ಡಾ. ಆರ್.ಕೆ. ಲಕ್ಷ್ಮಣ್ ಜನ್ಮದಿನ: ಮುಖ್ಯಮಂತ್ರಿ ಸ್ಮರಣೆ

ಖ್ಯಾತ ವ್ಯಂಗ್ಯ ಚಿತ್ರಕಾರ ಡಾ.ಆರ್.ಕೆ.ಲಕ್ಷ್ಮಣ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಗೌರವ ಸಲ್ಲಿಸಿದ್ದಾರೆ.

Published: 24th October 2020 11:04 AM  |   Last Updated: 24th October 2020 12:37 PM   |  A+A-


RK Laxman

ಆರ್ ಕೆ ಲಕ್ಷ್ಮಣ್

Posted By : Srinivasamurthy VN
Source : UNI

ಬೆಂಗಳೂರು: ಖ್ಯಾತ ವ್ಯಂಗ್ಯ ಚಿತ್ರಕಾರ ಡಾ.ಆರ್.ಕೆ.ಲಕ್ಷ್ಮಣ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಗೌರವ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತದ ಖ್ಯಾತ ವ್ಯಂಗ್ಯಚಿತ್ರಕಾರ, ಪದ್ಮವಿಭೂಷಣ ದಿವಂಗತ ಡಾ ಆರ್.ಕೆ.ಲಕ್ಷ್ಮಣ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಸಮಕಾಲೀನ ವಿದ್ಯಮಾನಗಳಿಗೆ ವ್ಯಂಗ್ಯಚಿತ್ರ ಕಲೆ ಮೂಲಕ ಹಾಸ್ಯ, ವಿಡಂಬನೆಯ ಸಮರ್ಥ ವ್ಯಾಖ್ಯೆಯ ರೂಪ ನೀಡಿದ್ದ  ಆರ್.ಕೆ.ಲಕ್ಮ್ಜಣ್ ಅವರ ಸಾಧನೆ ಅದ್ವಿತೀಯವಾದದ್ದು ಎಂದು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ರೇಖೆಗಳ ಮೂಲಕವೇ 'ಕಾಮನ್ ಮ್ಯಾನ್' ಎಂಬ ಅದ್ಭುತ ವ್ಯಕ್ತಿತ್ವ ಕಟ್ಟಿಕೊಟ್ಟ ಭಾರತದ ಶ್ರೇಷ್ಠ ವ್ಯಂಗ್ಯ ಚಿತ್ರಕಾರ, ಪದ್ಮವಿಭೂಷಣ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ದಿವಂಗತ ಆರ್ ಕೆ‌ ಲಕ್ಷ್ಮಣ್ ಅವರ ಜನ್ಮದಿನದಂದು, ನಮನಗಳನ್ನು ಸಲ್ಲಿಸೋಣ.  ಯುವ ಪೀಳಿಗೆಗೆ ಅವರ ರೇಖಾಚಿತ್ರಗಳು ಹೊಂದಿದ್ದ ತೀವ್ರತೆಯ ಪರಿಚಯ ಮಾಡಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp