ಮೈಸೂರು: ಹಿಂದುಳಿದ ವರ್ಗದವರ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಕ್ಷೌರಿಕನ ಕುಟುಂಬಕ್ಕೆ ಬಹಿಷ್ಕಾರ, 50 ಸಾವಿರ ರೂ. ದಂಡ!

ಹಿಂದುಳಿದ ವರ್ಗಕ್ಕೆ ಸೇರಿದವರ ತಲೆಕೂದಲು ಕತ್ತರಿಸಿದ್ದಕ್ಕೆ ಸಲೂನ್ ನ ಮಾಲಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಗ್ರಾಮದ ಮುಖ್ಯಸ್ಥರು 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ಒತ್ತಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ನಡೆದಿದೆ.
ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ
ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ

ನಂಜನಗೂಡು (ಮೈಸೂರು): ಹಿಂದುಳಿದ ವರ್ಗಕ್ಕೆ ಸೇರಿದವರ ತಲೆಕೂದಲು ಕತ್ತರಿಸಿದ್ದಕ್ಕೆ ಸಲೂನ್ ನ ಮಾಲಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಗ್ರಾಮದ ಮುಖ್ಯಸ್ಥರು 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ಒತ್ತಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ನಡೆದಿದೆ.

ಈ 21ನೇ ಶತಮಾನದಲ್ಲಿ ತಂತ್ರಜ್ಞಾನವಾಗಿ ಇಷ್ಟು ಮುಂದುವರಿದಿರುವ ಇಂದಿನ ಸನ್ನಿವೇಶದಲ್ಲಿ ಜಾತಿ ತಾರತಮ್ಯ ಇನ್ನೂ ಹಳ್ಳಿ ಪ್ರದೇಶಗಳಲ್ಲಿ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಸಲೂನ್ ಮಾಲಿಕ ಮಲ್ಲಿಕಾರ್ಜುನ ಶೆಟ್ಟಿ, ನನಗೆ ಹೀಗೆ ಆಗುತ್ತಿರುವುದು ಇದು ಮೂರನೇ ಸಲ. ಈ ಹಿಂದೆ ಕೂಡ ನಾನು ದಂಡ ಕಟ್ಟಿದ್ದೆ. ಎಸ್ಸಿ-ಎಸ್ಟಿ ಸಮುದಾಯದವರ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಬಹಿಷ್ಕಾರ ಹಾಕಿ ದಂಡ ಕಟ್ಟುವಂತೆ ಗ್ರಾಮದ ಚನ್ನ ನಾಯಕ್ ಮತ್ತು ಇತರರು ನನಗೆ ಹಿಂಸೆ ಕೊಡುತ್ತಿದ್ದಾರೆ. 

ಈ ಹಿಂಸೆಯನ್ನು ನನಗೆ ಮತ್ತು ಕುಟುಂಬದವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಯನ್ನು ಬಗೆಹರಿಸದಿದ್ದರೆ ನಾವು ಕುಟುಂಬಸ್ಥರೆಲ್ಲರೂ ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದು ತಕ್ಷಣವೇ ಗ್ರಾಮದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com