ತುಮಕೂರು ಜನತೆಗೆ ಸದ್ಯಕ್ಕೆ ರಿಲೀಫ್: ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ನೆಗೆಟಿವ್

ತುಮಕೂರಿನಲ್ಲಿ ಕರೋನಾ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಕಂಡು ಬಂದಿದೆ ಎಂದು ಬೆಂಗಳೂರಿನ ಐಸಿಎಂಆರ್ ಎನ್ ಐವಿ ಯಲಿಲು ನಡೆದ ಪರೀಕ್ಷೆಯಿಂದ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ತುಮಕೂರಿನಲ್ಲಿ ಕರೋನಾ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಕಂಡು ಬಂದಿದೆ ಎಂದು ಬೆಂಗಳೂರಿನ ಐಸಿಎಂಆರ್ ಎನ್ ಐವಿ ಯಲಿಲು ನಡೆದ ಪರೀಕ್ಷೆಯಿಂದ ದೃಢಪಟ್ಟಿದೆ.

ಈ ವಿಷಯ ಸದ್ಯ ತುಮಕೂರು ನಿವಾಸಿಗಳಲ್ಲಿ ನಿರಾಳ ಮೂಡಿಸಿದೆ.  ತುಮಕೂರಿನ ಶಿರಾಪ್ರದೇಶವನ್ನು ರೆಡ್ ಜೋನ್ ಎಂದು ಗುರುತಿಸಲಾಗಿತ್ತು. 13 ವ್ಯಕ್ತಿಗಳು ಸೋಂಕಿತನ ಜೊತೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು.ದೆಹಲಿಯ ಜಾಮಿಯಾ ಮಸೀದಿಯಲ್ಲಿ 5ದಿನ ವಾಸ್ತವ್ಯ ಹೂಡಿ ನಂತರ ಮಾರ್ಚ್ 14 ರಂದು ವಾಪಾಸಾಗಿದ್ದರು.

ಆತನ ಜೊತೆ ಪ್ರಯಾಣಿಸಿದ್ದ 10 ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು, ಅದಾದ ನಂತರ ಅವರಿಗೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ.ಮಂಡ್ಯದ ನಾಗಮಂಗಲದ ಮತ್ತೊಬ್ಬ ವ್ಯಕ್ತಿ ಇನ್ನೂ ಸಿಕ್ಕಿಲ್ಲ.

ಹೋಮ್ ಕ್ವಾರಂಟೈನ್ ನಲ್ಲಿದ್ದ ಸಂತ್ರಸ್ತನ ಕುಟುಂಬಸ್ತರಲ್ಲಿ ಕೂಡ ಟೆಸ್ಟ್ ನೆಗೆಟಿವ್ ಬಂದಿರುವುದು ಸದ್ಯಕ್ಕೆ ಸಮಾಧಾನ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com