ಬಿಬಿಎಂಪಿ ಮಾರ್ಷಲ್ ಗಳಿಂದ ವರ್ತೂರು ಕೆರೆಯಲ್ಲಿ ಸಿಲುಕಿದ್ದ ರೈತನ ರಕ್ಷಣೆ

ವರ್ತೂರು ಕೆರೆಯಲ್ಲಿ ಸಿಲುಕಿಕೊಂಡಿದ್ದ ರೈತನೊಬ್ಬನನ್ನು ಬಿಬಿಎಂಪಿ ಮಾರ್ಷಲ್ ಗಳು ಗುರುವಾರ ರಕ್ಷಣೆ ಮಾಡಿದ್ದಾರೆ.
ರೈತನನ್ನು ರಕ್ಷಣೆ ಮಾಡಿದ ಮಾರ್ಷಲ್ ಗಳು ಹಾಗೂ ಪೊಲೀಸರು
ರೈತನನ್ನು ರಕ್ಷಣೆ ಮಾಡಿದ ಮಾರ್ಷಲ್ ಗಳು ಹಾಗೂ ಪೊಲೀಸರು

ಬೆಂಗಳೂರು: ವರ್ತೂರು ಕೆರೆಯಲ್ಲಿ ಸಿಲುಕಿಕೊಂಡಿದ್ದ ರೈತನೊಬ್ಬನನ್ನು ಬಿಬಿಎಂಪಿ ಮಾರ್ಷಲ್ ಗಳು ಗುರುವಾರ ರಕ್ಷಣೆ ಮಾಡಿದ್ದಾರೆ. 

ಶ್ರೀನಿವಾಸ್ (43) ರಕ್ಷಿಸಲ್ಪಟ್ಟ ರೈತ. ಬಾಲೆಗೆರೆ ನಿವಾಸಿಯಾಗಿರುವ ಶ್ರೀನಿವಾಸ್ ಅವರು, ಹುಲ್ಲು ತಿನ್ನಲು ಬಿಟ್ಟಿದ್ದ ಜಾನುವಾರುಗಳನ್ನು ಕರೆದುಕೊಂಡು ಬರಲು ಸಂಜೆ 4 ಗಂಟೆ ಸುಮಾರಿಗೆ ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. 

ಅದೃಷ್ಟವಶಾತ್ ಇದೇ ವೇಳೆ ಬಿಬಿಎಂಪಿ ಮಾರ್ಷಲ್ ಗಳು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದು, ಶ್ರೀನಿವಾಸ್ ಅವರ ಧ್ವನಿಯನ್ನು ಕೇಳಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ಕೆಸರಿನಲ್ಲಿ ಸಿಲುಕಿದ್ದ ಶ್ರೀನಿವಾಸ್ ಅವರ ತಲೆ ಮಾತ್ರ ಕಾಣಸಿತುತ್ತಿತ್ತು. ಈಜಿಕೊಂಡು ಹೋಗಿ ಶ್ರೀನಿವಾಸ್ ಅವರ ರಕ್ಷಣೆ ಮಾಡಬಹುದಿತ್ತು. ಆದರೆ, ಆಳವೆಷ್ಟಿದೆ ಎಂಬುದು ತಿಳಿಯುತ್ತಿರಲಿಲ್ಲ. ಮೇಲ್ನೋಟಕ್ಕೆ 2 ಅಡಿ ಇರುವಂತೆ ಕಾಣುತ್ತಿತ್ತು. ಆದರೆ, ಆಳವು 4 ಅಡಿಗಳಷ್ಟಿತ್ತು. ರಕ್ಷಣಾ ಉಪಕರಣಗಳಿಲ್ಲದೆ ರಕ್ಷಣೆ ಮಾಡುವುದು ಕಷ್ಟಕವಾಗಿತ್ತು. ಹೀಗಾಗಿ ಹಗ್ಗವನ್ನು ಬಳಸಿ ನಿಧಾನವಾಗಿ ರಕ್ಷಣೆ ಮಾಡಲಾಯಿತು. ರಕ್ಷಣಾ ಕಾರ್ಯಕ್ಕೆ ಸುಮಾರು 3-4 ಗಂಟೆಗಳ ಸಮಯ ಬೇಕಾಯಿತು ಎಂದು ಮಾರ್ಷಲ್ ಗಳುಮಾಹಿತಿ ನೀಡಿದ್ದಾರೆ. 

ರಕ್ಷಣೆ ಮಾಡಿದ ಕೂಡಲೇ ಶ್ರೀನಿವಾಸ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಬೆಚ್ಚಿಗಿನ ಉಡುಪುಗಳನ್ನು ನೀಡಲಾಗಿದೆ. ಬಳಿಕ ಶ್ರೀನಿವಾಸ್ ಅವರೊಂದಿಗೆ ಮಾತನಾಡಿರುವ ಅಧಿಕಾರಿಗಳು, ಮಳೆಗಾಲವಾಗಿದ್ದರಿಂದ ಕೆರೆಯ ಸುತ್ತಮುತ್ತಲು ಕೆಸರು ಎಲ್ಲಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಕೆರೆ ಸುತ್ತಲೂ ಬೇಲಿ ಹಾಕಿದ್ದರೂ ಕೆಲ ರೈತರು ಬೇಲಿ ದಾಟಿ ಜಾನುವಾರುಗಳು ಹುಲ್ಲು ತಿನಿಸುವ ಸಲುವಾಗಿ ಒಳ ಪ್ರವೇಶಿಸುತ್ತಿದ್ದಾರೆ. ಕೆರೆಯ ಬಳಿ ಆಗಾಗ ಗಸ್ತು ತಿರುಗಲಾಗುತ್ತದೆ. ಮಳೆಗಾಲವಾಗಿರುವುದರಿಂದ ಮತ್ತಷ್ಟು ಜಾಗೃತರಾಗಿರಬೇಕಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com