ಬೆಂಗಳೂರು ಪೋಲೀಸರ ಭರ್ಜರಿ ಬೇಟೆ: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 6 ಕೆಜಿಗಿಂತ ಹೆಚ್ಚು ತೂಕದ ಚಿನ್ನಾಭರಣ ವಶ
ರಾತ್ರಿ ವೇಳೆ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 6 ಕೆಜಿಗಿಂತ ಹೆಚ್ಚು ತೂಕದ ಚಿನ್ನಾಭರಣಗಳನ್ನು ಸಿಲಿಕಾನ್ ಸಿಟಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.
Published: 21st November 2020 04:49 PM | Last Updated: 21st November 2020 04:52 PM | A+A A-

ಬಂಧಿತ ಆರೋಪಿಗಳು ಹಾಗೂ ಕಳ್ಳಸಾಗಣೆ ನಡೆಸಿದ್ದ ಚಿನ್ನಾಭರಣಗಳು
ಬೆಂಗಳೂರು: ರಾತ್ರಿ ವೇಳೆ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 6 ಕೆಜಿಗಿಂತ ಹೆಚ್ಚು ತೂಕದ ಚಿನ್ನಾಭರಣಗಳನ್ನು ಸಿಲಿಕಾನ್ ಸಿಟಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಆರೋಪಿಗಳನ್ನು ದಲ್‍ಪತ್ ಸಿಂಗ್ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ.
ಇಬ್ಬರೂ ಆರೋಪಿಗಳು ದ್ವಿಚಕ್ರವಾಹನದಲ್ಲಿ ದಾಖಲೆಗಳಿಲ್ಲದೆ ಕೋಟ್ಯಾಂತರ ಮೌಲ್ಯದ 6 ಕೆಜಿ 55 ಗ್ರಾಂ ಚಿನ್ನವನ್ನು ಸಾಗಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೋಲಿಸರು ಪರಿಶೀಲಿಸಿದಾಗ ಅಪಾರ ಪ್ರಾಮಾಣದ ಸ್ವತ್ತು ಪತ್ತೆಯಾಗಿದೆ.
Gold ornaments weighing more than 6 kgs without documents were seized by Police during checking in Bengaluru, last night. Case registered. Income tax department has been informed about the matter: DCP, West Bengaluru. #Karnataka pic.twitter.com/uwSpMPmeOX
— ANI (@ANI) November 21, 2020
65 ನೆಕ್ಲೇಸ್, 7 ಸೆಟ್ ಬಳೆ, 150 ಗ್ರಾಂ ಚಿಕ್ಕ ಕಿವಿಯ ರಿಂಗ್ ಗಳು ಸಿಕ್ಕಿದ್ದು ಈ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಮಾಹಿತಿ ಕೊಟ್ಟಿದ್ದಾರೆ.