ಸಾರಿಗೆ ಕಚೇರಿಗಳಲ್ಲಿ ಕಾರ್ಯ ಪುನರಾಂಭ

ಗೃಹ ಮಂತ್ರಾಲಯದಿಂದ ಲಾಕ್‌ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಸಿರು ವಲಯಕ್ಕೊಳಪಡುವ 14 ಜಿಲ್ಲೆಗಳಲ್ಲಿ ನಿನ್ನೆಯಿಂದ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ಸಾರಿಗೆ ಕಚೇರಿಗಳಲ್ಲಿ ಕಾರ್ಯ ಪುನರಾಂಭ
ಸಾರಿಗೆ ಕಚೇರಿಗಳಲ್ಲಿ ಕಾರ್ಯ ಪುನರಾಂಭ

ಬೆಂಗಳೂರು: ಗೃಹ ಮಂತ್ರಾಲಯದಿಂದ ಲಾಕ್‌ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಸಿರು ವಲಯಕ್ಕೊಳಪಡುವ 14 ಜಿಲ್ಲೆಗಳಲ್ಲಿ ನಿನ್ನೆಯಿಂದ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ವಾಹನ ನೋಂದಣಿ, ಚಾಲನಾ ಪರವಾನಗಿ ನೀಡುವಿಕೆ, ವಾಹನಗಳ ಅರ್ಹತಾ ಪತ್ರ ನೀಡುವಿಕೆ, ತೆರಿಗೆ ಸ್ವೀಕೃತಿ ಮುಂತಾದವುಗಳನ್ನು ಪುನರಾಂಭಿಸಲಾಗಿದೆ.

ಸಾರ್ವಜನಿಕರು ಸಾರಿಗೆ ಕಚೇರಿಗಳಲ್ಲಿ ಕೋವಿಡ್ -19 ರ ಮಾರ್ಗಸೂಚಿಗಳನ್ನು ಪಾಲಿಸಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿಗದಿತ ಸೇವೆಗಳನ್ನು ಪಡೆಯಬಹುದೆಂದು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com