ಬೆಂಗಳೂರಿನ ಜೆಪಿ ನಗರದಲ್ಲಿ 75 ವರ್ಷದ ಮಹಿಳೆ, ಮಗನ ಸ್ನೇಹಿತನ ಭೀಕರ ಹತ್ಯೆ!

ಜೆಪಿ ನಗರ 7 ನೇ ಹಂತದ ಪುಟ್ಟೇನಹಳ್ಳಿಯಲ್ಲಿ75 ವರ್ಷದ ಮಹಿಳೆ ಮತ್ತು ಆಕೆಯ ಮಗನ ಸ್ನೇಹಿತನೊಬ್ಬನನ್ನು ಭೀಕರ ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೆಪಿ ನಗರ 7 ನೇ ಹಂತದ ಪುಟ್ಟೇನಹಳ್ಳಿಯಲ್ಲಿ75 ವರ್ಷದ ಮಹಿಳೆ ಮತ್ತು ಆಕೆಯ ಮಗನ ಸ್ನೇಹಿತನೊಬ್ಬನನ್ನು ಭೀಕರ ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ. ಲ್ಯಾಪ್‌ಟಾಪ್, ಚಿನ್ನದ ಬೆಲೆಬಾಳುವ ವಸ್ತುಗಳು ಮತ್ತು ಸಿಸಿಟಿವಿ ಕ್ಯಾಮೆರಾಗೆ ಜೋಡಿಸಲಾದ ಡಿವಿಆರ್‌ನೊಂದಿಗೆ ಪರಾರಿಯಾಗಿರುವ ಕೊಲೆಗಾರ ಮಹಿಳೆಗೆ ಪರಿಚಯಸ್ತರಾಗಿರುವಂತೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮನೆಯ ಒಡೆಯರಾದ ಪಶ್ಚಿಮ ಬಂಗಾಳದ ಮಮತಾ ಬಸು, ಒಡಿಶಾ ಮೂಲದ ದಬ್ರಾತ್ ಬೆಹ್ರಾ (41) ಎಂದು ಗುರುತಿಸಲಾಗಿದೆ.

ಬೆಹ್ರಾ ಇತ್ತೀಚೆಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನಗರದ ಎಂಎನ್‌ಸಿ ಕಂಪನಿಗೆ ಸೇರಿದ್ದರು. ಅಲ್ಲದೆ ಕೇವಲ 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಕೋಣನಕುಂಟೆ ವಾರ್ಡ್‌ನ ಸಂಪ್ರುಪ್ತಿ ಲೇಔಟ್ ನಲ್ಲಿ ವಾಸವಾಗಿದ್ದರು. ಮಮತಾ ಅವರ ಪುತ್ರ ದೇವದೀಪ್ ಬಸು ಹತ್ತಿರದಲ್ಲೇ ವಾಸಿಸುತ್ತಿದ್ದು, ಬೆಹ್ರಾ ಅವರ ಸಹಪಾಠಿಯಾಗಿದ್ದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದಂತೆ ಮಧ್ಯರಾತ್ರಿ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯೊಳಗೆ ಇವರಿಬ್ಬರು ಸಾವನ್ನಪ್ಪಿದ್ದಾರೆ. ಹಾಸಿಗೆಯ ಮೇಲೆ ಬಸು ಶವ ಪತ್ತೆಯಾಗಿದ್ದು, ಬೆಹ್ರಾ ಅವರ ಶವ ಮತ್ತೊಂದು ಕೋಣೆಯ ನೆಲದಲ್ಲಿ ಪತ್ತೆಯಾಗಿದೆ. ಇಬ್ಬರನ್ನೂ ಇರಿದು ಕೊಲ್ಲಲಾಯಿತು ಮತ್ತು ಅವರ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಬೆಳಿಗ್ಗೆ ಮನೆಗೆಲಸದವರು ಬಂದು ಶವಗಳನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ ಪೊಲೀಸರನ್ನು ಎಚ್ಚರಿಸಿದ್ದಾರೆ. ಮನೆ ದರೋಡೆ ಮಾಡಿರುವುದು ಮತ್ತು ಚಿನ್ನ ಮತ್ತು ನಗದು ಕಾಣೆಯಾಗಿರುವುದು ಪತ್ತೆಯಾಗಿದೆ. . ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಮೇಲ್ವಿಚಾರಣೆ ನಡೆಸಿದರು.

ದೇವದೀಪ್ ಬುಧವಾರ ತನ್ನ ತಾಯಿಯ ಮನೆಗೆ ಭೇಟಿ ನೀಡಿದ್ದಾನೆ ಮತ್ತು ಊಟದ ಬಳಿಕ ತನ್ನ ಮನೆಗೆ ಮರಳಿದ್ದಾನೆ ಎಂದು ಪೊಲೀಸರಿಗೆ ತಿಳಿದಿದೆ. ಸಾಮಾನ್ಯವಾಗಿ ಮನೆಯ ಹೊರಗೆ ಸ್ಥಾಪಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂದರ್ಶಕರ ಗುರುತು ದೃಢವಾಗುತ್ತದೆ. ಆ ಬಳಿಕವೇ ಮಮತಾ ಬಾಗಿಲು ತೆರೆಯುತ್ತಿದ್ದದ್ದು.ಎಂದು ದೇವದೀಪ್ ಪೊಲೀಸರಿಗೆ ತಿಳಿಸಿದ್ದಾರೆ. ಆದ ಕಾರಣ ಆರೋಪಿಗಳು ಮಮತಾ ಅವರಿಗೆ ಪರಿಚಿತರೇ ಆಗಿರಬೇಕು. ಇದೀಗ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com