ಬೆಂಗಳೂರಿನ ಬಳಿಕ ತುಮಕೂರು ಜನತೆಯ ನಿದ್ದೆಗೆಡಿಸಿದ ನಿಗೂಢ ಶಬ್ಧ

ಬೆಂಗಳೂರು ಜನರ ಆತಂಕಕ್ಕೆ ಕಾರಣವಾಗಿದ್ದ ಭಯಾನಕ ಶಬ್ಧದ ಮೂಲದ ಕುರಿತು ಇನ್ನೂ ಚರ್ಚೆ ನಡೆದಿರುವಂತೆಯೇ ಅತ್ತ ತುಮಕೂರಿನಲ್ಲೂ ಇಂತಹುದೇ ಭಯಾನಕ ಶಬ್ಧವೊಂದು ಇಂದು ಕೇಳಿಸಿದೆ.
ನಿಗೂಢ ಶಬ್ಧಕ್ಕೆ ಬೆಚ್ಚಿ ಬಿದ್ದ ತುಮಕೂರು ಜನತೆ
ನಿಗೂಢ ಶಬ್ಧಕ್ಕೆ ಬೆಚ್ಚಿ ಬಿದ್ದ ತುಮಕೂರು ಜನತೆ

ತುಮಕೂರು: ಬೆಂಗಳೂರು ಜನರ ಆತಂಕಕ್ಕೆ ಕಾರಣವಾಗಿದ್ದ ಭಯಾನಕ ಶಬ್ಧದ ಮೂಲದ ಕುರಿತು ಇನ್ನೂ ಚರ್ಚೆ ನಡೆದಿರುವಂತೆಯೇ ಅತ್ತ ತುಮಕೂರಿನಲ್ಲೂ ಇಂತಹುದೇ ಭಯಾನಕ ಶಬ್ಧವೊಂದು ಇಂದು ಕೇಳಿಸಿದೆ.

ತುಮಕೂರಿನ ಕಂಬಾಳಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ ಭಾರಿ ಶಬ್ಧವೊಂದು ಕೇಳಿ ಬಂದಿದೆ. ಈ ಭಯಾನಕ ಶಬ್ಧಕೇಳಿದ ಗ್ರಾಮಸ್ಥ ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇಂದು ಮಧ್ಯಾಹ್ನ ಸುಮಾರು 2.05ರ ಸಂದರ್ಭದಲ್ಲಿ ಈ ನಿಗೂಢ ಶಬ್ಧ ಕೇಳಿ ಬಂದಿದೆ. ಈ ಬಗ್ಗೆ  ಮಾತನಾಡಿದ ಸ್ಥಳೀಯ ನಿವಾಸಿ ಮಂಜುನಾಥ್ ಗೌಡ ಅವರು, ದೊಡ್ಡ ಗಾತ್ರದ ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಸ್ಫೋಟಿಸಿದಾಗ ಉಂಟಾಗುವ ಶಬ್ಧಕ್ಕಿಂತ ದೊಡ್ಡ ಪ್ರಮಾಣದ ಕೇಳಿಸಿತು. ಶಬ್ಧದ ತೀವ್ರತೆಗೆ ನಮ್ಮ ಮನೆಯ ಅಡುಗೆ ಮನೆಯ ಪಾತ್ರೆಗಳು ಕೆಳಗೆ ಬಿದ್ದವು. ಇಲ್ಲಿನ ಸಮುದಾಯ  ಭವನ 5 ರಿಂದ 6 ಸೆಕೆಂಡ್ ಗಳ ಅಲುಗಾಡಿದ ಅನುಭವವಾಯಿತು ಎಂದು ಹೇಳಿದರು.

ತುಮಕೂರಿನ ಕಂಬಾಳಪುರ ಗ್ರಾಮ ಮಾತ್ರವಲ್ಲದೇ ಕನಕುಪ್ಪೆ, ಚಿಕ್ಕಣ್ಣಸ್ವಾಮಿ ಹುಟ್ಟಿ, ಬೈಚನಹಳ್ಳಿ, ಮಲಾಲಾವಾಡಿ ಮತ್ತು ಹೆಬ್ಬೂರಿನಲ್ಲೂ ಶಬ್ಧ ಕೇಳಿದೆ. ಗಣಿಯಲ್ಲಿ ಸ್ಫೋಟದ ಶಬ್ಧ ಎಂದು ತಿಳಿಯಲು ಗ್ರಾಮದ ಸುತ್ತಲ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಲ್ಲು ಗಣಿಗಳಿು ಕೂಡ  ಇಲ್ಲ. ಹೀಗಾಗಿ ಈ ಶಬ್ಧದ ಹಿಂದೆ ಬೇರೆ ಕಾರಣ ಇದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಇಂತಹುದೇ ಶಬ್ಧ ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಮತ್ತು ಮಂಡ್ಯದಲ್ಲೂ ಕೇಳಿಬಂದ ಕುರಿತು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com