ಹುಬ್ಬಳ್ಳಿ: ಮಾಜಿ ರೌಡಿ ಶೀಟರ್ ರಮೇಶ್ ಭಾಂಡಗೆ ಹತ್ಯೆ 

ನಗರದಲ್ಲಿ ಹಾಡುಹಗಲೆ ಮಾಜಿ ರೌಡಿ ಶೀಟರ್ ಕೊಲೆಯಾಗಿದೆ. ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ರಮೇಶ್ ಭಾಂಡಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಆಸ್ತಿ ವಿವಾದವೇ ಕಾರಣವೆಂದು ತಿಳಿದು ಬಂದಿದೆ. 

Published: 25th November 2020 05:37 PM  |   Last Updated: 25th November 2020 05:37 PM   |  A+A-


crime

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಹುಬ್ಬಳ್ಳಿ: ನಗರದಲ್ಲಿ ಹಾಡುಹಗಲೆ ಮಾಜಿ ರೌಡಿ ಶೀಟರ್ ಕೊಲೆಯಾಗಿದೆ. ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ರಮೇಶ್ ಭಾಂಡಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಆಸ್ತಿ ವಿವಾದವೇ ಕಾರಣವೆಂದು ತಿಳಿದು ಬಂದಿದೆ. 

ಕಮರಿಪೇಟೆ ನಿವಾಸಿಯಾಗಿರುವ ರಮೇಶ್ ಭಾಂಡಗೆಗೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದ್ದು, ರಮೇಶ್ ತೀವ್ರ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕಿಮ್ಸಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವವಾದ ಪರಿಣಾಮ ಇವರು ಸಾವನ್ನಪ್ಪಿದ್ದಾರೆ. ಹಾಡುಹಗಲೇ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತನಾಗಿದ್ದ ರಮೇಶ್ ಭಾಂಡಗೆ, ಕೆಲವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ. 

ಹಲ್ಲೆಯ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಲಿದೆ. ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ರಮೇಶ್ ಭಾಂಡಗೆ ಈ ಹಿಂದೆ ರೌಡಿ ಶೀಟರ್ ಕೂಡಾ ಆಗಿದ್ದರು.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp