ಬೆಂಗಳೂರು: ಹುಲಿ, ಚಿರತೆ ಉಗುರು, ಪ್ರಾಣಿಗಳ ಚರ್ಮ ವಶ, ನಾಲ್ವರ ಬಂಧನ

400 ಚಿರತೆ ಉಗುರುಗಳು, ಆರು ಹುಲಿ ಉಗುರುಗಳು, ಒಂದು ಹೆಣ್ಣು ಕೃಷ್ಣಮೃಗದ ಚರ್ಮ, ಒಂದು ನರಿ ಚರ್ಮ ಮತ್ತು ಏಳು ಪ್ಯಾಂಗೊಲಿನ್ ಉಗುರುಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು ಬೃಹತ್ ವನ್ಯಜೀವಿ ಸಂಬಂಧಿತ ವಸ್ತುಗಳ ಕಳ್ಳಸಾಗಣೆಯನ್ನು ಬೇಧಿಸಿದ್ದಾರೆ.
ಹುಲಿ
ಹುಲಿ

ಬೆಂಗಳೂರು: 400 ಚಿರತೆ ಉಗುರುಗಳು, ಆರು ಹುಲಿ ಉಗುರುಗಳು, ಒಂದು ಹೆಣ್ಣು ಕೃಷ್ಣಮೃಗದ ಚರ್ಮ, ಒಂದು ನರಿ ಚರ್ಮ ಮತ್ತು ಏಳು ಪ್ಯಾಂಗೊಲಿನ್ ಉಗುರುಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು ಬೃಹತ್ ವನ್ಯಜೀವಿ ಸಂಬಂಧಿತ ವಸ್ತುಗಳ ಕಳ್ಳಸಾಗಣೆಯನ್ನು ಬೇಧಿಸಿದ್ದಾರೆ.

ಪೊಲೀಸರು ಎರಡು ಹುಲಿಯ ಪಂಜಗಳು ಮತ್ತು ಮೂರು ಕರಡಿ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತುಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ವಶಪಡಿಸಿಕೊಂಡ ವಸ್ತುಗಳು ಅಸಲಿ ಎನ್ನುವುದಾಗಿ ಅರಣ್ಯ ಇಲಾಖೆ ಖಾತ್ರಿಪಡಿಸಿದೆ. ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಈಗ ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಾಡು ಪ್ರಾಣಿಗಳ ಸಾವಿನ ಬಗ್ಗೆ ದಾಖಲೆ ಸಂಗರಹಿಸುತ್ತಿದ್ದಾರೆ. ಅನೇಕ ಆಭರಣ ಮಳಿಗೆಗಳು ಪ್ರಾಣಿಗಳ ದೇಹದ ಅಂಗಾಂಗಗಳನ್ನು ಖರೀದಿಸಲು ಉತ್ಸುಕರಾಗಿದ್ದ ಹಿನ್ನೆಲೆ ಈ ಶೋಧ ಕಾರ್ಯಾಚರಣೆ ನಡೆದಿದೆ. 

"ಪ್ರಾಣಿಗಳ ಉಗುರು ಮೊದಲಾದ ವಸ್ತುಗಳನ್ನು ಆಭರಣ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಮಗೆ ಸುಳಿವು ದೊರಕಿತ್ತು ಅವರು ಸಾಮಾನ್ಯ ಗ್ರಾಹಕರಂತಿದ್ದು ಪ್ರಾಣಿಗಳ ಉಗುರು ಮೊದಲಾದ ಭಾಗಗಳನ್ನು ಚಿನ್ನದ ಲಾಕೆಟ್‌ಗಳಲ್ಲಿ ಸೇರಿಸಲು ಬಯಸುತ್ತಾರೆ. ನಾವು ಸೂಕ್ತ ಯೋಜನೆ ರೂಪಿಸಿ ಈ ಬೇಟೆಗಾರರನ್ನು ಸೆರೆಯಾಗಿಸಿದ್ದೇವೆ.

"ಬಂಧಿತರ ಪೈಕಿ ಇಬ್ಬರು ನಾಗರಹೊಳೆ ಹುಲಿಸಂರಕ್ಷಣಾ ವಲಯದ ಬಳಿಯ ಹುಣಸೂರು ಮೂಲದವರು. , ಉಳಿದ ಇಬ್ಬರು ಆಂಧ್ರಪ್ರದೇಶದ ಮದನಪಲ್ಲಿಮೂಲದವರು ಎಂದು ಹೇಳಲಾಗಿದೆ ”ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಅಕ್ರಮ ಬೇಟೆಗಾರರು ಮೊದಲ ಬಾರಿಗೆ ಅಪರಾಧಿಗಳೆಂದು ಒಪ್ಪಿಕೊಂಡಿದ್ದಾರೆ., ಅವರ ವಿವರಗಳನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆಯ ದಾಖಲೆಗಳೊಂದಿಗೆ ಪರಿಶೀಲಿಸಲಾಗುತ್ತಿದೆ.  ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com