ರಾಜ್ಯ ಸರ್ಕಾರ ಆದೇಶ ಹಿನ್ನೆಲೆ: ಮಾಸ್ಕ್ ದಂಡದ ಪ್ರಮಾಣ ಇಳಿಕೆ ಮಾಡಿದ ಬಿಬಿಎಂಪಿ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದಿದ್ದರೆ ವಿಧಿಸಲಾಗುತ್ತಿದ್ದ ಸಾವಿರ ರು. ದಂಡವನ್ನು ಇನ್ನೂರು ರು.ಗೆ ಇಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ )ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದಿದ್ದರೆ ವಿಧಿಸಲಾಗುತ್ತಿದ್ದ ಸಾವಿರ ರು. ದಂಡವನ್ನು ಇನ್ನೂರು ರು.ಗೆ ಇಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ )ಆದೇಶಿಸಿದೆ.

ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆ ಜಾರಿಯಾಗುತ್ತಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರಲಿದೆ.ಈ ವೇಳೆ ಸರ್ಕಾರ ಮಾಸ್ಕ್ ಧರಿಸದವರಿಗೆ ಎಷ್ಟು ದಂಡ ವಿಧಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಲದವರ ವಿರುದ್ಧ ಏನೆಲ್ಲಾ ಕ್ರಮ ತೆಗೆದುಕೊಳ್ಲಬೇಕೆಂದು ಹೇಳಿದ್ದು ಅದರ ಅನುಸಾರ ಬಿಬಿಎಂಪಿ ಸಹ ದಂಡದ ಮೊತ್ತ ಇಳಿಕೆ ಮಾಡಿದೆ.

ಇದಕ್ಕೆ ಮುನ್ನ ಬೆಂಗಳುರಿನಲ್ಲಿ ಮಾಸ್ಕ್ ಧರಿಸದವರಿಗೆ ಮೊದಲ ಬಾರಿಗೆ ಸಾವಿರ ರು. ಎರಡನೇ ಬಾರಿ 2 ಸಾವಿರ ರು ದಂಡ ಹಾಕಲಾಗುತ್ತಿತ್ತು. ಆದರೆ ಇದೀಗ ದಂಡದ ಮೊತ್ತ ಕಡಿಮೆಯಾಗಿದ್ದು ನಗರ ವ್ಯಾಪ್ತಿಯಲ್ಲಿ 200  ಹಾಗೂ ಗ್ರಾಮೀಣ ಭಾಗಗಳಲ್ಲಿ 100  ರು ದಂಡ ಹಾಕಲಾಗುತ್ತದೆ.

ಈ ಸಂಬಂಧ ಬಿಬಿಎಂಪಿ ಕಮಿಷನರ್ ಬಿ.ಎಚ್. ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು "ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.‌ ಇದರನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಓಡಾಡುವಾಗ ಮೂಗು, ಬಾಯಿ ಪೂರ್ಣವಾಗಿ ಮುಚ್ಚುವಂತೆ‌ ಬಟ್ಟೆ / ಮಾಸ್ಕ್ ಧರಿಸುವುದು‌ ಕಡ್ಡಾಯವಾಗಿದೆ.‌ ನಿಯಮ‌ ಉಲ್ಲಂಘಿಸಿದಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ಪ್ರತಿಬಾರಿ ರೂ. 200 ದಂಡ ವಿಧಿಸುವರು." ಎಂದಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಕನಿಷ್ಟ ಒಂದು ಮೀ. ಅಂತರ ಕಾಯ್ದುಕೊಳ್ಳುವುದು ಕಡ್ದಾಯವಾಗಿದೆ. ತಪ್ಪಿದವರಿಗೆ ದಂಡ ಅಥವಾ ಇತರೆ ಶಿಕ್ಷೆ ವಿಧಿಸುವ ನಿರ್ಧಾರವನ್ನು  ಆಯಾ ಸಬ್ ಇನ್ಸ್ ಪೆಕ್ಟರ್, ಆರೋಗ್ಯಾಧಿಕಾರಿ, ಪಿಡಿಒ ಸರ್ಕಾರ ನೇಮಕ ಮಾಡುವ ಅಧಿಕಾರಿಗಳಿಗೆ ನೀಡಿ ಸರ್ಕಾರ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com