ಮೈಸೂರಿನಲ್ಲಿ ಪ್ಲಾಸ್ಮಾ ತೆಗೆಯುವ ಮೊಟ್ಟ ಮೊದಲ ಘಟಕ ಸ್ಥಾಪನೆ

ಕೊರೋನಾ ರೋಗದಿಂದ ಗಂಭೀರವಾಗಿ ಆರೋಗ್ಯ ಸ್ಥಿತಿಯಲ್ಲಿರುವ ಮೈಸೂರಿನ ರೋಗಿಗಳಿಗೆ ಹೊಸದೊಂದು ಭರವಸೆ ಸಿಕ್ಕಿದೆ, ಪ್ಲಾಸ್ಮಾ ತೆಗೆುವ ಹೊಸ ಯಂತ್ರವನ್ನು ಅಳವಡಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೊರೋನಾ ರೋಗದಿಂದ ಗಂಭೀರವಾಗಿ ಆರೋಗ್ಯ ಸ್ಥಿತಿಯಲ್ಲಿರುವ ಮೈಸೂರಿನ ರೋಗಿಗಳಿಗೆ ಹೊಸದೊಂದು ಭರವಸೆ ಸಿಕ್ಕಿದೆ, ಪ್ಲಾಸ್ಮಾ ತೆಗೆುವ ಹೊಸ ಯಂತ್ರವನ್ನು ಅಳವಡಿಸಲಾಗಿದೆ.

ಜೀವಾಧಾರ ಎಂಬ ನಗರದ ಬ್ಲಡ್ ಬ್ಯಾಂಕ್ ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗಿದ್ದು ಅದನ್ನು ಉದ್ಘಾಟಿಸಲಾಗಿದೆ.  ಇದರಿಂದ ಒಂದೇ ದಿನ ಐದರಿಂದ ಆರು ಮಂದಿಯಿಂದ ಪ್ಲಾಸ್ಮಾ ತೆಗೆಯಬಹುದಾಗಿದೆ.

ಜೀವಕೋಶವನ್ನು ಬೇರ್ಪಡಿಸುವ ಯಂತ್ರವನ್ನು ಬಳಸಿಕೊಂಡು ಪ್ಲಾಸ್ಮಾವನ್ನು ಸಂಗ್ರಹಿಸುವ ಅತ್ಯಾಧುನಿಕ ಯಂತ್ರ ಇದಾಗಿದೆ. ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಜೀವಾಧಾರ ಬ್ಲಡ್ ಬ್ಯಾಂಕ್ ಗೆ ಪ್ಲಾಸ್ಮಾ ಘಟಕಕ್ಕೆ ಭಾರೀ ಬೇಡಿಕೆ ಬಂದಿದೆ.

ಇದೇ ಮೊಟ್ಟ ಮೊದಲ ಪ್ಲಾಸ್ಮಾ ಯಂತ್ರ ಮೈಸೂರಿನಲ್ಲಿ ಸ್ಥಾಪಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿದೆ. ಇದನ್ನು 16-17 ಲಕ್ಷ ರು ನೀಡಿ ಖರೀದಿಸಲಾಗಿದೆ. ಬಿಜೆಪಿ ನಗರ ಅಧ್ಯಕ್ಷ ಶ್ರೀವತ್ಸ ಮತ್ತಿತರರು ಇದನ್ನು ಉದ್ಘಾಟಿಸಿದರು.

ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳಿಂದ ಸುಮಾರು 350-400 ಮಿಲಿ ರಕ್ತ ತೆಗೆಯಬೇಕಾಗಿತ್ತು, ಆದರೆ ಈ ಯಂತ್ರದಿಂದ 150 ರಿಂದ 200 ಎಮ್ ಎಲ್ ಪ್ಲಾಸ್ಮಾ ಮಾತ್ರ ಬರುತ್ತಿತ್ತು. ಆದರೆ ಹೊಸ ಯಂತ್ರದಿಂದ ಪ್ಲಾಸ್ಮಾ ದಾನ ನೀಡುವವರಿಂದ ನೇರವಾಗಿ 500 ಎಂಎಲ್  ಪ್ಲಾಸ್ಮಾ ತೆಗೆಯಬಹುದಾಗಿದೆ, ಇದರ ನಂತರ 90 ದಿನಗಳ ವರೆಗೆ ಮತ್ತೆ ದಾನಿಗಳು ದಾನ ಮಾಡುವ ಆಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com