ಪ್ರಯಾಣಿಕರ ಪಾಲಿಗೆ ಮೃತ್ಯುಕೂಪವಾಗಿರುವ ಹಾಸನ-ಸಕಲೇಶಪುರ ಹೆದ್ದಾರಿ: ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು!

ಮಂಗಳೂರು-ಚೆನ್ನೈ ಬಂದರು ಸಂಪರ್ಕಿಸುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನ-ಸಕಲೇಶಪುರದ ಹದಗೆಟ್ಟ ರಸ್ತೆಗಳು ಪ್ರಯಾಣಿಕರಿಗೆ  ದುಸ್ವಪ್ನವಾಗಿವೆ.
ಗುಂಡಿಬಿದ್ದ ರಸ್ತೆ
ಗುಂಡಿಬಿದ್ದ ರಸ್ತೆ

ಹಾಸನ: ಮಂಗಳೂರು-ಚೆನ್ನೈ ಬಂದರು ಸಂಪರ್ಕಿಸುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನ-ಸಕಲೇಶಪುರದ ಹದಗೆಟ್ಟ ರಸ್ತೆಗಳು ಪ್ರಯಾಣಿಕರಿಗೆ  ದುಸ್ವಪ್ನವಾಗಿವೆ.

45 ಕಿಮೀ ಉದ್ದದ ರಸ್ತೆ  ಗುಂಡಿಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರ ಪಾಲಿಗೆ ಮೃತ್ಯಕೂಪವಾಗಿದೆ. ಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ಸುಮಾರು ಒಂದೂವರೆ ಗಂಟೆ ಪ್ರಯಾಣ ಮಾಡಬೇಕಾಗಿದೆ. 

ರಸ್ತೆಗಳ ದುಸ್ಥಿತಿಗಾಗಿ ಪ್ರಯಾಣಿಕರು ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಗಳು ದುರಸ್ತಿ ಮಾಡಿಸದ ಸ್ಥಳೀಯ ಆಡಳಿತ ಒಂದು ವರ್ಷದಿಂದ ಕಣ್ಮುಚ್ಚಿ ಕುಳಿತಿದೆ.

ಸಕಲೇಶಪುರ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಒಂದು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುವ ಮೂಲಕ ರಸ್ತಾ ರೊಕೊ ಮಾಡುವುದಾಗಿ ಬೆದರಿಕೆ ಹಾಕಿದ್ದರೂ   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

ರಸ್ತೆ ಅಪಘಾತದಲ್ಲಿ ಯಾವುದೇ ಪ್ರಯಾಣಿಕರು ಸತ್ತರೆ ಎನ್‌ಎಚ್‌ಎಐ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.

ಹಾಸನ - ಬಿ.ಸಿ ರಸ್ತೆ ಅಭಿವೃದ್ಧಿಪಡಿಸುವ ಯೋಜನೆಯನ್ನು 2017 ರಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ಮಂಜೂರು ಮಾಡಲಾಯಿತು, ಐಸೋಲೆಕ್ಸ್ ಕಂಪನಿ ಟೆಂಡರ್ ಪಡೆಯಿತು.

ಒಪ್ಪಂದದ ಪ್ರಕಾರ ಯೋಜನೆಯನ್ನು ಪೂರ್ಣಗೊಳಿಸಿ 2019 ರ ಮಾರ್ಚ್ ಮೊದಲು ಎನ್‌ಎಚ್‌ಎಐಗೆ ಒಪ್ಪಿಸಬೇಕಾಗಿತ್ತು. ಆದರೆ ಕಂಪನಿಯು ಎರಡು ವಿಭಿನ್ನ ಏಜೆನ್ಸಿಗಳಿಗೆ ಉಪ  ಗುತ್ತಿಗೆಗಳನ್ನು ನೀಡಿದ್ದರಿಂದ ರಸ್ತೆ ಕೆಲಸ ನಿಧಾನವಾಯಿತು. ಹಾಗೂ ನಷ್ಟ ತೋರಿಸಿದ್ದರಿಂದ ನಿರ್ಮಾಣವನ್ನು ನಿಲ್ಲಿಸಿತು. ನಂತರ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಯಿತು. ಮತ್ತು ರಾಜ್ ಕಮಲ್ ಕನ್ಸ್ ಸ್ಟ್ರಕ್ಷನ್ ಗೆ ಕೆಲಸ ವಹಿಸಲಾಯಿತು.

ಹಲವು ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಯಿತು ಮತ್ತು  ಆ ಕಾರಣ ಬಹಿರಂಗಪಡಿಸುವುದು ಸರಿಯಲ್ಲ, ಆದರೆ, ಸ್ಥಳಕ್ಕೆ ಕಚ್ಚಾ ವಸ್ತುಗಳು ಬಂದ ಕೂಡಲೇ ಕೆಲಸ ಪ್ರಾರಂಭವಾಗಲಿದೆ  ಎಂದು ರಾಜ್ ಕಮಲ್ ಎಂಜಿನೀಯರ್ ಶ್ರೀನಿವಾಸ್ ತಿಳಿಸಿದ್ದಾರೆ.

ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ವಿಫಲವಾದರೆ ಎನ್‌ಎಚ್‌ಎಐ ವಿರುದ್ದ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಂದು ಕನ್ನಡ ಪರ ಕಾರ್ಯಕರ್ತ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com