ಕೋವಿಡ್-19: ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಿದ್ದ ಮೈಸೂರಿಗೆ ದಸರಾ ಹೊಸ ಸವಾಲು!

ಈ ಹಿಂದೆ ಕೋವಿಡ್ ಹೊಸ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮೈಸೂರಿನಲ್ಲಿ ಇದೀಗ ಕ್ರಮೇಣ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ದಸರಾ ಹಬ್ಬ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಕೂಡ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಈ ಹಿಂದೆ ಕೋವಿಡ್ ಹೊಸ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮೈಸೂರಿನಲ್ಲಿ ಇದೀಗ ಕ್ರಮೇಣ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ದಸರಾ ಹಬ್ಬ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಕೂಡ ಆರಂಭವಾಗಿದೆ.

ಹೌದು.. ಕೊರೋನಾದಿಂದ ತತ್ತರಿಸಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಕೊರೋನಾ ಅಕ್ಟೋಬರ್‌ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಕುರಿತು ಮೈಸೂರು ಜಿಲ್ಲಾಡಳಿತವೇ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲೆಯಲ್ಲಿ  ಈಗ ಕೊರೋನಾ ನಿಯಂತ್ರಣದಲ್ಲಿದೆ ಎಂದು ಹೇಳಿದೆ. ಹೆಚ್ಚಾಗುತ್ತಿದ್ದ ಕೊರೋನಾ ಸೋಂಕಿನ ಪ್ರಕರಣಗಳಿಂದಾಗಿ, ಪಾಸಿಟಿವ್‌ ಪ್ರಮಾಣ‌ ಹಾಗೂ ಸಾವಿನ ಪ್ರಮಾಣದ ಶೇಕಡಾವಾರು ಸಂಖ್ಯೆಯಲ್ಲಿ ಮೈಸೂರು ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ನಿತ್ಯ ಸರಾಸರಿಯಲ್ಲಿ 800 ರಿಂದ 1000  ಪಾಸಿಟಿವ್‌ ಪ್ರಕರಣಗಳು‌ ಹಾಗೂ ನಿತ್ಯ 8ರಿಂದ 10 ಮಂದಿ ಸಾವನ್ನಪ್ಪುತ್ತಿದ್ದರು.

ಈ ಪ್ರಮಾಣದ ಕೊರೋನಾ ಹರುಡುವಿಕೆಯನ್ನ ಕಂಡ ಸರ್ಕಾರ ಕೊರೋನಾ ಸಂದರ್ಭದಲ್ಲಿ ಅದ್ದೂರಿ ದಸರಾ ಬೇಡ ಎಂದು ನಿರ್ಧರಿಸಿ ಸರಳ ದಸರಾ ಆಚರಿಸಲು ಸೂಚನೆ ನೀಡಿತ್ತು. ದಸರಾದ ಸಂದರ್ಭದಲ್ಲಿ ಕೊರೋನಾ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದ ತಜ್ಞರಿಗೆ ಶಾಕ್ ಆಗುವಂತೆ ವರದಿಯೊಂದು ಇಂದು  ಬಿಡುಗಡೆಯಾಗಿದೆ. ಮೈಸೂರಿನಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಗಣನೀಯ ಪ್ರಮಾಣದಲ್ಲಿ ಕೊರೋನಾ ಹರುಡುವಿಕೆ ಹಾಗೂ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಕಡಿಮೆಯಾಗಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ (16 ರಿಂದ 22)ಶೇ. 20.01 ಇದ್ದ ಪಾಸಿಟಿವ್ ಪ್ರಮಾಣ ಅಕ್ಟೋಬರ್‌ ತಿಂಗಳಿನಲ್ಲಿ (14 ರಿಂದ 19) ಶೇ. 7.08ಕ್ಕೆ ಇಳಿಕೆಯಾಗಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ. 2.05ರಷ್ಟು ಇದ್ದ ಸಾವಿನ ಪ್ರಮಾಣ ಅಕ್ಟೋಬರ್‌ ತಿಂಗಳಿನಲ್ಲಿ ಶೇ. 1.01 ರಷ್ಟು ಇಳಿಕೆಯಾಗಿದೆ. ಮೈಸೂರಿನಲ್ಲಿ  ಸೆಪ್ಟೆಂಬರ್‌ ತಿಂಗಳಿನಲ್ಲಿ ಪ್ರತಿ ನಿತ್ಯ 2500 ಕೊರೋನಾ ಟೆಸ್ಟ್‌ ನಡೆಯುತ್ತಿತ್ತು. ಅದು ಅಕ್ಟೋಬರ್‌ ತಿಂಗಳಿನಲ್ಲಿ 4000 ಏರಿಕೆಯಾಗಿದೆ.

ಈ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, 'ಜಿಲ್ಲೆಯಲ್ಲಿ ಕಡಿಮೆ ಕೋವಿಡ್ ಪರೀಕ್ಷೆ ಮತ್ತು ಆಮ್ಲಜನಕ ಹಾಸಿಗೆಗಳ ಲಭ್ಯತೆಯು ಒಂದು ಪ್ರಮುಖ ಕಳವಳವಾಗಿತ್ತು. ನಾನು ಚಾರ್ಜ್ ತೆಗೆದುಕೊಂಡ ಬಳಿಕ ಈ ಬಗ್ಗೆ ಗಮನ ಹರಿಸಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಗುರಿ  ಹೊಂದಿದೆವು, ಇದೇ ಕಾರಣಕ್ಕೆ ಜಿಲ್ಲೆಯನ್ನು ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಳ ಮಾಡಿದೆವು. ಉತ್ತಮ ಸಮನ್ವಯಕ್ಕಾಗಿ ನಗರದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು ಮತ್ತು ಎಲ್ಲರೊಂದಿಗೆ ದೈನಂದಿನ ಪರಿಶೀಲನೆ ನಡೆಸಲಾಯಿತು. ಮೊದಲ ಎರಡು ವಾರಗಳಲ್ಲಿ ಸಾಕಷ್ಟು ಶ್ರಮವಹಿಸಲಾಗಿದೆ,  ಅದು ಈಗ ಫಲಿತಾಂಶಗಳನ್ನು ನೀಡಿದೆ. ನಾವು ಇದನ್ನು ಮುಂದುವರೆಸುತ್ತೇವೆ ಎಂದು ಹೇಳಿದರು. 

ಅಂತೆಯೇ ದಸರಾ ನಿಮಿತ್ತ ನಗರಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ನಮ್ಮ ಕೋವಿಡ್ ನಿರ್ವಹಣೆ ಮೇಲೆ ಒತ್ತಡ ಬೀರದಂತೆ ಗಮನ ಹರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com