ಭೂ ಸುಧಾರಣಾ ಕಾಯ್ದೆ: ಇನ್ಮುಂದೆ ಕೇರಳಿಗರಿಗೆ ದಕ್ಷಿಣ ಕನ್ನಡದಲ್ಲಿ ಭೂ ಖರೀದಿ ಹೆಚ್ಚು ಸುಲಭ!

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ಕೇರಳದ ಹಲವು ಜನರಿಗೆ ಬಯಸದೇ ಬಂದ ಭಾಗ್ಯವಾಗಿದೆ. 
ಕೇರಳ ಭೂ ಖರೀದಿದಾರರಿಗೆ ದಕ್ಷಿಣ ಕನ್ನಡದ ಬಾಗಿಲು ತೆರೆದ ಭೂ ಸುಧಾರಣಾ ಕಾಯ್ದೆ
ಕೇರಳ ಭೂ ಖರೀದಿದಾರರಿಗೆ ದಕ್ಷಿಣ ಕನ್ನಡದ ಬಾಗಿಲು ತೆರೆದ ಭೂ ಸುಧಾರಣಾ ಕಾಯ್ದೆ

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ಕೇರಳದ ಹಲವು ಜನರಿಗೆ ಬಯಸದೇ ಬಂದ ಭಾಗ್ಯವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆ- ಕೇರಳ ಭಾಗದ ಗಡಿ ಪ್ರದೇಶಗಳಲ್ಲಿ ನಾಲ್ಕು ದಶಕಗಳಿಂದ ಕೇರಳದ ಜನರು ಭೂಮಿ ಖರೀದಿಸುತ್ತಿದ್ದಾರೆ. ಈಗ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕೇರಳಿಗರಿಗೆ ಭೂಮಿ ಖರೀದಿಸುವುದಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಖರೀದಿ ಮತ್ತಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಕೇರಳದಲ್ಲಿ ವಿದೇಶದ ಹಣ ಹೆಚ್ಚು ಹರಿಯುತ್ತಿದ್ದು, ಭೂಮಿಯ ಬೆಲೆ ಏರಿಕೆಯಾಗುತ್ತಿದೆ.  ಆದರೆ ಕೇರಳಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡದಲ್ಲಿ ಭೂಮಿಯ ಬೆಲೆ ಕಡಿಮೆ ಇದ್ದು, ಈ ಕಾರಣದಿಂದಾಗಿ ಕೇರಳದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಭೂಮಿಯ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. 

ಕೇರಳದಲ್ಲಿ 10 ಸೆಂಟ್ಸ್ ಭೂಮಿಯನ್ನು ಮಾರಾಟ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೇ ಹಣದಿಂದ 1 ಎಕರೆಯಷ್ಟು ಭೂಮಿಯನ್ನು ಪಡೆಯಬಹುದಾಗಿದೆ. 

ದಕ್ಷಿಣ ಕನ್ನಡದಲ್ಲಿ ಭೂಮಿ ಖರೀದಿಸುವ ಕೇರಳಿಗರ ಪೈಕಿ ಬಹುತೇಕ ಮಂದಿ ಅದನ್ನು ರಬ್ಬರ್ ಪ್ಲಾಂಟೇಷನ್ ನ್ನಾಗಿ ಅಥವಾ ಅಡಿಕೆ ತೋಟ, ತೆಂಗಿನ ತೋಟ, ಬಾಳೆ ಹಣ್ಣು ಬೆಳೆ ಬೆಳೆಯುವ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ. 

ಕೊಚ್ಚಿಯ ಕ್ರೈಸ್ತರು ರಬ್ಬರ್ ಕೃಷಿಯಲ್ಲಿ ಹೆಚ್ಚು ನೈಪುಣ್ಯತೆ ಸಾಧಿಸಿದ್ದಾರೆ ಹಾಗೂ ಶ್ರಮ ಪಡುತ್ತಾರೆ, ಪರಿಣಾಮ ಬರಡು ಭೂಮಿಯಿಂದ ಹೆಚ್ಚು ಲಾಭವನ್ನೂ ಗಳಿಸುತ್ತಾರೆ. ಪ್ರಾರಂಭದ ದಿನಗಳಲ್ಲಿ ಸುಳ್ಯಾಗೆ ಆಗಮಿಸಿದ ಅವರುಗಳು ಈಗ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಕಡಬಗಳಲ್ಲಿ ನೆಲೆಯೂರಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಗೋವಿಂದ್ ಭಟ್.

ದಕ್ಷಿಣ ಕನ್ನಡದ ಸ್ಥಳೀಯರು ಕೃಷಿ ಭೂಮಿಗಳಿಂದ ದೂರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೇರಳಿಗರ ಹಿಡಿತ ಈ ಪ್ರದೇಶಗಳ ಕೃಷಿ ಭೂಮಿಯ ಮೇಲೆ ಹೆಚ್ಚಾಗಲಿದೆ. ಶೇ.60 ರಷ್ಟು ಸಣ್ಣ ಹಿಡುವಳಿದಾರರೇ ಇದ್ದಾರೆ. ಅಡಿಕೆ ಬೆಳೆ 350-400 ಕೆ.ಜಿ ಯಷ್ಟಿದ್ದಾಗಲೂ 2 ಎಕರೆಯಷ್ಟು ಅಡಿಕೆ ತೋಟ ಹೊಂದಿರುವವರು ವರ್ಷಕ್ಕೆ 60,000 ಸಂಪಾದಿಸಬಹುದಾಗಿದೆಯಷ್ಟೇ. ಈಗ ಕರ್ನಾಟಕದಲ್ಲಿ ಭೂಮಿ ಹೊಂದುವ ಪ್ರಮಾಣದ ನಿರ್ಬಂಧ ಸಡಿಲಗೊಳಿಸಿರುವುದರಿಂದಾಗಿ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿ ಖರೀದಿಸಲಿದ್ದಾರೆ ಎನ್ನುತ್ತಾರೆ ಅಡ್ವೊಕೇಟ್ ಇಸ್ಮೈಲ್ ನೆಲ್ಯಾಡಿ.

ಬರಡು ಭೂಮಿಗಳನ್ನು ಖರೀದಿಸುವವರು ಅವುಗಳನ್ನು ತೋಟಗಳನ್ನಾಗಿ ಅಭಿವೃದ್ಧಿಪಡಿಸಿದರೆ ಅದರಿಂದ ಸ್ಥಳೀಯರಿಗೆ ಒಂದಷ್ಟು ಉದ್ಯೋಗವಾದರೂ ಸಿಗಲಿದೆ ಎನ್ನುತ್ತಾರೆ ರಷಿದ್ ವಿಟ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com