ಬಾಗಲಕೋಟೆ:: ಹೋಳಿ ಹಬ್ಬದಲ್ಲಿ ರೇನ್ ಡ್ಯಾನ್ಸ್! ಬಣ್ಣದಾಟದಲ್ಲಿ ಮಿಂದೆದ್ದ ಯುವಸಮೂಹ

ನಗರದ ಐತಿಹಾಸಿಕ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಆರಂಭಗೊAಡ ಬಣ್ಣ ಬಣ್ಣದ ರಂಗಿನಾಟದಲ್ಲಿ ಗಂಡು,ಹೆಣ್ಣು ಎನ್ನುವ ಬೇಧವಿಲ್ಲದೆ ಬಹುತೇಕ ಎಲ್ಲರೂ ಸೇರಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಬಾಗಲಕೋಟೆಯಲ್ಲಿ ಹೋಳಿ ಆಚರಣೆ
ಬಾಗಲಕೋಟೆಯಲ್ಲಿ ಹೋಳಿ ಆಚರಣೆ

ಬಾಗಲಕೋಟೆ: ನಗರದ ಐತಿಹಾಸಿಕ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಆರಂಭಗೊAಡ ಬಣ್ಣ ಬಣ್ಣದ ರಂಗಿನಾಟದಲ್ಲಿ ಗಂಡು,ಹೆಣ್ಣು ಎನ್ನುವ ಬೇಧವಿಲ್ಲದೆ ಬಹುತೇಕ ಎಲ್ಲರೂ ಸೇರಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಕೊರೊನಾ ಭೀತಿಯ ಮಧ್ಯೆಯೂ ಯುವ ಸಮೂಹ ರಂಗಿನಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಜಮಾಯಿಸಿದ್ದ ಯುವ ಜನತೆ ಪರಸ್ಪರ ಬಣ್ಣ ಎರಚಾಡಿದರು. ಇಡೀ ನಗರ ಬಣ್ಣದಾಟದಲ್ಲಿ ಮುಳುಗಿತ್ತು. 

ಮಧ್ಯಾಹ್ನ ಆರಂಭಗೊAಡ ಬಣ್ಣದ ಬಂಡಿ ಮೆರವಣಿಗೆ ಯುವಕರ ಉತ್ಸಾಹದ ಎಲ್ಲೆಯನ್ನು ಮೀರಿಸಿದಂತಿತ್ತು. ಬಣ್ಣದ ಬಂಡಿಗಳಲ್ಲಿನ ಬ್ಯಾರಲ್‌ಗಳಲ್ಲಿದ್ದ ಬಣ್ಣ ನೀರನ್ನು ಆಕಾಶದತ್ತ ಹಾರಿಸುವ ಮೂಲಕ ಅದನ್ನು ಚಿತ್ತಚಿತ್ತಾರವಾಗಿ ಮೂಡಿಸುತ್ತಿದ್ದ ರೀತಿ ವಿಸ್ಮಯಕಾರಿ ಎನ್ನುವಂತಿತ್ತು.

ಹೋಳಿಯ ಜಾನಪದ ಹಾಡುಗಳ ಅರ್ಭಟವೂ ಜೋರಾಗಿತ್ತು. ಪರಸ್ಪರರು ಪೈಪೋಟಿಗೆ ಬಿದ್ದು ಏಟಿಗೆ ಇದಿರೇಟು ಎನ್ನುವಂತೆ ಹಾಡುವುದು ಕಂಡು ಬಂದಿತು.

ಬಣ್ಣದ ಎರಡನೇ ದಿನಕ್ಕೆ ನಗರ ಭರ್ಜರಿಯಾಗಿ ಸಜ್ಜಾಗಿದೆ. ನಗರದ ಬಸವೇಶ್ವರ ವೃತ್ತದ ಬಳಿಯ ಎಂಜಿ ರಸ್ತೆಯಲ್ಲಿ “ರೆಡ್‌ರೇನ್” (ವಾಟರ್ ಡಾನ್ಸ್) ಹೋಳಿ ಆಚರಣಾ ಸಮಿತಿ ಬಹುದೊಡ್ಡ ಪ್ರಮಾಣದಲ್ಲಿ ಸಿದ್ದತೆ ಮಾಡಿದ್ದು, ಇದಕ್ಕಾಗಿ ಅಗತ್ಯ ನೀರಿನ ವ್ಯವಸ್ಥೆ ಮಾಡಿಕೊಂಡಿದೆ. ನಗರದ ಇಡೀ ಸಮೂಹ ರೆಡ್‌ರೇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ರಾಷ್ಟç ಮಟ್ಟದ ಖ್ಯಾತಿಯ ಬಾಗಲಕೋಟೆಯ ಬಣ್ಣದಾಟಕ್ಕೆ ರೆಡ್‌ರೇನ್ ಸಾಕ್ಷಿಯಾಗಲಿದೆ.

ಸಹಸ್ರ,ಸಹಸ್ರ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರೂ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ೧೦ ಕ್ಕೆ ಆರಂಭಗೊಳ್ಳಲಿರುವ ರೆಡ್‌ರೇನ್ ಸಂಭ್ರಮ ಮಧ್ಯಾಹ್ನದವರೆಗೂ ನಡೆಯಲಿದೆ.

ಏತನ್ಮಧ್ಯೆ ಬಾಗಲಕೋಟೆ ಐತಿಹಾಸ ಹೋಳಿಯನ್ನು ರಾಷ್ಟಿçÃಯ ಹಬ್ಬವನ್ನಾಗಿಸಬೇಕು ಎನ್ನುವ ಪ್ರಯತ್ನಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಹೋಳಿ ಆಚರಣಾ ಸಮಿತಿ ಈಗಾಗಲೇ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಸಲ್ಲಿಸಿದ್ದು, ಸ್ಥಳೀಯ ಶಾಸಕರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಬ್ಬಕ್ಕೆ ಹೆಚ್ಚಿನ ರಂಗು ಮೂಡಿಸಲು ಒಪ್ಪಿಕೊಂಡಿದ್ದಾರೆ.

ಬಾಗಲಕೋಟೆಯ ಐತಿಹಾಸಿಕ ಬಣ್ಣದ ಹಬ್ಬವನ್ನು ಸಾಂಸ್ಕೃತಿಕ ಉತ್ಸವವನ್ನಾಗಿಸುವ ಹಲವು ವರ್ಷಗಳ ಪ್ರಯತ್ನಕ್ಕೆ ಈ ಬಾರಿ ಸೂಕ್ತ ಸ್ಪಂದನೆ ಸಿಕ್ಕಿದ್ದು, ಬಹುಶಃ ಮುಂದಿನ ವರ್ಷ ಬಾಗಲಕೋಟೆ ಹೋಳಿ ಸಾಂಸ್ಕೃತಿಕ ಉತ್ಸವವಾಗಿ ರೂಪಗೊಳ್ಳುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ.

ಪ್ರತಿವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಊರು ಬಿಟ್ಟು ಪ್ರವಾಸಕ್ಕೆ ತೆರಳುತ್ತಿದ್ದ ಬಾಗಲಕೋಟೆ ನಗರದ ಜನತೆ ಪ್ರವಾಸವನ್ನು ರದ್ದುಗೊಳಿಸಿದ್ದಲ್ಲದೆ, ಬಣ್ಣದಾಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜನತೆ ಊರು ಬಿಡದೇ ಬಣ್ಣದಾಟದಲ್ಲಿ ಭಾಗವಹಿಸಿದ್ದು ಬಣ್ಣದ ಸಂಭ್ರಮ ಇಮ್ಮಡಿಗೊಂಡಿತ್ತು. ನಾಳಿನ ಬಣ್ಣದಾಟ ಇನ್ನಷ್ಟು ರಂಗು ಪಡೆದುಕೊಳ್ಳಲಿದೆ ಎನ್ನುವುದನ್ನು ಸಾಕ್ಷಿಕರಿಸಿತು.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com