ಕೇಂದ್ರದಿಂದ ರಾಜ್ಯಕ್ಕೆ ಸಿಹಿಸುದ್ದಿ: 577 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ

ಈ ದೀಪಾವಳಿ ಸಮಯದಲ್ಲಿ ಕೇಂದ್ರ ವು ರಾಜ್ಯಕ್ಕೆ ಶುಭ ಸುದ್ದಿ ಕೊಟ್ಟಿದೆ. ನೆರೆ, ಅತಿವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ 577.84 ಕೋಟಿ  ರೂ. ಪರಿಹಾರ ಮಂಜೂರು ಮಾಡಿದೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಈ ದೀಪಾವಳಿ ಸಮಯದಲ್ಲಿ ಕೇಂದ್ರ ವು ರಾಜ್ಯಕ್ಕೆ ಶುಭ ಸುದ್ದಿ ಕೊಟ್ಟಿದೆ. ನೆರೆ, ಅತಿವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ 577.84 ಕೋಟಿ  ರೂ. ಪರಿಹಾರ ಮಂಜೂರು ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದ ಸಭೆಯಲ್ಲಿ ಕರ್ನಾಟಕವೂ ಸೇರಿ ಆರು ರಾಜ್ಯಗಳಿಗೆ ಒಟ್ಟೂ  4381.88 ಕೋಟಿ ರೂ. ನೆರವಿಗೆ ಒಪ್ಪಿಗೆ ಸೂಚಿಸಲಾಗಿದೆ.

ಇದರಲ್ಲಿ ಪಶ್ಚಿಮ ಬಂಗಾಳಕ್ಕೆ  2707.77 ಕೋಟಿ ರೂ. ಒಡಿಶಾಗೆ  128.33, ಮಧ್ಯಪ್ರದೇಶಕ್ಕೆ 611.61,  ಕೋಟಿ ರೂ. ಕರ್ನಾಟಕಕ್ಕೆ 577 ಕೋಟಿ ರೂ ಸೇರಿದೆ.

ಕಳೆದ ಮೇ-ಜೂನ್ ಮಾಹೆಯಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಮಳೆ, ಪ್ರವಾಹದಿಂದಾಗಿ ಸುಮಾರು  24,941 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಕೇಂದ್ರದಿಂದ ಹತ್ತು ಸಾವಿರ ಕೋಟಿ ರೂ. ನೆರವು ಕೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com