ಐಎಂಎ ಹಗರಣ: ಇಬ್ಬರು ಸೇವಾನಿರತ ಐಪಿಎಸ್ ಅಧಿಕಾರಿಗಳು ಸೇರಿದಂತೆ 28 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ

ಸುಮಾರು 4 ಸಾವಿರ ಕೋಟಿ ರೂಪಾಯಿ ಮೊತ್ತದ ಐಎಂಎ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ತನಿಖಾ ಸಂಸ್ಥೆ 28 ಆರೋಪಿಗಳ ವಿರುದ್ಧ ನಗರದ ನಿಗದಿತ ನ್ಯಾಯಾಲಯದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿದೆ.
ಐಎಂಎ ಹಗರಣ: ಇಬ್ಬರು ಸೇವಾನಿರತ ಐಪಿಎಸ್ ಅಧಿಕಾರಿಗಳು ಸೇರಿದಂತೆ 28 ಮಂದಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ

ಬೆಂಗಳೂರು: ಸುಮಾರು 4 ಸಾವಿರ ಕೋಟಿ ರೂಪಾಯಿ ಮೊತ್ತದ ಐಎಂಎ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ತನಿಖಾ ಸಂಸ್ಥೆ 28 ಆರೋಪಿಗಳ ವಿರುದ್ಧ ನಗರದ ನಿಗದಿತ ನ್ಯಾಯಾಲಯದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಆರೋಪಿಗಳ ಪಟ್ಟಿಯಲ್ಲಿ ಇಬ್ಬರು ಸೇವಾನಿರತ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ, ಕರ್ನಾಟಕ ಪೊಲೀಸ್ ಮೀಸಲು ಪಡೆಯ ಎಸ್ಪಿ ಅಜಯ್ ಹಿಲೊರಿ ಕೂಡ ಇದ್ದಾರೆ.

ಇನ್ನು ಆರೋಪ ಪಟ್ಟಿಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ ರಮೇಶ್, ಅದೇ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗೌರಿ ಶಂಕರ್ , ಅಂದಿನ ಉಪ ಎಸ್ಪಿ ಇ ಬಿ ಶ್ರೀಧರ್, ಐಎಂಎಯ ಎಂಡಿ ಮತ್ತು ಸಿಇಒ ಮೊಹಮ್ಮದ್ ಮನ್ಸೂರ್ ಖಾನ್, ಬೆಂಗಳೂರು ಉತ್ತರ ಭಾಗದ ಅಂದಿನ ಸಹಾಯಕ ಆಯುಕ್ತರು ಎಲ್ ಸಿ ನಾಗರಾಜ್, ಕೆಲವು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಈ ಹಗರಣದಲ್ಲಿ ಭಾಗಿಯಾಗಿವೆ ಎಂದು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.

ಆರೋಪಿಗಳ ವಿರುದ್ಧ ಸೂಕ್ತ ಕ್ರಮವನ್ನು ಇದುವರೆಗೆ ತೆಗೆದುಕೊಂಡಿಲ್ಲ, ಬದಲಿಗೆ ಅವರಿಗೆ ಕ್ಲೀನ್ ಚಿಟ್ ನೀಡಿ ಐಎಂಎ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಆರೋಪವನ್ನು ಮುಚ್ಚಿ ಹಾಕಲು ಶಿಫಾರಸು ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com