ಅಪ್ಪನ ಆಸೆಗಳು ಒಂದೆರಡಲ್ಲ: ಚೇತನಾ ಬೆಳಗೆರೆ

ಪತ್ರಕರ್ತ, ಸಾಹಿತಿ ರವಿ ಬೆಳಗೆರೆ, ಬರವಣಿಗೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗಲೇ, ತಮ್ಮ ಕಚೇರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ರವಿ ಬೆಳಗೆರೆ
ರವಿ ಬೆಳಗೆರೆ

ಬೆಂಗಳೂರು: ಪತ್ರಕರ್ತ, ಸಾಹಿತಿ ರವಿ ಬೆಳಗೆರೆ, ಬರವಣಿಗೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗಲೇ, ತಮ್ಮ ಕಚೇರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಅನೇಕ ವರ್ಷಗಳಿಂದ ಕಚೇರಿಯನ್ನೇ ಮನೆಯನ್ನಾಗಿಸಿಕೊಂಡು ಅವಿರತವಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿರುತ್ತದ್ದ ಅವರ ಕೊನೆಯಾಸೆ ಏನಾಗಿತ್ತು ಎಂಬ ಬಗ್ಗೆ ಪುತ್ರಿ ಚೇತನಾ ಬೆಳಗೆರೆ, “ಅಪ್ಪನ ಆಸೆಗಳು ಒಂದೆರಡಲ್ಲ. ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು. ಸಾಕಷ್ಟು ಪುಸ್ತಕಗಳನ್ನು ಅರ್ಧಂಬರ್ಧ ಬರೆದಿಟ್ಟಿದ್ದಾರೆ” ಎಂದಿದ್ದಾರೆ.

“ನಮ್ಮೆಲ್ಲರಲ್ಲೂ ಸಾಕಷ್ಟು ಪ್ರತಿಭೆಯಿದೆ. ಅವನ್ನು ಹೊರತರಬೇಕು. ನಾವೆಲ್ಲ ಚೆನ್ನಾಗಿ ಬದುಕಬೇಕು ಎಂದು ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಅನೇಕ ಜನರಿಗೆ ತಮ್ಮ ಬರಹಗಳ ಮೂಲಕವೇ ಮಾದರಿಯಾಗಿದ್ದರು. ಪ್ರಾರ್ಥನಾ ಶಾಲೆಯಲ್ಲಿ ಮಕ್ಕಳ ಜಾತಿಯನ್ನು ಕೇಳಬಾರದು ಎಂಬ ಕಾರಣಕ್ಕಾಗಿ ಜಾತಿಯ ಕಾಲಂ ಅನ್ನೇ ತೆಗೆದುಹಾಕಿದ್ದರು. ತಮ್ಮ ಆ ಕಾರ್ಯಕ್ಕಾಗಿ ಅವರಿಗೆ ಹೆಮ್ಮೆಯೂ ಇತ್ತು. ತಮ್ಮ ನಂತರವೂ, ಶಾಲೆಯಲ್ಲಿ ಇದೇ ನಿಯಮ ಮುಂದುವರಿಯಬೇಕು ಎಂದು ಆಗಾಗ್ಗೆ ಹೇಳುತ್ತಿದ್ದರು” ಎಂದು ಚೇತನಾ ಬೆಳಗೆರೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com