ಮ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಈ ಶಾಸಕರು ಸಹಿ ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ

ಈ ಮಧ್ಯೆ ಬೆಂಗಳೂರಿನಲ್ಲಿ ತಂಗಿರುವ ಮಧ್ಯ ಪ್ರದೇಶ ಶಾಸಕರು,ಸಚಿವರು ತಮ್ಮ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಸೂಚನೆಗಾಗಿ ಕಾಯುತ್ತಿದ್ದಾರೆ. 

ಈ ಮಧ್ಯೆ ಪ್ರದೇಶ ಶಾಸಕರ ಜತೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ಮುಖಂಡರು ನಿರಾಸಕ್ತಿ ತೋರಿಸಿದ್ದಾರೆ. ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ, ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಸಹ ಮೌನದ ಮೊರೆ ಹೋಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಲ್ಲಿ ನಿರಾಸೆ ಮೂಡಿದ್ದು, ಸರ್ಕಾರ ಉಳಿಸಿಕೊಳ್ಳುವ ಆಸೆ ಕಮರುವಂತಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com