ತುಮಕೂರು: ಹಾಲಿಗಾಗಿ ಮುಗಿಲು ಮುಟ್ಟಿದ ಕೋವಿಡ್-19 ವೃದ್ಧನ ಮೊಮ್ಮಕ್ಕಳ ರೋಧನ!

ಶಿರಾದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೃದ್ಧನ ರಕ್ತಸಂಬಂಧಿಕರು ಸಾಮಾಜಿಕ ತಾತ್ಸಾರಕ್ಕೊಳಗಾಗಿರುವುದಲ್ಲದೇ, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿರುವ ಆಸ್ಪತ್ರೆಯಲ್ಲಿಯೂ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ.
ಮಲ್ಲಿಕ್ ರೆಹಾನ್ ದರ್ಗಾ
ಮಲ್ಲಿಕ್ ರೆಹಾನ್ ದರ್ಗಾ

ತುಮಕೂರು: ಶಿರಾದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೃದ್ಧನ ರಕ್ತಸಂಬಂಧಿಕರು ಸಾಮಾಜಿಕ ತಾತ್ಸಾರಕ್ಕೊಳಗಾಗಿರುವುದಲ್ಲದೇ, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿರುವ ಆಸ್ಪತ್ರೆಯಲ್ಲಿಯೂ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ.

ಆ ವೃದ್ಧನ ಒಂದು ವರ್ಷದ ಇಬ್ಬರು ಮೊಮ್ಮಕ್ಕಳು ಬೆಳಗ್ಗೆಯಿಂದಲೂ  ಹಾಲಿಗಾಗಿ ರೋಧಿಸುತ್ತಿರುವ ದೃಶ್ಯ ಕರಳು ಹಿಂಡುವಂತಿದೆ. ಆ ಮಕ್ಕಳಿಗೆ ಹಾಲುಣಿಸಲು ಸಾಧ್ಯವಾಗದೆ ತಾಯಿ ಕೂಡಾ ಅಸಹಾಯಕತೆಯಲ್ಲಿ ಅಳುತ್ತಿರುತ್ತಾರೆ.  ಅಗ್ನಿಶಾಮಕ ದಳ,  ಅಂಬ್ಯುಲೆನ್ಸ್ ಹಾಗೂ ಪೊಲೀಸರು ಜನತೆಗೆ ನೀಡುವ ಎಚ್ಚರಿಕೆಯ ಸೈರನ್ ಗಳ ಮಧ್ಯ ಅವರ ಅಳಲು ಹೊರಗಿನ ಜಗತ್ತಿಗೆ ಕೇಳಿಸುತ್ತಿಲ್ಲ. 

ತಾಯಿ-ಮಗುವಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಮಿಸಿರುವ ಹೊಸ ಕಟ್ಟಡ ಹೆಚ್ಚಾಗಿ ಜನಸಂಪರ್ಕದಲ್ಲಿಲ್ಲ, 
ಆಹಾರವನ್ನು ಕಿಟಕಿಯ ಮೂಲಕ ಪೂರೈಕೆ ಮಾಡಲಾಗುತ್ತದೆ. ಅಗತ್ಯ ವಸ್ತುಗಳಿಗೆ ಖೈದಿಗಳ ರೀತಿಯಲ್ಲಿ ಮನವಿ ಮಾಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

 ಇಬ್ಬರು ಮೊಮ್ಮಕ್ಕಳು ಹುಟ್ಟಿನಿಂದಲೂ ನ್ಯೂರೊಲಾಜಿ ತೊಂದರೆಯಿಂದ ಬಳಲುತ್ತಿದ್ದರೂ ಮಾತ್ರೆ ನೀಡದಂತಾಗಿದೆ. ಇಬ್ಬರು ಹೆಣ್ಣುಮಕ್ಕಳು, ಇತರ ಏಳು ಮಂದಿ ಅಪ್ರಾಪ್ತರು ಸೇರಿದಂತೆ 19ಕ್ಕೂ ಹೆಚ್ಚು ಮಂದಿಯನ್ನು ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದೆ. ಅವರ ಪರೀಕ್ಷಾ ವರದಿ ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ. 

ಈ ಮಧ್ಯೆ  ಶಿರಾ ಪಟ್ಟಣದಲ್ಲಿ ಶುಚಿತ್ವ ಕಾಪಾಡುವುದು ಸೇರಿದಂತೆ ಇನ್ನಿತರ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಬಿಜಾಪುರ ಸುಲ್ತಾನರು ಹಾಗೂ ಮೊಘಲರು ಶಿರಾವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದರಿಂದ ಇಲ್ಲಿ ಅಸಂಖ್ಯಾತ ಮುಸ್ಲಿಂರು ಇದ್ದಾರೆ.

ಕೊರೋನಾ ಸಾವು ಘಟನೆಯಿಂದಾಗಿ ಶಿರಾದಲ್ಲಿ ಒಂದು ನಿರ್ದಿಷ್ಠ ಸಮುದಾಯವನ್ನು ಶಂಕೆಯ ಮೇಲೆ ನೋಡಲಾಗುತ್ತಿದೆ ಎಂದು ಪ್ರಗತಿಪರ ಲೇಖಕರೊಬ್ಬರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com