ವಿವಿಧ ವಿಜ್ಞಾನ ಕೋರ್ಸ್‌ಗಳ ಪದವೀಧರರು ಕೂಡ 6 ರಿಂದ 8ನೇ ತರಗತಿಗಳಿಗೆ ಪಾಠ ಮಾಡಬಹುದು!

ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದಂತೆ ವಿವಿಧ ವಿಜ್ಞಾನ ಕೋರ್ಸ್‌ಗಳ ಪದವೀಧರರು ಈಗ ಸರ್ಕಾರಿ ಶಾಲೆಗಳಲ್ಲಿ 6-8 ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿಜ್ಞಾನವನ್ನು ಕಲಿಸಲು ಅರ್ಹರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದಂತೆ ವಿವಿಧ ವಿಜ್ಞಾನ ಕೋರ್ಸ್‌ಗಳ ಪದವೀಧರರು ಈಗ ಸರ್ಕಾರಿ ಶಾಲೆಗಳಲ್ಲಿ 6-8 ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿಜ್ಞಾನವನ್ನು ಕಲಿಸಲು ಅರ್ಹರಾಗಿದ್ದಾರೆ.

ಸೆಪ್ಟಂಬರ್ 7ರವರೆಗೆ ಗಣಿತ, ಭೌತಶಾಸ್ತ್ರ, ಮತ್ತು ರಸಾಯನ ಶಾಸ್ತ್ರ ಪದವೀದರರು ಮಾತ್ರ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ನಿರ್ವಹಿಸಬಹುದಾಗಿತ್ತು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 2015ರಲ್ಲಿ ಹೊರಡಿಸಿದ ಸುತ್ತೋಲೆಯಂತೆ ಈ ನಿಯಮ ಜಾರಿಯಲ್ಲಿತ್ತು.

ಹೀಗಾಗಿ ವಿಜ್ಞಾನದ ಇತರ ವಿಷಯಗಳಾದ ಜೀವಶಾಸ್ತ್ರ, ರೇಷ್ಮೆ ಹುಳು ಸಾಕಣೆ, ಮತ್ತು ಪರಿಸರ ವಿಜ್ಞಾನ ಗಳಲ್ಲಿ ಪದವಿ ಪಡೆದವರಿಗೆ ಇದರಿಂದ ಹಿನ್ನಡೆಯಾಗಿತ್ತು,  ಆದರೆ ಈಗ ಅವರು ಕೂಡ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅರ್ಹರಾಗಿದ್ದಾರೆ.

ಕೇವಲ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಪದವೀದರರಿಗೆ ಅವಕಾಶ ನೀಡುತ್ತಿದ್ದರಿಂದ ಸರ್ಕಾರಿ ಶಾಲೆಗಳಲ್ಲಿ  ವಿಜ್ಞಾನ ಶಿಕ್ಷಕರ ಕೊರತೆ ಎದುರಾಗಿತ್ತು. 

2017 ರಲ್ಲಿ, ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ 10,000 ಶಿಕ್ಷಕರನ್ನು ನೇಮಿಸಲು ಪ್ರಯತ್ನಿಸಿದರೂ, ಕೇವಲ 3,000 ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಯಿತು.

2019 ರಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ 10,655 ಹುದ್ದೆಗಳಿಗೆ ಉದ್ಯೋಗಾವಕಾಶಗಳಿಗೆ ಜಾಹೀರಾತು ನೀಡಿತು, ಅದು 60,000 ಅರ್ಜಿಗಳು ಬಂದಿದ್ದವು.ಅದರಲ್ಲಿ 14,000 ಮಂದಿ ಅರ್ಹರಾಗಿದ್ದರು ಮತ್ತು 2,700 ಮಂದಿಯನ್ನು ನೇಮಿಸಿಕೊಳ್ಳಲಾಯಿತು.

ಇಲಾಖೆಯು 20,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿದ್ದು, ಅದರಲ್ಲಿ ಬಹುಪಾಲು ವಿಜ್ಞಾನ ಶಿಕ್ಷಕರ ಹುದ್ದೆಗಳಿವೆ, ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ನೇಮಕಾತಿ ಮಾನದಂಡಗಳಲ್ಲಿ ತಿದ್ದುಪಡಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರವನ್ನು ಸಂಪರ್ಕಿಸಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ತರಗತಿಗಳಿಗೆ ಹೆಚ್ಚುವರಿ ಕೊಠಡಿಗಳನ್ನು ತೆರೆಯುವಂತೆ ಕೋರಿದೆ. 
ಈಗ ಸೆಪ್ಟಂಬರ್ 7ರಂದು ಸರ್ಕಾರದ ಆದೇಶದಂತೆ ಶಿಕ್ಷಕರಿಗೆ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲಾಗಿದೆ. ಹೀಗಾಗಿ ಹೆಚ್ಚಿನ ಮಂದಿ ಅರ್ಜಿ ಸಲ್ಲಿಸಬಹುದಾಗಿದೆ.

ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಿಕ್ಷಕರನ್ನು ನೇಮಕ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com