ಬೆಂಗಳೂರಿನ 22 ಸರ್ಕಾರಿ ಶಾಲೆಗಳಲ್ಲಿ ಇ-ಲರ್ನಿಂಗ್ ವ್ಯವಸ್ಥೆ: ಅಶ್ವತ್ಥ ನಾರಾಯಣ

ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಇ-ಲರ್ನಿಂಗ್ ವ್ಯವಸ್ಥೆ ಸಾಧ್ಯವಾಗಿಸುವ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ವ್ಯವಸ್ಥೆ ಜಾರಿ‌ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಸಾಂದರ್ಭಿಕ  ಚಿತ್ಪ
ಸಾಂದರ್ಭಿಕ ಚಿತ್ಪ

ಬೆಂಗಳೂರು:  ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಇ-ಲರ್ನಿಂಗ್ ವ್ಯವಸ್ಥೆ ಸಾಧ್ಯವಾಗಿಸುವ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ವ್ಯವಸ್ಥೆ ಜಾರಿ‌ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ 22 ಸರ್ಕಾರಿ ಶಾಲೆಗಳಿವೆ. ಇಲ್ಲಿನ ಕಲಿಕಾ ಗುಣಮಟ್ಟ‌ ಯಾವುದೇ ಖಾಸಗಿ ಶಾಲೆಯ ಕಲಿಕೆಯ ಗುಣಮಟ್ಟಕ್ಕಿಂತ ಕಡಿಮೆ ಇರಬಾರದು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುವುದು. ಈ ಮೂಲಕ ಮಕ್ಕಳನ್ನು ಆಕರ್ಷಿಸಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಯನ್ನು ಹೆಚ್ಚಿಸಲಾಗುವುದು‘ ಎಂದು ತಿಳಿಸಿದ್ದಾರೆ

ಹೊಸ ಬೋಧನಾ ವಿಧಾನದ ಮೂಲಕ ಮಕ್ಕಳ ಕಲಿಕೆ ಯಾವ ಹಂತದಲ್ಲಿದೆ? ಎಷ್ಟು ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿದೆ.  ಕಲಿಕೆಯಲ್ಲಿ ಸಾಧಿಸಿರುವ ಯಶಸ್ಸಿನ ಬಗ್ಗೆ ಡ್ಯಾಶ್‌ಬೋರ್ಡ್‌ ವ್ಯವಸ್ಥೆ ಮಾಡಲಾಗುವುದು. ಪ್ರತಿದಿನವೂ ಮಾಹಿತಿ ನವೀಕರಣ ನಡೆಯಲಿದೆ. ಆ್ಯಪ್‌ ಮೂಲಕ ಅದನ್ನು ಖುದ್ದು ಪರಿಶೀಲಿಸಲಿದ್ದೇನೆ’ ಎಂದು ತಿಳಿಸಿದರು.

ಪ್ರತಿ ಶಾಲೆಯಲ್ಲಿಯೂ ಆಡಿಯೋ- ವಿಶ್ಯೂವಲ್ ಕೊಠಡಿ ಇರುತ್ತದೆ. ಐದು ವಿದ್ಯಾರ್ಥಿಗಳು ಒಂದು ಲ್ಯಾಪ್ ಟಾಪ್ ಶೇರ್ ಮಾಡಲಿದ್ದಾರೆ, ಆಸಕ್ತ ವಿದ್ಯಾರ್ಥಿಗಳಿಗೆ ಸ್ವಯಂ ಸೇವಕರು ಸಂಗೀತ ಮತ್ತು ಕ್ರೀಡಾ ವಿಷಯಗಳನ್ನು ಬೋಧಿಸಲಿದ್ದಾರೆ. 

ಸದ್ಯ ಮಲ್ಲೇಶ್ವರಂ ನಲ್ಲಿ ಆರು ಇಂಗ್ಲೀಷ್ ಮಾಧ್ಯಮದ ಸರ್ಕಾರಿ ಶಾಲೆಗಳಿವೆ, ಮುಂದಿನ ದಿನಗಳಲ್ಲಿ ಇನ್ನೂ ಮೂರು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com