ಬೆಂಗಳೂರು: ಪಾಕ್ ಮಾದರಿ ಧ್ವಜ ಹಾಕಿದ್ದ ಕಾರಿನ ಮಾಲೀಕನಿಗೆ ಬೆವರಿಳಿಸಿದ ಟ್ರಾಫಿಕ್ ಪೊಲೀಸರು, ವಿಡಿಯೋ!

ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದ ಕಾರೊಂದನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸರು ತಡೆದಿದ್ದಲ್ಲದೆ ಮಾಲೀಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 
ಬೆಂಗಳೂರು ಸಂಚಾರಿ ಪೊಲೀಸರು
ಬೆಂಗಳೂರು ಸಂಚಾರಿ ಪೊಲೀಸರು

ಬೆಂಗಳೂರು: ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದ ಕಾರೊಂದನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸರು ತಡೆದಿದ್ದಲ್ಲದೆ ಮಾಲೀಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಕಾರಣ ಪಾಕಿಸ್ತಾನ ಮಾದರಿಯ ಧ್ವಜವನ್ನು ಕಾರಿನ ಮುಂಭಾಗಕ್ಕೆ ಹಾಕಿಕೊಂಡು ಬರುತ್ತಿದ್ದರು. ಇದನ್ನು ಕಂಡ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಕಾರನ್ನು ತಡೆದಿದ್ದಾರೆ. ನಂತರ ಮಾಲೀಕನಿಗೆ ಕ್ಲಾಸ್ ತೆಗೆದುಕೊಂಡಿದ್ದಲ್ಲದೆ ಭಾರತದ ಧ್ವಜವನ್ನು ಕಾರಿನ ಮುಂಭಾಗದಲ್ಲಿ ಅಳವಡಿಸಿ ಹೋಗುವಂತೆ ಸೂಚಿಸಿದ್ದಾರೆ. 

ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರು ಮಾಲೀಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನು ಪೊಲೀಸರ ಕಾರ್ಯಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಶೋಭನಾ ಗಣೇಶನ್ ಎಂಬುವರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com