ಬಳ್ಳಾರಿ: ಮಹಾರಾಷ್ಟ್ರ ಮೂಲದ ಮೂವರು ಕಳ್ಳರ ಬಂಧನ, 71 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬಳ್ಳಾರಿ ಮತ್ತು ಹೊಸಪೇಟೆ ನಗರದಲ್ಲಿನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗದ ಪೊಲೀಸ್‌ ಅಧಿಕಾರಿಗಳು ಮೂವರು ಕಳ್ಳರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಬಳ್ಳಾರಿ ಮತ್ತು ಹೊಸಪೇಟೆ ನಗರದಲ್ಲಿನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗದ ಪೊಲೀಸ್‌ ಅಧಿಕಾರಿಗಳು ಮೂವರು ಕಳ್ಳರನ್ನು ಬಂಧಿಸಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಇವರು ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದು, ಅವರಿಂದ 1.680 ಕೆ.ಜಿ ಚಿನ್ನ ಮತ್ತು 15.33 ಕೆ.ಜಿ ಬೆಳ್ಳಿ ಸೇರಿ ಒಟ್ಟು 71.09 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಬಂಧಿತರು ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯ ಗಂಗಾಪುರ ತಾಲೂಕಿನ ಪಕೋರ ಗ್ರಾಮದ ಬಚ್ಚನ್ (27), ಔರಂಗಬಾದ್‌ ಜಿಲ್ಲೆ ಗಂಗಾಪುರ ತಾಲೂಕಿನ ವಜರ್‌ ನಿವಾಸಿ ಕಮಲಾಕರ್‌ ವಿವೆಕ್(38) ಹೊಸಪೇಟೆ ನಿವಾಸಿ ಚೆನ್ನಪ್ಪ (37) ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸ್ ಅಧಿಕಾರಿಗಳ ತಂಡ ಮಾ.17ರಂದು ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಚ್ಚನ್‌ ಮತ್ತು ವಿವೇಕ್‌ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಔರಂಗಬಾದ್‌ನಿಂದ ಕಳ್ಳತನ ಮಾಡಲು ಹೊಸಪೇಟೆಗೆ ಆಗಮಿಸಿದ್ದಾಗಿ ತಿಳಿದು ಬಂದಿದೆ. 

ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. 

ಬಂಧಿತ ಆರೋಪಿಗಳು ಕಳೆದ 2015ರಿಂದ ಇಲ್ಲಿಯವರೆಗೆ ಹೊಸಪೇಟೆ ಬಡಾವಣೆ ಠಾಣೆಯಲ್ಲಿ- 2, ಹೊಸಪೇಟೆ ಪಟ್ಟಣ ಠಾಣೆಯ - 6, ಚಿತ್ತವಾಡಗಿ - 2, ಹೊಸಪೇಟೆ ಗ್ರಾಮೀಣ - 2, ಕಮಲಾಪುರ - 1, ಕೌಲ್‌ಬಜಾರ್‌ -1. ಗಾಂಧಿನಗರ - 3 ಒಟ್ಟು ಒಟ್ಟು 17 ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಮತ್ತೊಂದು ಪ್ರಕರಣದಲ್ಲಿ ಮಾ.23ರಂದು ಕಳ್ಳತನ ಆರೋಪದಲ್ಲಿ ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಪೊಲೀಸ್‌ ಅಧಿಕಾರಿಗಳು ಪೆನ್ನಪ್ಪ ಎನ್ನುವ ಆರೋಪಿಯನ್ನ ಬಂಧಿಸಿ, ಆತನಿಂದ 391 ಗ್ರಾಂ ಚಿನ್ನ ಮತ್ತು 2.650 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com