ಕರ್ನಾಟಕದ ಸಿಬಿಎಸ್ಇ, ಐಸಿಎಸ್ಇ ಪಠ್ಯ ಭಾಗಗಳು ಪೂರ್ಣ; ಆದರೆ ಆಫ್ ಲೈನ್ ತರಗತಿಗಳಿಗೆ ರಾಜ್ಯ ಮಂಡಳಿ ಶಿಕ್ಷಕರ ಒಲವು

ಶಾಲೆಗಳು ಶೈಕ್ಷಣಿಕ ವರ್ಷದ ಉತ್ತರಾರ್ಧದಲ್ಲಿ ನಡೆಯುತ್ತಿದ್ದು, ಸಿಬಿಎಸ್ಇ ಹಾಗೂ ಐಸಿಎಸ್ಇ ಬೋರ್ಡ್ ಶಾಲೆಗಳು ಪಠ್ಯ ಭಾಗಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. 
ಕರ್ನಾಟಕದ ಸಿಬಿಎಸ್ಇ, ಐಸಿಎಸ್ಇ ಪಠ್ಯ ಭಾಗಗಳು ಪೂರ್ಣ, ಆಫ್ ಲೈನ್ ತರಗತಿಗಳಿಗೆ ರಾಜ್ಯದ ಶಿಕ್ಷಕರ ಒಲವು
ಕರ್ನಾಟಕದ ಸಿಬಿಎಸ್ಇ, ಐಸಿಎಸ್ಇ ಪಠ್ಯ ಭಾಗಗಳು ಪೂರ್ಣ, ಆಫ್ ಲೈನ್ ತರಗತಿಗಳಿಗೆ ರಾಜ್ಯದ ಶಿಕ್ಷಕರ ಒಲವು

ಬೆಂಗಳೂರು: ಶಾಲೆಗಳು ಶೈಕ್ಷಣಿಕ ವರ್ಷದ ಉತ್ತರಾರ್ಧದಲ್ಲಿ ನಡೆಯುತ್ತಿದ್ದು, ಸಿಬಿಎಸ್ಇ ಹಾಗೂ ಐಸಿಎಸ್ಇ ಬೋರ್ಡ್ ಶಾಲೆಗಳು ಪಠ್ಯ ಭಾಗಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. 

ಈ ಪೈಕಿ ಕೆಲವು ಶಾಲೆಗಳಲ್ಲಿ ಪಠ್ಯ ಕ್ರಮದ ಭಾಗಗಳನ್ನು ಪೂರ್ಣಗೊಳಿಸಲಾಗಿದ್ದರೆ ಮತ್ತೆ ಕೆಲವು ಶಾಲೆಗಳಲ್ಲಿ ಸ್ವಲ್ಪ ಭಾಗವನ್ನು ಉಳಿಸಿಕೊಂಡಿವೆ.

ಮತ್ತೊಂದೆಡೆ ರಾಜ್ಯ ಮಂಡಳಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆನ್ ಲೈನ್ ತರಗತಿಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಕೊರತೆ ಎದುರಾಗಿದ್ದು, ಆಫ್ ಲೈನ್ ತರಗತಿಗಳಿಗೇ ಹೆಚ್ಚು ಒಲವು ತೋರುತ್ತಿದ್ದಾರೆ.

10 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮದಲ್ಲಿ ಕೇವಲ 3 ಅಧ್ಯಾಯಗಳಷ್ಟೇ ಬಾಕಿ ಇದೆ ಎನ್ನುತ್ತಾರೆ ಸವಲ್ ದಾಸ್ ಜೆಥಾನಿಯ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಕ್ರೈಸಲಿಸ್ ಹೈ

ಶಾಲೆಗಳಿಗೆ ಎರಡು ಸಮಸ್ಯೆಗಳನ್ನು ಎದುರಿಸುತ್ತಿವೆ, ಮೊದಲನೆಯದ್ದು ಶಾಲೆಗಳ ಪುನಾರಂಭಗೊಳ್ಳುವ ದಿನಾಂಕ ಹಾಗೂ ಎರಡನೆಯದ್ದು ಲಸಿಕೆ ಬರುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದು ಬೇಡವೆಂಬ ಪೋಷಕರ ಮನಸ್ಥಿತಿ, ಮಕ್ಕಳಿಗೆ ಕೊರೋನಾ ಹರಡೀತು ಎಂಬ ಭಯದಿಂದ ಮಕ್ಕಳಿಂದ ಮನೆಯಲ್ಲಿರುವ ಹಿರಿಯರಿಗೆ ಕೊರೋನಾ ಹರಡಿದರೆ ಎಂಬ ಭಯ ಹೆಚ್ಚು ಕಾಡುತ್ತಿದೆ ಎಂದು ಕ್ರೈಸಲಿಸ್ ಹೈ ಹೇಳಿದ್ದಾರೆ. 

ಶೇ.90 ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದು ಬೇಡವೆಂಬ ಅಭಿಪ್ರಾಯ ಹೊಂದಿದ್ದಾರೆ. ಸ್ವತಂತ್ರ ಸಿಬಿಎಸ್‌ಇ ಶಾಲೆಗಳ ಸಂಘದ ನಿರ್ವಹಣೆ ಮತ್ತು ದೆಹಲಿ ಸಾರ್ವಜನಿಕ ಶಾಲೆಯ ಕಾರ್ಯದರ್ಶಿ, ಅಧ್ಯಕ್ಷ ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ. 

ಮಕ್ಕಳೂ ಈ ನಡುವೆ ಆನ್ ಲೈನ್ ತರಗತಿಗಳಿಗೇ ಹೊಂದಿಕೊಂಡಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಐಸಿಎಸ್ ಇ ಶಾಲೆಗಳ ಸಂಘದ ಕಾರ್ಯದರ್ಶಿ ಡಾ.ಗಾಯತ್ರಿ ದೇವಿ.

ಪುನಾರಂಭಕ್ಕೂ ಮುನ್ನ ಬೆಂಗಳೂರು ವಿವಿಯಿಂದ 5 ಟಾಸ್ಕ್ ಫೋರ್ಸ್ 

ಕಾಲೇಜುಗಳು ಪುನಾರಂಭಗೊಳ್ಳುತ್ತಿದ್ದು, ಬೆಂಗಳೂರು ವಿವಿ ಕ್ಯಾಂಪಸ್ ನ್ನು ಸುರಕ್ಷಿತವಾಗಿರಿಸಲು, ನಿಯಮ ಪಾಲನೆಯತ್ತ ಗಮನ ಹರಿಸಲು 5 ಟಾಸ್ಕ್ ಫೋರ್ಸ್ ಗಳನ್ನು ರಚನೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com